ವಿಡಿಯೋ : ಹೊಸ 'ಪಾಪಾ ಪಾಂಡು' ಧಾರಾವಾಹಿಯ ಪ್ರೋಮೋ ನೋಡಿ
Recommended Video

ಕನ್ನಡ ಕಿರುತೆರೆ ಲೋಕದ ಸೂಪರ್ ಹಿಟ್ ಧಾರಾವಾಹಿ 'ಪಾಪಾ ಪಾಂಡು' ಮತ್ತೆ ಬರುತ್ತಿದೆ. ಹೊಸ ಅವತಾರದೊಂದಿಗೆ ಮತ್ತೆ ಹಳೆ ಪಾಂಡು ವೀಕ್ಷಕರನ್ನು ನಗಿಸಲು ಬರುತ್ತಿದ್ದಾನೆ. ಸದ್ಯ ಕಲರ್ಸ್ ಸೂಪರ್ ವಾಹಿನಿಯ ಟ್ವಿಟ್ಟರ್ ಖಾತೆಯಲ್ಲಿ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ.
15 ವರ್ಷಗಳ ನಂತರ ಮತ್ತೆ ಇದೀಗ 'ಪಾಪಾ ಪಾಂಡು' ಧಾರಾವಾಹಿ ಬರುತ್ತಿದೆ. 15 ವರ್ಷದ ಬಳಿಕ ಆ ಧಾರಾವಾಹಿಯ ಪಾತ್ರಗಳು ಏನಾಗಿರುತ್ತದೆ ಎನ್ನುವುದನ್ನು ಇಟ್ಟುಕೊಂಡು ಕಥೆ ಮಾಡಿದ್ದಾರೆ ಸಿಹಿ ಕಹಿ ಚಂದ್ರು. ಈಗ ಸಹ 'ಪಾಪ ಪಾಂಡು' ಆಗಿ ಚಿದಾನಂದ್ ಹಾಗೂ ಅವರ ಶ್ರೀಮತಿ ಆಗಿ ಶಾಲಿನಿ ಕಾಣಿಸಿಕೊಂಡಿದ್ದಾರೆ. ಪಾಂಡು ಕುಟುಂಬಕ್ಕೆ ಈಗ ಮಗ ಮತ್ತು ಸೊಸೆಯ ಆಗಮನ ಸಹ ಆಗಿದೆ.

ಈ ಬಗ್ಗೆ ಈ ಹಿಂದೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದ ಸಿಹಿ ಕಹಿ ಚಂದ್ರು ''ಮತ್ತೆ 'ಪಾಪಾ ಪಾಂಡು' ಧಾರಾವಾಹಿಯನ್ನು ತರುತ್ತಿದ್ದೇವೆ. ಇದು 'ಪಾಪಾ ಪಾಂಡು' ಸೀಸನ್ 2 ಎಂದು ಹೇಳಬಹುದು. ಧಾರಾವಾಹಿಯ ಬಗ್ಗೆ ತುಂಬ ದೊಡ್ಡ ನಿರೀಕ್ಷೆ ಇರುವ ಕಾರಣ ತುಂಬ ಕಷ್ಟ ಪಟ್ಟು ಕೆಲಸ ಮಾಡಲಾಗುತ್ತಿದೆ'' ಎಂದು ಹೇಳಿದ್ದರು.
ಪಾಪಾ ಪಾಂಡು' ಧಾರಾವಾಹಿ ಆಗ ಈ ಟಿವಿ ಕನ್ನಡದಲ್ಲಿ ಪ್ರಸಾರ ಆಗುತ್ತಿತ್ತು. 'ಧಾರಾವಾಹಿಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದವರನ್ನು ಕೂಡ ದಿನ ಟಿವಿ ಮುಂದೆ ಕೂರಿಸುವಂತೆ ಮಾಡಿದ್ದ ಸೀರಿಯಲ್ ಗಳಲ್ಲಿ 'ಪಾಪ ಪಾಂಡು' ಪ್ರಮುಖವಾಗಿತ್ತು.


Click it and Unblock the Notifications











