»   » ಹಣ ಪಡೆಯದೆ ಟಿವಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಪತ್ನಿ ಭಾಗಿ

ಹಣ ಪಡೆಯದೆ ಟಿವಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಪತ್ನಿ ಭಾಗಿ

Posted By:
Subscribe to Filmibeat Kannada

ನಟ ಜಗ್ಗೇಶ್ ಅವರ ಪತ್ನಿ ಇದೀಗ ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಪರಿಮಳ ಜಗ್ಗೇಶ್ ಅವರು ಕಿರುತೆರೆಗೆ ಕಾಲಿಡುತ್ತಿದ್ದಾರೆ. ಆದರೆ ವಿಶೇಷ ಅಂದರೆ ಈ ಕಾರ್ಯಕ್ರಮಕ್ಕೆ ಅವರು ಹಣ ಪಡೆದಿಲ್ಲ.

ಜೀ ಕನ್ನಡ ವಾಹಿನಿಯ 'ಒಗ್ಗರಣೆ ಡಬ್ಬಿ' ಮಹಿಳೆಯರ ಮನ ಗೆದ್ದ ಕಾರ್ಯಕ್ರಮಗಳಲ್ಲಿ ಒಂದು. ಇಂತಹ ಕಾರ್ಯಕ್ರಮದಲ್ಲಿ ಈಗ ಪರಿಮಳ ಜಗ್ಗೇಶ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ ಪ್ರತಿ ನಿತ್ಯ ಅವರು ಬರಲಿದ್ದಾರೆ. ಮುಖ್ಯವಾಗಿ ಅಡುಗೆಯ ಜೊತೆಗೆ ಮಹಿಳೆಯರಿಗೆ ಬೇಕಾಗುವ ಅನೇಕ ಟಿಪ್ಸ್ ಗಳನ್ನು ಅವರು ನೀಡಲಿದ್ದಾರೆ.

Parimala Jaggesh will not be taking remuneration for Oggarane Dabbi show

ಈ ಕಾರ್ಯಕ್ರಮವನ್ನು ಮಾಡುವುದಕ್ಕೆ ಪರಿಮಳ ಜಗ್ಗೇಶ್ ಯಾವುದೇ ಹಣವನ್ನು ಪಡೆದಿಲ್ಲವಂತೆ. ಈ ವಿಷಯವನ್ನು ಸ್ವತಃ ಜಗ್ಗೇಶ್ ಹಂಚಿಕೊಂಡಿದ್ದಾರೆ. ಪರಿಮಳ ಜಗ್ಗೇಶ್ ಅವರು ಕಿರುತೆರೆಗೆ ಕಾಲಿಡುವ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಲೇಖನ ಪ್ರಕಟ ಮಾಡಿತ್ತು. ಈ ಲೇಖನಕ್ಕೆ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ''ಹಣಪಡೆಯದೆ ಪ್ರೀತಿಯಿಂದ ಭಾಗವಹಿಸುತ್ತಿದ್ದಾಳೆ ಮಡದಿ..ಆಕೆ ಕಲಿತ #diet ಪದವಿ ಜನೋಪಕಾರಕ್ಕಾಗಿ..! ಅವಳ ಪ್ರಾಮಾಣಿಕ ಪ್ರಯತ್ನ ರಾಯರಪೂಜೆ ಎಂದು ಭಾವಿಸುವೆ..ಧನ್ಯವಾದ.'' ಎಂದು ಟ್ವೀಟ್ ಮಾಡಿದ್ದಾರೆ.

ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು 2' ಕಾರ್ಯಕ್ರಮಕ್ಕೆ ನಟ ಜಗ್ಗೇಶ್ ತೀರ್ಪುಗಾರರಾಗಿದ್ದಾರೆ. ಅದರ ಜೊತೆಗೆ ಅವರ ಪತ್ನಿ ಕೂಡ ಅದೇ ವಾಹಿನಿ ಮೂಲಕ ಹೊಸ ಪಯಣ ಶುರು ಮಾಡುತ್ತಿರುವುದು ವಿಶೇಷವಾಗಿದೆ.

English summary
Kannada Actor Jaggesh has taken his twitter account to express his opinion about his wife Parimala Jaggesh's small screen debut. Parimala Jaggesh will be part of Zee Kannada channels popular show 'Oggarane Dabbi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X