ಮುರಿದು ಬಿತ್ತು 22 ವರ್ಷಗಳ ದಾಂಪತ್ಯ, ಹೊಂದಾಣಿಕೆ ಸಮಸ್ಯೆಯೆಂದು ವಿಚ್ಛೇದನ ಘೋಷಿಸಿದ ಖ್ಯಾತ ನಟಿ

ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ ಆ ನಂತರ ಏಕಾಏಕಿ ಡಿವೋರ್ಸ್ ಘೋಷಿಸುತ್ತಾರೆ.

ಇದಕ್ಕೆ ಪಲ್ಲವಿ ರಾವ್ ಸದ್ಯದ ಉದಾಹರಣೆ. ಹೌದು.. ಪಲ್ಲವಿ ರಾವ್.. ಹಿಂದಿ ಕಿರುತೆರೆಯ ಖ್ಯಾತ ಹೆಸರು. 'ಶುಭಾರಂಭ್'.. 'ಯೇ ಜುಕೀ ಜುಕೀ ಸೀ ನಜರ್'.. 'ಕಯಾಮತ್ ಸೇ ಕಯಾಮಾತ್'.. 'ದಿಯಾ ಔರ್ ಭಾತಿ ಹಮ್'..'ಮೇ ತೇರಿ ಲಕ್ಷ್ಮಿ ಆಂಗನ್ ಕೀ'.. 'ಪಾಂಡ್ಯ ಸ್ಟೋರ್' ಹೀಗೆ ಹಲವು ಧಾರಾವಾಹಿಗಳ ಮೂಲಕ ಜನ ಮನ ಗೆದ್ದವರು ಇವರು.

Pallavi Rao s 22-Year Marriage Ends Pandya Store Star Announces Divorce

ಇಂಥಾ ಪಲ್ಲವಿ ರಾವ್ 22 ವರ್ಷಗಳ ಹಿಂದೆ ಸೂರಜ್ ರಾವ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ವಿಶೇಷ ಅಂದರೆ ಇವರು ಕೂಡ ನಿರ್ದೇಶಕರೇ. 'ಅದಾಲತ್' ಮತ್ತು ಭಾರತದೆಲ್ಲೆಡೆ ಪ್ರಖ್ಯಾತವಾದ 'ಕ್ಯುಂಕಿ ಸಾಸ್ ಬೀ ಕಭಿ ಬಹು ಥೀ' ಸೇರಿ ಹಲವಾರು ಧಾರಾವಾಹಿಗಳಿಗೆ ಕೆಲಸವನ್ನು ಸೂರಜ್ ರಾವ್ ಮಾಡಿದ್ದಾರೆ.

ಹೀಗೆ ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ಇಬ್ಬರು ಧಾರಾವಾಹಿ ಚಿತ್ರೀಕರಣ ನೆಪದಲ್ಲಿ ಪರಿಚಯವಾಗಿದ್ದರು. ಪರಸ್ಪರ ಪ್ರೀತಿಸಿ ಮದುವೆ ಕೂಡ ಆಗಿದ್ದರು. ಇಬ್ಬರ ಈ ಪ್ರೀತಿಯ ಸಂಕೇತವೆನ್ನುವಂತೆ ಇಬ್ಬರಿಗೆ ಎದೆಯೆತ್ತರಕ್ಕೆ ಬೆಳೆದ 21 ವರ್ಷದ ಮಗಳಿದ್ದಾಳೆ. 18 ವರ್ಷದ ಮಗ ಕೂಡ ಇದ್ದಾನೆ. ಆದರೂ ಕೂಡ ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿದೆ. ಈ ಹಿನ್ನೆಲೆ.. ಪಲ್ಲವಿ ರಾವ್ ತಮ್ಮ ಪತಿ ಸೂರಜ್ ಅವರಿಂದ ದೂರವಾಗುತ್ತಿರುವುದಾಗಿ ಹೇಳಿದ್ದಾರೆ.

