ಮತ್ತೆ ಮತ್ತೆ ವೀಕ್ಷಕರಿಗೆ 'ಪಾಪಾ ಪಾಂಡು' ಧಾರಾವಾಹಿ ನೆನಪಾಗುವುದೇಕೆ?
2004 ರಲ್ಲಿ ಪ್ರಸಾರವಾಗುತ್ತಿದ್ದ 'ಪಾಪಾ ಪಾಂಡು' ಧಾರಾವಾಹಿ ಇಂದಿಗೂ ಪ್ರೇಕ್ಷಕರ ಮನದಂಗಳದಲ್ಲಿ ಅಚ್ಚಾಗಿ ಉಳಿದಿದೆ. ನಟ, ನಿರ್ದೇಶಕ, ಬಾಣಸಿಗ ಸಿಹಿ ಕಹಿ ಚಂದ್ರು ನಿರ್ದೇಶಿಸಿದ್ದ 'ಪಾಪಾ ಪಾಂಡು' ಧಾರಾವಾಹಿ ಜನಮನ ಗೆದ್ದಿತ್ತು. 'ಪಾಪಾ ಪಾಂಡು' ಧಾರಾವಾಹಿ ಕಾಮಿಡಿ ಧಾರಾವಾಹಿ ಆಗಿ ಈಟಿವಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಸಾರಗೊಂಡಿತು.
ನಂತರ "ಪಾಪಾ ಪಾಂಡು" ಸೀಸನ್ 2 ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆದರೆ ಅದು 'ಪಾಪಾ ಪಾಂಡು' ಸೀಸನ್ 1ರಷ್ಟು ಸದ್ದು ಮಾಡದಿರುವುದು ಬೇಸರದ ಸಂಗತಿ. 'ಪಾಪಾ ಪಾಂಡು' ಸೀಸನ್ 2ರಲ್ಲಿ ಕಲಾವಿದರಾದ ಚಿದಾನಂದ, ಶಾಲಿನಿ, ನಯನ ನಾಗರಾಜ್, ಅಂಜನ್ ಭಾರದ್ವಾಜ್, ಸೌರಭ್ ಕುಲಕರ್ಣಿ, ಸಿಹಿ ಕಹಿ ಚಂದ್ರು, ಮಿತ್ರ, ಗಣೇಶ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಪಾಚು ಮತ್ತು ಪಾಂಡು ಎಂಬ ಎರಡು ಪಾತ್ರಧಾರಿಗಳ ಸುತ್ತ ಸುತ್ತುವ ಕಥೆ ಇದು. ಸದಾ ತನ್ನ ಪತಿ ಪಾಂಡುವನ್ನು ಕಂಟ್ರೋಲ್ ಮಾಡುವ ಪತ್ನಿ ಪಚ್ಚು, ಇದರ ಸುತ್ತ ಬೇರೆ ಬೇರೆ ಕಾಮಿಕ್ ಪಾತ್ರಗಳ ಕಥಾ ಹಂದರವಿದು. ಧಾರಾವಾಹಿಯುದ್ದಕ್ಕೂ ಬಹಳ ಹಾಸ್ಯಸ್ಪದ ಸೀನ್ ಗಳು, ಡೈಲಾಗ್ ಗಳ ಮೂಲಕ ಜನಮನ ಸೆಳೆದಿದ್ದು ಈ ಧಾರಾವಾಹಿ. ಪಾಂಡು ಡೈಲಾಗ್ ಗಳು ಬರುವಾಗೆಲ್ಲ ಅವನ ಪಕ್ಕದಲ್ಲಿ ನಿಂತ ಹೆಂಡತಿ ಪಚ್ಚು ನೀಡುತ್ತಿದ್ದ ಹಾವ ಭಾವವೇ ಜನರನ್ನು ನಗಿಸುತ್ತಿತ್ತು.
ನಟಿ ಶಾಲಿನಿ ಸತ್ಯನಾರಾಯಣ್
ನಟಿ ಶಾಲಿನಿ ಸತ್ಯನಾರಾಯಣ್ ಭಾರತೀಯ ದೂರದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ನಂತರ ರಿಯಾಲಿಟಿ ಶೋಗಳಾದ ಡ್ಯಾನ್ಸಿಂಗ್ ಸ್ಟಾರ್, ನಾಟಿ ಮನೆ ಹೀಗೆ ಹಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯ ಮಮತೆಯ ಕರೆಯೋಲೆ ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಗೂ ಕಾಲಿಟ್ಟರು.
