'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್ ಜೋಡಿಯಾಗಿ ನಟಿಸೋದು ಯಾರು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟ ಅನಿರುದ್ಧ್ ಜತ್ಕರ್ ಈಗ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅನಿರುದ್ಧ್‌ಗೆ ಜೋಡಿ ಆಗಿ ಯಾರು ನಟಿಸುತ್ತಿದ್ದಾರೆ ಎಂದು ನೋಡೋಣ ಬನ್ನಿ.

ಅನಿರುದ್ಧ್ ಅವರು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿದ್ದರು. ಆರ್ಯವರ್ಧನ್ ಪಾತ್ರದಲ್ಲಿ ಮಿಂಚಿದ್ದರು. ಆದರೆ ತಂಡದ ಜೊತೆಗೆ ಕಿರಿಕ್ ಆದ ಕಾರಣ ಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದರು.

ಆಗ ಪ್ರೇಕ್ಷಕರಿಗೆ ಅನಿರುದ್ಧ್ ಅವರನ್ನು ಹೊರತು ಪಡಿಸಿ ಆರ್ಯವರ್ಧನ್ ಆಗಿ ಮತ್ಯಾವ ನಟರನ್ನೂ ನೋಡಲು ಬಯಸಿರಲಿಲ್ಲ. ಅನಿರುದ್ಧ್ ಅವರೇ ನಟಿಸಬೇಕು ಎಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.

ಶೀಘ್ರದಲ್ಲೇ ಧಾರಾವಾಹಿ ಪ್ರಸಾರ

ಶೀಘ್ರದಲ್ಲೇ ಧಾರಾವಾಹಿ ಪ್ರಸಾರ

ಇದೀಗ ಎಸ್. ನಾರಾಯಣ್ ನಿರ್ದೇಶನದ 'ಸೂರ್ಯವಂಶ' ಎಂಬ ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿದ್ದಾರೆ. ಈ ಬಗ್ಗೆ ಕಳೆದ ತಿಂಗಳೇ ಅನಿರುದ್ಧ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅನಿರುದ್ಧ್ ಈಗ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದನ್ನು ತಿಳಿದ ಅಭಿಮಾನಿಗಳು ಖುಷಿ ಪಟ್ಟಿದ್ದರು. ಉದಯ ಟಿವಿಯಲ್ಲಿ 'ಸೂರ್ಯವಂಶ' ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಮುಖ್ಯ ಪಾತ್ರದಲ್ಲಿ ಅನಿರುದ್ಧ್ ಜತ್ಕರ್ ಬಣ್ಣ ಹಚ್ಚಿದ್ದಾರೆ. ಇದರಲ್ಲೂ ಉದ್ಯಮಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಯಕಿ ಯಾರು ಗೊತ್ತಾ..?

ನಾಯಕಿ ಯಾರು ಗೊತ್ತಾ..?

ಇನ್ನು ಹಲವು ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರನ್ನು ನಾಯಕರಾಗಿದ್ದ 'ಸೂರ್ಯವಂಶ' ಸಿನಿಮಾವನ್ನು ಮಾಡಿ ಎಸ್. ನಾರಾಯಣ್ ಸಕ್ಸಸ್ ಕಂಡಿದ್ದರು. ಇದೀಗ ಅದೇ ಹೆಸರಿನಲ್ಲಿ ವಿಷ್ಣುವರ್ಧನ್ ಅವರ ಅಳಿಯನ ಜೊತೆಗೆ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಎಸ್. ನಾರಾಯಣ್ ಕೂಡ ನಟಿಸುತ್ತಿದ್ದಾರೆ. ಇನ್ನು ಅನಿರುದ್ಧ್ ಅವರ ಜೋಡಿಯಾಗಿ ಕನ್ನಡದ ಕಿರುತೆರೆ ನಟಿ ಹಲವು ವರ್ಷಗಳ ಬಳಿಕ ವಾಪಸ್ ಆಗಮಿಸುತ್ತಿದ್ದಾರೆ. ಅದು ಯಾರು ಎಂದು ತಿಳಿಯಲು ಮುಂದೆ ಓದಿ.

ಹಲವರ ನೆಚ್ಚಿನ ಪಲ್ಲವಿ ಗೌಡ

ಹಲವರ ನೆಚ್ಚಿನ ಪಲ್ಲವಿ ಗೌಡ

ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಪಲ್ಲವಿ ಗೌಡ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದವರು. ಈಗ ಕನ್ನಡ ಮಾತ್ರವಲ್ಲದೇ, ತೆಲುಗು, ಮಳಯಾಳಂನಲ್ಲೂ ನಟಿಸಿದ್ದು, ತ್ರಿಭಾಷಾ ನಟಿಯಾಗಿದ್ದಾರೆ. ಸದ್ಯ ತೆಲುಗು ಕಿರುತೆರೆಯಲ್ಲಿರುವ ಪಲ್ಲವಿ ಗೌಡ ಈಗ 'ಸೂರ್ಯವಂಶ' ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸೇವಂತಿ', 'ಜೋಡಿಹಕ್ಕಿ', 'ಪರಿಣಯ', 'ಸಾವಿತ್ರಿ', 'ಮನೆಯೊಂದು ಮೂರು ಬಾಗಿಲು' ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ತೆಲುಗಿನಲ್ಲಿ 'ಚಂದ್ರರಾಗಂ' ಎಂಬ ಧಾರಾವಾಹಿ ಮೂಲಕ ಹಿಟ್ ಆಗಿದ್ದರು. 2010 ರಿಂದ ಪಲ್ಲವಿ ಗೌಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಕಾತುರರಾಗಿರುವ ಅಭಿಮಾನಿಗಳು

ಕಾತುರರಾಗಿರುವ ಅಭಿಮಾನಿಗಳು

ಇನ್ನು ನಾಯಕಿ ಪಾತ್ರದಲ್ಲಿ ಅತಿ ಹೆಚ್ಚಾಗಿ ನಟಿಸಿರುವ ಪಲ್ಲವಿ ಗೌಡ 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದರು. ಹಲವು ವರ್ಷಗಳ ಬಳಿಕ ಪಲ್ಲವಿ ಗೌಡ ಅವರು ಪುನಃ ಕನ್ನಡ ಕಿರುತೆರೆಗೆ ವಾಪಸ್ ಆಗಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಜೋಡಿ ಫೇಮಸ್ ಆದಂತೆಯೇ ಈಗ ಸೂರ್ಯವಂಶ ಧಾರಾವಾಹಿಯಲ್ಲಿ ಅನಿರುದ್ಧ್ ಮತ್ತು ಪಲ್ಲವಿ ಗೌಡ ಜೋಡಿ ಮಿಂಚುವುದು ಪಕ್ಕಾ ಆಗಿದೆ. ಧಾರಾವಾಹಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದು, ಯಾವಾಗ ಪ್ರಸಾರ ಕಾಣುತ್ತದೋ ಇನ್ನು ಮಾಹಿತಿ ಇಲ್ಲ.

More from Filmibeat

English summary
Pallavi Gowda To Play Female Lead in Anirudh Jatkar Starrer Sooryavamsha serial. Kala Samrat S. Narayan is Directing This serial. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X