'ಬಿಗ್ ಬಾಸ್'ಗೆ ಸುದೀಪ್ ಸೂಕ್ತ ನಿರೂಪಕ, ನಿರ್ದೇಶಕರು ನೀಡಿದ 7 ಕಾರಣಗಳು
Recommended Video
'ಬಿಗ್ ಬಾಸ್' ಕಾರ್ಯಕ್ರಮದ ಪ್ರಮುಖ ಆಕರ್ಷಣೆ ನಟ ಸುದೀಪ್. ಕಾರ್ಯಕ್ರಮ ಕೆಲವು ಬಾರಿ ಬೋರ್ ಆದರೂ, ಸುದೀಪ್ ಗಾಗಿಯೇ ಬಿಗ್ ಬಾಸ್ ನೋಡುವವರು ಇದ್ದಾರೆ. ಕಳೆದ ಆರು ಸೀಸನ್ ಗಳನ್ನು ಸುದೀಪ್ ಯಶಸ್ವಿಯಾಗಿ ನಿರೂಪಕನಾಗಿ ನಿರ್ವಹಿಸಿದ್ದಾರೆ.
ಈ ಕಾರ್ಯಕ್ರಮವನ್ನು ನಿರ್ವಹಿಸಲು ಸುದೀಪ್ ಸೂಕ್ತವಾದ ವ್ಯಕ್ತಿ ಎಂದು 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ. ಏಳನೇ ಸೀಸನ್ ಪ್ರಾರಂಭ ಆಗುತ್ತಿದ್ದು, ಸುದೀಪ್ ಈ ಕಾರ್ಯಕ್ರಮಕ್ಕೆ ಏಕೆ ಮುಖ್ಯ ಎನ್ನುವ ಬಗ್ಗೆ ಅವರು ಕಾರಣ ನೀಡಿದ್ದಾರೆ.

1.ಸೂಕ್ಷ್ಮ ಸಂವೇದನೆ
2.ಬುದ್ದಿವಂತಿಕೆ
3.Spontaneity ಇರಬೇಕು, ತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು
4.ಜೀವನ ಅನುಭವ
5.ಶುದ್ಧ ಕನ್ನಡ, ಭಾಷಾ ಬಳಕೆ
6.ಜನಪ್ರಿಯತೆ
7.ಎಲ್ಲ ವರ್ಗದ ರಿಯಾಲಿಟಿ ತಿಳಿದಿದೆ (ನಟನೆ, ನಿರ್ದೇಶನ, ಇತ್ಯಾದಿ)
'ಬಿಗ್ ಬಾಸ್' ಬೇರೆ ರೀತಿಯ ಕಾರ್ಯಕ್ರಮಗಳ ಹಾಗೆ ಅಲ್ಲ. ಇಲ್ಲಿ ಎಲ್ಲ ಮಾತುಗಳು ಸ್ಕ್ರಿಪ್ಟ್ ಮೂಲಕ ಬರುವುದಿಲ್ಲ ಹಾಗೂ ನಿರೂಪಕನೇ ಆ ಕ್ಷಣದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಸುದೀಪ್ ಇದನ್ನು ತುಂಬ ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುವುದು ಪರಮೇಶ್ವರ ಗುಂಡ್ಕಲ್ ಮಾತು.
'ಬಿಗ್ ಬಾಸ್' ಎಲ್ಲಾ ಸೀಸನ್ ಗಳನ್ನು ನಾನು ನಿರ್ದೇಶನ ಮಾಡಿಲ್ಲ. ಆದರೆ, ಆರೂ ಸೀಸನ್ ಗಳನ್ನು ಸುದೀಪ್ ನಿರೂಪಣೆ ಮಾಡಿದ್ದಾರೆ. ಹೀಗಾಗಿ ಅವರು ನನಗಿಂತ ಸೀರಿಯಲ್ ಎಂದು ಸುದೀಪ್ ಕೆಲಸವನ್ನು ಪರಮೇಶ್ವರ ಗುಂಡ್ಕಲ್ ಹೊಗಳಿದರು.


Click it and Unblock the Notifications











