ಪಂಕಜ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ 'ಬಿಗ್ ಬಾಸ್'
ನಿರ್ದೇಶಕ ಎಸ್ ನಾರಾಯಣ ಪುತ್ರ, ನಟ ಪಂಕಜ್ ಈ ಬಾರಿ 'ಬಿಗ್ ಬಾಸ್' ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಕೊನೆಗೂ ದೊಡ್ಡ ಮನೆಗೆ ಪಂಕಜ್ ಪ್ರವೇಶ ನೀಡಲಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಪಂಕಜ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಟ್ರೋಲ್ ಪೇಜ್ ಗಳಂತು ಪಂಕಜ್ ಕಂಡರೆ ಬಲು ಇಷ್ಟ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪಂಕಜ್ 'ಬಿಗ್ ಬಾಸ್' ಸ್ಪರ್ಧಿ ಎನ್ನುವ ಪೋಸ್ಟ್ ಗಳು ಹರಿದಾಡುತ್ತಿದ್ದವು. ಆದರೆ, ಪಂಕಜ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. 18 ಸ್ಪರ್ಧಿಗಳ ಪೈಕಿ ಪಂಕಜ್ ಗೆ ಸ್ಥಾನ ಸಿಕ್ಕಿಲ್ಲ.
Recommended Video
ಪಂಕಜ್ 'ಬಿಗ್ ಬಾಸ್' ಮನೆಗೆ ಹೋಗದೆ ಇದ್ದರೂ ಅವರ ಬಗ್ಗೆ ಟ್ರೋಲ್ ಗಳು ಆಗುತ್ತಿವೆ. ನಮಗೆ ನಿರಾಸೆ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುತ್ತಿದ್ದಾರೆ. ಮತ್ತೆ ಪಂಕಜ್ ಟ್ರೋಲ್ ಪೇಜ್ ಗಳಿಗೆ ಆಹಾರ ಆಗಿದ್ದಾರೆ.

ಸದ್ಯ, ದರ್ಶನ್ ನಟನೆಯ 'ಒಡೆಯ' ಸಿನಿಮಾದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಈ ಹಿಂದೆ 'ಚೈತ್ರದ ಚಂದ್ರಮ', 'ಚೆಲುವಿನ ಚಿಲಿಪಿಲಿ', 'ದುಷ್ಟ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ 18 ಸ್ಪರ್ಧಿಗಳು
ಹಾಸ್ಯ ನಟ ಕುರಿ ಪ್ರತಾಪ್, ಹಿರಿಯ ಪತ್ರಕರ್ತ ರವಿ ಬೆಳಗೆರೆ, ಹಿರಿಯ ನಟ ಜೈಜಗದೀಶ್, ಹಾಸ್ಯ ನಟ ರಾಜು ತಾಳಿಕೋಟೆ, ಅಗ್ನಿಸಾಕ್ಷಿ ನಟಿ ಪ್ರಿಯಾಂಕಾ, ಸುಜಾತ, ದುನಿಯಾ ರಶ್ಮಿ, ಕಿರುತೆರೆ ನಟಿ ಚಂದನ್, ದೀಪಿಕಾ ದಾಸ್, ಭೂಮಿ ಶೆಟ್ಟಿ, ನಿರೂಪಕಿ ಚ್ರೈತ್ರ, ಚೈತ್ರ ಕೊಟ್ಟೂರ್, ನಟ ಚಂದನ್, ಹರೀಶ್ ರಾಜ್, ಶೈನ್ ಶೆಟ್ಟಿ, ಗುರುಲಿಂಗ ಸ್ವಾಮಿಜಿ, ಡ್ಯಾನ್ಸರ್ ಕಿಶನ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದಾರೆ.


Click it and Unblock the Notifications











