ಟಿವಿಯಲ್ಲಿ ಬರ್ತಿದೆ ಭಟ್ಟರ 'ಪಂಚತಂತ್ರ' ಸಿನಿಮಾ
ಯೋಗರಾಜ್ ಭಟ್ ಹೇಳಿದ ಮೊಲ ಮತ್ತು ಆಮೆಯ ಕಥೆ ಈಗ ಕಿರುತೆರೆಯಲ್ಲಿ ಬರುತ್ತಿದೆ. ಅರ್ಥಾತ್ ಭಟ್ಟರ ನಿರ್ದೇಶನದ 'ಪಂಚತಂತ್ರ' ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತಿದೆ.
29 ಮಾರ್ಚ್ ರಂದು ಬಿಡುಗಡೆಯಾದ ಈ ಸಿನಿಮಾ ಇದೀಗ ಕಿರುತೆರೆಗೆ ಬಂದಿದೆ. ಬಿಡುಗಡೆಯಾದ ಮೂರೇ ತಿಂಗಳಿಗೆ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಸಿನಿಮಾದ ಪ್ರಸಾರದ ಹಕ್ಕನ್ನು ಜೀ ಕನ್ನಡ ವಾಹಿನಿ ತೆಗೆದುಕೊಂಡಿದೆ.

ಚಿತ್ರದ ಪ್ರೊಮೋವನ್ನು ಹಂಚಿಕೊಳ್ಳುವ ಮೂಲಕ ಜೀ ವಾಹಿನಿ ಸಿನಿಮಾದ ಪ್ರಸಾರ ವಿಷಯವನ್ನು ತಿಳಿಸಿದೆ. ಅತಿ ಶೀಘ್ರದಲ್ಲಿಯೇ ಸಿನಿಮಾ ಪ್ರಸಾರ ಆಗಲಿದ್ದು, ಸದ್ಯದಲ್ಲಿಯೇ ದಿನಾಂಕವನ್ನು ತಿಳಿಸಲಿದೆ.
ಯೋಗರಾಜ್ ಭಟ್ ಬಹಳ ವರ್ಷಗಳ ಬಳಿಕ ಹೊಸ ಹುಡುಗರ ಜೊತೆಗೆ ಸಿನಿಮಾ ಮಾಡಿದ್ದರು. ನಟ ವಿಹಾನ್, ಸೋನಾಲ್, ಅಕ್ಷರ ಗೌಡ ಚಿತ್ರದಲ್ಲಿ ನಟಿಸಿದ್ದರು. ರಂಗಾಯಣ ರಘು ನಟನೆ ತುಂಬ ಮಜಾ ನೀಡಿತ್ತು. ಕಾಮಿಡಿಯ ಜೊತೆಗೆ ಕಾರ್ ರೇಸ್ ಕಥೆಯನ್ನು ಭಟ್ಟರು ಹೇಳಿದ್ದರು.
ಪಕ್ಕಾ ಭಟ್ಟರ ಸ್ಟೈಲ್ ಸಿನಿಮಾ ಇದಾಗಿತ್ತು. ಹರಿಕೃಷ್ಣ ಹಾಡುಗಳು ಹಿಟ್ ಆಗಿದ್ದವು. ಬೇರೆ ಬೇರೆ ದೇಶಗಳಲ್ಲಿಯೂ ಸಿನಿಮಾ ಬಿಡುಗಡೆಯಾಗಿತ್ತು. ಎಲ್ಲ ಇದ್ದರೂ ಕೆಲವೊಂದು ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಲಿಲ್ಲ. ಕರ್ನಾಟಕ ಮಾತ್ರವಲ್ಲದೆ.


Click it and Unblock the Notifications