ಈ ಕುರಿತು 'ETimes'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಲ್ಲವಿ ರಾವ್, ಕಳೆದ ಕೆಲ ವರ್ಷಗಳಿಂದ ನಮ್ಮ ನಡುವೆ ಹೊಂದಾಣಿಕೆ ಸಮಸ್ಯೆಯಾಗುತ್ತಿತ್ತು. ಸುಖಾ ಸುಮ್ಮನೆ ಕಾರಣ ಇಲ್ಲದೇ ಇಬ್ಬರ ಮಧ್ಯೆ ಜಗಳ ಶುರುವಾಗುತ್ತಿತ್ತು. ಈ ಹಿನ್ನೆಲೆ.. ದಿನನಿತ್ಯ ಜಗಳ ಮಾಡುತ್ತಾ ಕಾಲ ಕಳೆಯುವ ಬದಲು ಶಾಂತಿಯುತವಾಗಿ ಬದುಕುವ ತೀರ್ಮಾನವನ್ನು ಇಬ್ಬರು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಮುಂದುವರೆದು ವಿಚ್ಛೇದನದ ನಿರ್ಧಾರ ನಮ್ಮ ಇಬ್ಬರಿಗೆ ಕೂಡ ಸುಲಭ ಆಗಿರಲಿಲ್ಲ ಯಾಕೆಂದರೆ ನಮಗೆ 21 ವರ್ಷದ ಮಗಳಿದ್ದಾಳೆ, 18 ವರ್ಷದ ಮಗ ಇದ್ದಾನೆ, ಹೀಗಾಗಿ ತುಂಬಾ ಆಲೋಚನೆಯನ್ನು ಮಾಡಿ ಕೊನೆಗೂ ದೂರವಾಗುವ ನಿರ್ಧಾರವನ್ನು ನಾವು ಮಾಡಿದ್ದೇವೆ ಎಂದು ಕೂಡ ಹೇಳಿದ್ದಾರೆ.

pallavi-raos-22-year-marriage-ends-pandya-store-star-announces-divorce

ಇನ್ನುಳಿದಂತೆ ಪಲ್ಲವಿ ರಾವ್ 'ಯಹಾನ್ ಮೇ ಘರ್ ಘರ್ ಖೇಲಿ' ಎಂಬ ಹಿಂದಿ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದರು. ಇಲ್ಲಿಂದಾಚೆ ನಾವು ಮೇಲೆ ಉಲ್ಲೇಖಿಸುರುವಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಪಲ್ಲವಿ 'ಫಿಯರ್ ಫೈಲ್ಸ್' ಮತ್ತು 'ಸಾವಧಾನ್ ಇಂಡಿಯಾ'ದ ಕೆಲವು ಸಂಚಿಕೆಗಳಲ್ಲಿ ಕೂಡ ಕಾಣಿಸಿಕೊಂಡರು. ಕಿರುತೆರೆಯಲ್ಲಿ ಅನೇಕರ ನೆಚ್ಚಿನ ವಿಲನ್ ಕೂಡ ಆದರು.

ಸದ್ಯ ಪಲ್ಲವಿ ರಾವ್ ಮತ್ತು ಸೂರಜ್ ರಾವ್ ಕಳೆದ ಎರಡು ವಾರಗಳಿಂದ ದೂರವಾಗಿದ್ದಾರೆ. ಪ್ರತೈಕ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ತಮ್ಮ ವಿಚ್ಚೇದನದ ಕುರಿತು ಸೂರಜ್ ರಾವ್ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಮುಂಬೈನಲ್ಲಿಗ ಹಲವರು ಸೂರಜ್ ರಾವ್ ಅವರ ಸೈಡ್ ಆಫ್ ಸ್ಟೋರಿ ತಿಳಿಯಲು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

More from Filmibeat

English summary
After 22 years, 'Pandya Store' fame Pallavi Rao confirms divorce from husband Suraj Rao, citing compatibility issues. Get the full story here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X