For Quick Alerts
  ALLOW NOTIFICATIONS  
  For Daily Alerts

  ಅಪ್ಪನಂತೆ ಮಗ ಕೂಡ ಪಾಪ: ಅತ್ತೆ ಸೊಸೆ ಮಧ್ಯೆ ಪುಂಡು ಚೂರ್ ಚೆಂಡು.!

  By Harshitha
  |

  ಹದಿನೈದು ವರ್ಷಗಳ ಬಳಿಕ 'ಪಾಪ ಪಾಂಡು' ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹದಿನೈದು ವರ್ಷಗಳ ಹಿಂದೆ ಪಾಂಡು ಹೇಗಿದ್ರೋ, ಈಗಲೂ ಹಾಗೇ ಇದ್ದಾರೆ. ಕೊಂಚ ಕೂಡ ಬದಲಾಗಿಲ್ಲ. 'ಶ್ರೀಮತಿ'ಗೆ ಹೆದರುವುದು, ಮೊಟಕಿಸಿಕೊಳ್ಳುವುದು, ಬಾಲ್ಕನಿಯಿಂದ ಬೀಳುವುದು.. ಇದ್ಯಾವುದೂ ಇನ್ನೂ ನಿಂತಿಲ್ಲ.

  ಇಂಟ್ರೆಸ್ಟಿಂಗ್ ಅಂದ್ರೆ, ಈ ಬಾರಿ ನೀವು ಪಾಂಡು ಕಥೆ ನೋಡಿ 'ಪಾಪ' ಅಂತ ಹೇಳುವುದಕ್ಕಿಂತ ಪಾಂಡು ಪುತ್ರ ಪುಂಡು ಕಥೆ ನೋಡಿ 'ಅಯ್ಯಯ್ಯೋ ಪಾಪ' ಅಂತೀರಾ.!

  ಹೌದು, 'ಪಾಪ ಪಾಂಡು' ಹೊಸ ಆವೃತ್ತಿಯ ಮೊದಲ ಸಂಚಿಕೆ ಪ್ರಸಾರ ಆಗಿದೆ. ಹಳೇ 'ಪಾಪಾ ಪಾಂಡು'ವಿನ ಮುಂದುವರಿದ ಭಾಗದಂತಿರುವ ಈ ಧಾರಾವಾಹಿಯಲ್ಲಿ ಮುಂಚಿನಂತೆಯೇ ವೀಕ್ಷಕರನ್ನ ನಗಿಸುವಲ್ಲಿ ಸಕ್ಸಸ್ ಆಗಿದೆ. ಮುಂದೆ ಓದಿರಿ...

  ಹೈಕ್ಲಾಸ್ 'ಪಾಂಡು'

  ಹೈಕ್ಲಾಸ್ 'ಪಾಂಡು'

  ಮುಂಚೆ ಮಿಡಲ್ ಕ್ಲಾಸ್ ಸಂಸಾರಿ ಆಗಿದ್ದ ಪಾಂಡು ಇದೀಗ ಹೈಕ್ಲಾಸ್ ಆಗಿದ್ದಾರೆ. ಪಾಂಡು ಸದ್ಯ ಬಂಗಲೆಯಲ್ಲಿ ವಾಸವಾಗಿದ್ದಾರೆ. ಬಾಲ್ಕನಿಯಿಂದ ಶ್ರೀಮತಿ ತಳ್ಳಿದಾಗ, ಕೆಳಗೆ ಬಿದ್ದು ಏಟು ಮಾಡಿಕೊಳ್ಳಬಾರದು ಅಂತ ಇಟಾಲಿಯನ್ ಸೋಫ ಬೇರೆ ತರಿಸಿಕೊಂಡಿದ್ದಾರೆ ಪಾಂಡು.

  ದಪ್ಪಗಾಗಿರುವ ಶ್ರೀಮತಿ

  ದಪ್ಪಗಾಗಿರುವ ಶ್ರೀಮತಿ

  ಪಾಂಡು ಮಿಸಸ್ ಪಾಚು ಶ್ರೀಮತಿ ದಪ್ಪಗಾಗಿದ್ದಾರೆ. ಎಲ್ಲವೂ ಹೈಕ್ಲಾಸ್ ಬಯಸುವ ಶ್ರೀಮತಿಗೆ ಮುತ್ತಿನಂಥ ಮಗ ಹಾಗೂ ಜಿಪುಣಿ ಸೊಸೆ ಸಿಕ್ಕಿದ್ದಾರೆ.

  ಪಾಪ ಪುಂಡು.!

  ಪಾಪ ಪುಂಡು.!

  ಆ ಕಡೆ ಅಮ್ಮ, ಈ ಕಡೆ ಹೆಂಡತಿ.. ಅತ್ತೆ-ಸೊಸೆ ಕಿತ್ತಾಟದ ಮಧ್ಯೆ ಸಿಲುಕಿರುವ ಪುಂಡು, ಟಾರ್ಚರ್ ತಡಿಯಲಾರದೆ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಬಾರಿ.

  ಜಿಪುಣಿ ಹೆಂಡತಿ

  ಜಿಪುಣಿ ಹೆಂಡತಿ

  ಪುಂಡು ಹೆಂಡತಿ ಸಿಕ್ಕಾಪಟ್ಟೆ ಜಿಪುಣಿ. ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಗಂಡನಿಗೆ ಸಮಾಧಾನ ಮಾಡು ಅಂದ್ರೆ ಮಿಸ್ ಕಾಲ್ ಕೊಡುವಷ್ಟು ಕನ್ಜೂಸ್.

  ಹೊಸ ಕ್ಯಾರೆಕ್ಟರ್ ಗಳು...

  ಹೊಸ ಕ್ಯಾರೆಕ್ಟರ್ ಗಳು...

  'ಪಾಪ ಪಾಂಡು' ಧಾರಾವಾಹಿಯಲ್ಲಿ ಎರಡು ಹೊಸ ಕ್ಯಾರೆಕ್ಟರ್ ಪರಿಚಯ ಮಾಡಲಾಗಿದೆ. ಅವ್ರೇ ಪಕ್ಕದ ಮನೆಯ ಜಾಗಿಂಗ್ ಜಯ ಹಾಗೂ ಬಾಕ್ಸರ್ ಬಲರಾಮ.

  ಮೆಗಾ ಧಾರಾವಾಹಿ ಅಲ್ಲ.!

  ಮೆಗಾ ಧಾರಾವಾಹಿ ಅಲ್ಲ.!

  ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ 'ಪಾಪ ಪಾಂಡು' ಮೆಗಾ ಧಾರಾವಾಹಿ ಅಲ್ಲ. ಪ್ರತಿ ಸಂಚಿಕೆ ಕೂಡ ಒಂದೊಂದು ಕಾನ್ಸೆಪ್ಟ್ ಇಟ್ಟುಕೊಂಡು ನಿಮ್ಮನ್ನ ನಗಿಸುವ ಪ್ರಯತ್ನ ಮಾಡಲಿದೆ.

  English summary
  'Papa Pandu' written update: Pundu attempts to commit suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X