For Quick Alerts
  ALLOW NOTIFICATIONS  
  For Daily Alerts

  'ಪಾಪ ಪಾಂಡು' ಜೊತೆ ಡ್ಯೂಪ್ಲಿಕೇಟ್ ನಿವೇದಿತಾ: ಇವ್ರದ್ದು ಬೆಂಕಿ ಹಚ್ಚುವ ಬುದ್ಧಿ.!

  By Harshitha
  |
  ನಿವೇದಿತಾ ಗೌಡ ಏನಾದ್ರು ಪಾಪಾ ಪಾಂಡು ಧಾರಾವಾಹಿಯಲ್ಲಿ ಕಾಣಿಸಿದ್ರಾ..? | Filmibeat Kannada

  'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋ ನೋಡಿದ್ದೀರಾ.? ಈ ಕಾರ್ಯಕ್ರಮವನ್ನ ಬಿಟ್ಟೂ ಬಿಡದೆ ನೋಡಿದ್ರೆ, ನಿಮಗೆ ನಿವೇದಿತಾ ಗೌಡ ಪರಿಚಯ ಖಂಡಿತ ಇದ್ದೇ ಇರುತ್ತೆ.

  ಕನ್ನಡವನ್ನ ಇಂಗ್ಲೀಷ್ ನಂತೆ ಮಾತನಾಡುವ ನಿವೇದಿತಾ ಗೌಡ 'ಬಿಗ್ ಬಾಸ್' ಮನೆಯಲ್ಲಿ 'ಬೇಬಿ ಡಾಲ್' ಅಂತಲೇ ಖ್ಯಾತಿ ಪಡೆದಿದ್ದರು. ಟಾಪ್ 5 ಹಂತದವರೆಗೂ ತಲುಪಿದ್ದ ನಿವೇದಿತಾ ಗೌಡ ಸದ್ಯ ಸೆಲೆಬ್ರಿಟಿ ಆಗಿದ್ದಾರೆ.

  ಅರೇ.. ಈಗ್ಯಾಕೆ ನಿವೇದಿತಾ ಗೌಡ ಬಗ್ಗೆ ಮಾತನಾಡುತ್ತಿದ್ದೇವೆ ಅಂದುಕೊಂಡ್ರಾ.? ನಾವೀಗ ನಿವೇದಿತಾ ಗೌಡರನ್ನ ನೆನಪಿಸಿಕೊಳ್ಳಲು ಕಾರಣ 'ಪಾಪ ಪಾಂಡು' ಧಾರಾವಾಹಿ.

  ಹದಿನೈದು ವರ್ಷಗಳು ಉರುಳಿದ್ಮೇಲೆ, 'ಪಾಪ ಪಾಂಡು' ಮರಳಿ ಕಿರುತೆರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಹಳೇ 'ಪಾಪಾ ಪಾಂಡು'ವಿನ ಮುಂದುವರಿದ ಭಾಗದಂತಿರುವ ಹೊಸ ಧಾರಾವಾಹಿಯಲ್ಲಿ ನಿವೇದಿತಾ ಗೌಡರಂತೆ ಕಾಣುವ, ಮಾತನಾಡುವ ಹೊಸ ಕ್ಯಾರೆಕ್ಟರ್ ನ ಇಂಟ್ರೊಡ್ಯೂಸ್ ಮಾಡಲಾಗಿದೆ. ಮುಂದೆ ಓದಿರಿ...

  ಸಿಹಿ ಕಹಿ ಚಂದ್ರು-ನಿವೇದಿತಾ ಗೌಡ

  ಸಿಹಿ ಕಹಿ ಚಂದ್ರು-ನಿವೇದಿತಾ ಗೌಡ

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕಾಗಿ 'ಬಿಗ್ ಬಾಸ್' ಮನೆಯಲ್ಲಿ 'ಪಾಪ ಪಾಂಡು' ಸೂತ್ರಧಾರ ಸಿಹಿ ಕಹಿ ಚಂದ್ರು ಹಾಗೂ ನಿವೇದಿತಾ ಗೌಡ ಲಾಕ್ ಆಗಿದ್ದರು. ನಿವೇದಿತಾ ಗೌಡರನ್ನ 'ಬೇಬಿ ಡಾಲ್' ಅಂತ ಕರೆಯುತ್ತಿದ್ದ ಸಿಹಿ ಕಹಿ ಚಂದ್ರು ಇದೀಗ ಅಂಥದ್ದೇ ಪಾತ್ರವನ್ನ ತಮ್ಮ ಹೊಸ 'ಪಾಪ ಪಾಂಡು' ಧಾರಾವಾಹಿಯಲ್ಲಿ ಸೃಷ್ಟಿಸಿದ್ದಾರೆ.

