ಬಿಗ್ ಬಾಸ್ ಕನ್ನಡ ಶೋ ಕುರಿತು ಸ್ಪಷ್ಟನೆ ನೀಡಿದ ನಟಿ ಪಾರೂಲ್

Recommended Video

Bigg Boss Season 7:ಪಾರೂಲ್ ಯಾದವ್ ದೊಡ್ಮನೆಯಲ್ಲಿ ಇರ್ತಾರ ? | FILMIBEAT KANNADA

ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಸೆಲೆಬ್ರಿಟಿಗಳು ಮಾತ್ರ ಭಾಗಿಯಾಗಲಿದ್ದಾರೆ. ಈ ಬಾರಿ ಯಾವೆಲ್ಲ ಕಿರುತೆರೆ, ಹಿರಿತೆರೆ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಬಿಗ್ ಮನೆಗೆ ಹೋಗಬಹುದು ಎಂಬ ಚರ್ಚೆ ಆರಂಭವಾಗಿದೆ.

ಸಂಪ್ರದಾಯದಂತೆ ಕೆಲವು ಸಿನಿಮಾ ನಟಿಯರು ಹೆಸರು ಈಗಾಗಲೇ ಸದ್ದು ಮಾಡುತ್ತಿದೆ. ಅದರಲ್ಲಿ ಪಾರೂಲ್ ಯಾದವ್ ಅವರ ಹೆಸರು ಕಾಣಿಸಿಕೊಂಡಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾರೂಲ್ ''ನಾನು ಬಿಗ್ ಬಾಸ್ ಗೆ ಹೋಗುವುದಿಲ್ಲ'' ಎಂದಿದ್ದಾರೆ.

ಬಿಗ್ ಬಾಸ್ ಕುರಿತು ಸ್ಪಷ್ಟನೆ ನೀಡಿರುವ ಪಾರೂಲ್ ''ನನಗೆ ಬಿಗ್ ಬಾಸ್ ಶೋ ಬಗ್ಗೆ ದೊಡ್ಡ ಗೌರವಿದೆ. ಆದರೆ, ಆ ಶೋನಲ್ಲಿ ನನ್ನನ್ನು ನಾನು ನೋಡಿಕೊಳ್ಳಲು ಇಷ್ಟವಿಲ್ಲ'' ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Parul yadav React on Bigg Boss Kannada

ಈ ಮೂಲಕ ಪಾರೂಲ್ ಯಾದವ್ ಬಿಗ್ ಬಾಸ್ ಗೆ ಹೋಗಲ್ಲ ಎನ್ನುವುದು ಅಧಿಕೃತವಾಗಿದೆ. ಇನ್ನುಳಿದಂತೆ ರಾಧಾರಮಣ ಖ್ಯಾತಿಯ ಶ್ವೇತಾ ಪ್ರಸಾದ್, ಕುರಿ ಪ್ರತಾಪ್, ಶಿವರಾಜ್ ಕೆಆರ್ ಪೇಟೆ, ರಾಗಿಣಿ, ವಿಜಯಲಕಗ್ಷ್ಮಿ ಹೆಸರು ಕೂಡ ಚರ್ಚೆಯಾಗುತ್ತಿದೆ.

ಈಗಾಗಲೇ ಬಿಗ್ ಬಾಸ್ ಪ್ರೋಮೋಗಳು ಬಿಡುಗಡೆಯಾಗಿದ್ದು, ಅಕ್ಟೋಬರ್ ಎರಡನೇ ವಾರದಲ್ಲಿ ಶೋ ಪ್ರಸಾರವಾಗಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.

More from Filmibeat

English summary
Kannada actress parul yadav not Participating In Bigg Boss kannada season 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X