»   » ಕಿರುತೆರೆಯಲ್ಲಿ ಕೆರಿಯರ್ ಶುರು ಮಾಡಿದ ಜಗ್ಗೇಶ್ ಪತ್ನಿ

ಕಿರುತೆರೆಯಲ್ಲಿ ಕೆರಿಯರ್ ಶುರು ಮಾಡಿದ ಜಗ್ಗೇಶ್ ಪತ್ನಿ

Posted By:
Subscribe to Filmibeat Kannada

ನಟ ಜಗ್ಗೇಶ್ ಸದ್ಯ '8MM' ಸಿನಿಮಾ ಮಾಡುತ್ತಿದ್ದಾರೆ. ಅದರ ಜೊತೆಗೆ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು 2' ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಆದರೆ ಈಗ ಜಗ್ಗೇಶ್ ಅವರ ಪತ್ನಿ ಕೂಡ ಕಿರುತೆರೆಯ ಮೂಲಕ ತಮ್ಮ ಕೆರಿಯರ್ ಶುರು ಮಾಡಲು ಸಜ್ಜಾಗಿದ್ದಾರೆ.

'8MM' ಚಿತ್ರದ ಖಡಕ್ ಟೀಸರ್ ನೋಡಿ ಫಿದಾ ಆದ ಜಗ್ಗೇಶ್ ಪತ್ನಿ

ಜಗ್ಗೇಶ್ ಕನ್ನಡದ ಸ್ಟಾರ್ ನಟ. ಅವರ ಮಕ್ಕಳು ಕೂಡ ಈಗಾಗಲೇ ಸಿನಿಮಾ ಮಾಡಿದ್ದಾರೆ. ಈಗ ಜಗ್ಗೇಶ್ ಕುಟುಂಬದ ಮತ್ತೊಬ್ಬ ಸದಸ್ಯರು ಟಿವಿ ಜಗತ್ತಿನ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ 'ಒಗ್ಗರಣೆ ಡಬ್ಬಿ' ಕಾರ್ಯಕ್ರಮಕ್ಕೆ ಈಗ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಎಂಟ್ರಿ ಆಗಿದೆ. ಈ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಜಗ್ಗೇಶ್ ಪತ್ನಿ ಸಹ ಇರಲಿದ್ದಾರೆ.

Parimala Jaggesh will be part of Oggarane Dabbi program

'ಒಗ್ಗರಣೆ ಡಬ್ಬಿ' ಮಹಿಳೆಯರ ಮನ ಗೆದ್ದ ಕಾರ್ಯಕ್ರಮಗಳಲ್ಲಿ ಒಂದು. ಅಡುಗೆ ಬಗ್ಗೆ ಇರುವ ಈ ಕಾರ್ಯಕ್ರಮದಲ್ಲಿ ಹೊಸ ಹೊಸ ರುಚಿಗಳನ್ನು ವೀಕ್ಷಕರ ಮುಂದೆ ಇಡಲಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಈಗ ಪರಿಮಳ ಜಗ್ಗೇಶ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ ಪ್ರತಿ ನಿತ್ಯ ಅವರು ಬರಲಿದ್ದಾರೆ. ಮುಖ್ಯವಾಗಿ ಅಡುಗೆಯ ಜೊತೆಗೆ ಮಹಿಳೆಯರಿಗೆ ಬೇಕಾಗುವ ಅನೇಕ ಟಿಪ್ಸ್ ಗಳನ್ನು ಅವರು ನೀಡಲಿದ್ದಾರೆ.

ಅಂದಹಾಗೆ, ಜೀ ಕನ್ನಡ ವಾಹಿನಿ ತಮ್ಮ ಈ ಕಾರ್ಯಕ್ರಮಕ್ಕೆ ಪರಿಮಳ ಜಗ್ಗೇಶ್ ಅವರು ಸೂಕ್ತ ಎಂದು ಅವರನ್ನು ಸಂಪರ್ಕ ಮಾಡಿತ್ತು. ಕಾರ್ಯಕ್ರಮದ ರೂಪುರೇಷೆಗಳು ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಇಬ್ಬರಿಗೆ ಇಷ್ಟ ಆಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರ್ಧಾರವನ್ನು ಜಗ್ಗೇಶ್ ದಂಪತಿ ತೆಗೆದುಕೊಂಡಿದ್ದರು. ಇಷ್ಟು ದಿನ ಕೆಲವೇ ಕೆಲವು ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರ ಜೊತೆಗೆ ಕಾಣಿಸಿಕೊಂಡಿದ್ದ ಪರಿಮಳ ಜಗ್ಗೇಶ್ ಈಗ ತಾವೇ ಒಂದು ಕಾರ್ಯಕ್ರಮದ ಸಾರಥಿ ಆಗಲಿದ್ದಾರೆ.

ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಅವರ ರೀತಿ ಪರಿಮಳ ಜಗ್ಗೇಶ್ ಕೂಡ ಸಕ್ರೀಯರಾಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅನೇಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಅವರು ಹಂಚಿಕೊಳ್ಳುತ್ತಿರುತ್ತಾರೆ.

English summary
Kannada Actor Jaggesh wife Parimala Jaggesh will be part of Zee Kannada channels popular show 'Oggarane Dabbi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X