  ಅಪ್ಪನಂತೆ ಮಗ ಕೂಡ ಪಾಪ: ಅತ್ತೆ ಸೊಸೆ ಮಧ್ಯೆ ಪುಂಡು ಚೂರ್ ಚೆಂಡು.!ಅಪ್ಪನಂತೆ ಮಗ ಕೂಡ ಪಾಪ: ಅತ್ತೆ ಸೊಸೆ ಮಧ್ಯೆ ಪುಂಡು ಚೂರ್ ಚೆಂಡು.!

  ನೀವೇ ನೋಡಿ ಬೇಕಾದ್ರೆ...

  ನೀವೇ ನೋಡಿ ಬೇಕಾದ್ರೆ...

  ಪಿಂಕ್ ಗೌನ್ ಧರಿಸಿ, ಕೈಯಲ್ಲಿ ಛತ್ರಿ ಹಿಡಿದುಕೊಂಡು, ಉದ್ದ ಕೂದಲು ಬಿಟ್ಟುಕೊಂಡಿರುವ ಈ ಹುಡುಗಿ ಥೇಟ್ ನಿವೇದಿತಾ ಗೌಡರಂತೆ ಕಾಣ್ತಿಲ್ವಾ.?

  ಹೊಸ ಕ್ಯಾರೆಕ್ಟರ್ ಹೆಸರು ನಿಮ್ಮಿ.!

  ಹೊಸ ಕ್ಯಾರೆಕ್ಟರ್ ಹೆಸರು ನಿಮ್ಮಿ.!

  'ಪಾಪ ಪಾಂಡು' ಧಾರಾವಾಹಿಯಲ್ಲಿ ಡ್ಯೂಪ್ಲಿಕೇಟ್ ನಿವೇದಿತಾ ಗೌಡರಂತೆ ಕಾಣುವ ಈ ಹೊಸ ಕ್ಯಾರೆಕ್ಟರ್ ಹೆಸರು ನಿಮ್ಮಿ. ಈಕೆ ಕಾಲಿಟ್ಟ ಕಡೆ ಜಗಳ ಗ್ಯಾರೆಂಟಿ. ಮಾತನಾಡಬೇಕಾದ್ರೆ ಬರೀ ನಾಲಿಗೆ ಮಾತ್ರ ಬಳಸಬೇಕು, ಬುದ್ಧಿ ಬಳಸಬಾರದು ಅಂತ ಬಲವಾಗಿ ನಂಬಿರುವವಳು ನಿಮ್ಮಿ. ಹೀಗಾಗಿ, ನಿಮ್ಮಿ ಇದ್ದ ಕಡೆ ಕಿರಿಕಿರಿ ಕಟ್ಟಿಟ್ಟ ಬುತ್ತಿ.

  'ಪಾಂಡು'ಗೂ ನಿಮ್ಮಿಗೂ ಹೇಗೆ ಲಿಂಕು.?

  'ಪಾಂಡು'ಗೂ ನಿಮ್ಮಿಗೂ ಹೇಗೆ ಲಿಂಕು.?

  ನಿಮ್ಮಿ... ಪುಂಡು ಮಾವನ ಮಗಳು. ಪುಂಡು ಅತ್ತೆ ತೀರಿಕೊಂಡ್ಮೇಲೆ, ನಿಮ್ಮಿ 'ಪಾಂಡು' ಮನೆ ಸೇರಿದ್ಲಂತೆ. ನಿಮ್ಮಿ ಹುಟ್ಟಿ ಬೆಳೆದಿದ್ದೆಲ್ಲ ಲಂಡನ್ ನಲ್ಲಿ. ಹೀಗಾಗಿ

  ಕನ್ನಡದಲ್ಲಿ ಇಂಗ್ಲೀಷ್ ಮಿಕ್ಸ್ ಮಾಡಿ ಮಾತಾಡ್ತಾಳೆ ನಿಮ್ಮಿ.

  ಮೊದಲ ಸಂಚಿಕೆಯಲ್ಲೇ ಬೆಂಕಿ ಹಚ್ಚಿದ ನಿಮ್ಮಿ.!

  ಮೊದಲ ಸಂಚಿಕೆಯಲ್ಲೇ ಬೆಂಕಿ ಹಚ್ಚಿದ ನಿಮ್ಮಿ.!

  'ಪಾಪ ಪಾಂಡು' ಮೊದಲ ಸಂಚಿಕೆಯಲ್ಲೇ ಪುಂಡು ಹಾಗೂ ಶ್ರೀಮತಿ ಮಧ್ಯೆ ನಿಮ್ಮಿ ಕಡ್ಡಿ ಗೀರಿದಳು. ನಿಮ್ಮಿಯಿಂದಾಗಿ, ಪುಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ. ನಿಮ್ಮಿಯಿಂದ 'ಪಾಂಡು' ಹಾಗೂ 'ಪುಂಡು' ಕಥೆ ಏನೇನಾಗುತ್ತೋ, ನೋಡೋಣ.

  English summary
  'Papa Pandu' written update: Nimmi Character in the serial is inspired from Niveditha Gowda, of Bigg Boss Kannada 5 fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X