ನಟ ಚಿದಾನಂದ್
'ಪಾಪಾ ಪಾಂಡು' ಧಾರಾವಾಹಿ ಮೂಲಕ ಖ್ಯಾತಿಯನ್ನು ಪಡೆದ ನಟ ಚಿದಾನಂದ್ ನಂತರ ಅಯ್ಯೋ ಪಾಂಡು ಎಂಬ ಸಿನಿಮಾದಲ್ಲಿ ನಟಿಸಿದರು. ಅದಲ್ಲದೆ ಕೂಲ್ ಗಣೇಶ, ಏಪ್ರಿಲ್ ನ ಹಿಮಬಿಂದು ಮುಂತಾದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಂಜನ್ ಭಾರಧ್ವಾಜ್
ಪುಂಡ ಪಾತ್ರದಲ್ಲಿ ಕಾಣಿಸಿಕೊಂಡ ನಟ ಅಂಜನ್ ಭಾರದ್ವಾಜ್ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಬೆಳ್ಳಿ ಪರದೆಯಲ್ಲೂ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯುಗಾಂತರ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸಿದ್ದಾರೆ.
ನಯನಾ ನಾಗರಾಜ್
ನಟಿ ನಯನಾ ನಾಗರಾಜ್ ಕೂಡ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ 'ಗಿಣಿರಾಮ' ಧಾರಾವಾಹಿಯ ಮಹತಿ ಪಾತ್ರದ ಮೂಲಕ ಬಹಳಷ್ಟು ಖ್ಯಾತಿ ಪಡೆದರು ಈ ನಟಿ.
ನಟ ನಿರ್ದೇಶಕ ಚಂದ್ರಶೇಖರ್ ಅವರು ಸಿಹಿ ಕಹಿ ಚಂದ್ರು ಎಂದೇ ಖ್ಯಾತಿ ಪಡೆದಿದ್ದಾರೆ. ಪಾಪ ಪಾಂಡು ಧಾರವಾಹಿಯನ್ನು ನಿರ್ದೇಶಿಸಿರುವ ಇವರು, ಇವರಿಗೂ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಕಿರುತೆರೆಯ ಉತ್ತಮ ಬಾಣಸಿಗ ಎಂದೇ ಫೇಮ್ ಪಡೆದಿರುವ ಇವರು ಬಹಳಷ್ಟು ಕುಕಿಂಗ್ ಶೋಗಳನ್ನು ನಡೆಸಿದ್ದಾರೆ.
ಇತ್ತೀಚೆಗೆ ಹಲವು ರೀತಿಯ ಘಟನೆಗಳನ್ನು ಒಂದು ನೂರಾರು ಧಾರವಾಹಿಗಳು ಬಂದರೂ ಸಹ ಇಂತಹ ಕಾಮಿಡಿ ಸೀರಿಯಲ್ ಗಳ ಸಂಖ್ಯೆ ಬಹಳ ಕಮ್ಮಿ ಆಗಿದೆ.
ದಿನಗಳು ಉರುಳಿದಂತೆ ಟ್ರೆಂಡ್ ಗಳು ಬದಲಾಗುತ್ತವೆ, ಪ್ರೇಕ್ಷಕರ ಅಭಿರುಚಿಗಳು ಬದಲಾಗುತ್ತವೆ. ಅದಕ್ಕೆ ಸರಿ ಪ್ರೇಕ್ಷಕರ ಆಸಕ್ತಿಗೆ ಸರಿಯಾದಂತಹ ಕಥೆಗಳು ಧಾರಾವಾಹಿಗಳನ್ನೇ ನಿರ್ದೇಶಕರು ಪ್ರಸ್ತುತ ಪಡಿಸುತ್ತ ಹೋಗುತ್ತಾರೆ.
ಇಂದು, ಸಿಲ್ಲಿ ಲಲ್ಲಿ, ಪಾಪ ಪಾಂಡುವಿನಂತಹ ಕಾಮಿಡಿ ಧಾರವಾಹಿಗಳು ಇಲ್ಲದಿದ್ದರೂ, ದಶಕಗಳಿಂದ ಪ್ರಸಾರವಾದ ಈ ಧಾರವಾಹಿಗಳನ್ನು ಇಂದಿಗೂ ಜನ ನೆನೆಯುತ್ತಾರೆ. ಜಿಯೋ ಸಿನಿಮಾ ಆಪ್ ನಲ್ಲಿ ಪಾಪ ಪಾಂಡು ಧಾರಾವಾಹಿಯನ್ನು ಇಂದಿಗೂ ಜನ ವೀಕ್ಷಿಸುವುದು ವಿಶೇಷ.


Click it and Unblock the Notifications











