For Quick Alerts
  ALLOW NOTIFICATIONS  
  For Daily Alerts

  ಇವರೆಲ್ಲ 'ಹಿಂದಿ ಬಿಗ್ ಬಾಸ್' ಗೆದ್ದಿರುವ ಅದೃಷ್ಟವಂತರು

  By Bharath Kumar
  |

  ಹಿಂದಿ ಬಿಗ್ ಬಾಸ್ 11ನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದೆ. ನಟಿ ಶಿಲ್ಪಾ ಶಿಂಧೆ ಈ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸಾಕಷ್ಟು ಕುತೂಹಲವಿದ್ದ ಫಿನಾಲೆಯಲ್ಲಿ ವಿಕಾಸ್ ಗುಪ್ತಾ, ಪುನೀಶ್ ಶರ್ಮಾ, ಹೀನಾ ಖಾನ್ ಅವರನ್ನ ಹಿಂದಿಕ್ಕಿದ ಶಿಲ್ಪಾ ಬಿಗ್ ಬಾಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

  ಶಿಲ್ಪಾ ಶಿಂಧೆಗೂ ಮುಂಚೆ 10 ಜನ ಸ್ದರ್ಧಿಗಳು ಬಿಗ್ ಬಾಸ್ ಟ್ರೋಪಿ ಗೆದ್ದಿದ್ದರು. ಬಹುಶಃ ಈ ಜನರಲ್ಲಿ ಎರಡ್ಮೂರು ಜನರ ಹೆಸರು ನೆನಪಿರಬಹುದು ಅನ್ಸುತ್ತೆ.

  ಬಿಗ್ ಬಾಸ್ ಟ್ರೋಫಿ ಗೆದ್ದ ನಟಿ ಶಿಲ್ಪಾ ಶಿಂಧೆ

  2007ರಲ್ಲಿ ಬಿಗ್ ಬಾಸ್ ಹಿಂದಿಯ ಮೊದಲ ಆವೃತ್ತಿ ಆರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಗೆದ್ದ ವಿಜೇತರು ಯಾರು? ಆ ಫಿನಾಲೆಗಳು ಹೇಗಿತ್ತು? ಎಂಬುದರ ಸಂಪೂರ್ಣ ವಿವರಗಳನ್ನ ನಾವು ಕೊಡುತ್ತೇವೆ. ಮುಂದೆ ಓದಿ....

  ರಾಹುಲ್ ರಾಯ್ ಮೊದಲ ವಿನ್ನರ್

  ರಾಹುಲ್ ರಾಯ್ ಮೊದಲ ವಿನ್ನರ್

  ಬಾಲಿವುಡ್ ನ ನಟ, ನಿರ್ಮಾಪಕ ರಾಹುಲ್ ರಾಯ್ ಬಿಗ್ ಬಾಸ್ ಹಿಂದಿಯ ಮೊದಲ ವಿನ್ನರ್ ಆಗಿದ್ದರು. 2007 ರಲ್ಲಿ ನಡೆದ ಈ ಕಾರ್ಯಕ್ರಮವನ್ನ ನಟ ಅರ್ಶದ್ ವಾರ್ಸಿ ನಿರೂಪಣೆ ಮಾಡಿದ್ದರು. 1990 ರಲ್ಲಿ ಬಿಡುಗಡೆಯಾಗಿದ್ದ 'ಆಶಿಕಿ' ಚಿತ್ರದ ಮೂಲಕ ರಾಹುಲ ರಾಯ್ ಖ್ಯಾತಿ ಗಳಿಸಿಕೊಂಡಿದ್ದರು.

  ಅಶುತೋಷ್ ಕೌಶಿಕ್ ಎರಡನೇ ವಿಜೇತ

  ಅಶುತೋಷ್ ಕೌಶಿಕ್ ಎರಡನೇ ವಿಜೇತ

  2008ರಲ್ಲಿ ನಡೆದ ಬಿಗ್ ಬಾಸ್ ಹಿಂದಿ 2ನೇ ಆವೃತ್ತಿಯನ್ನ ನಟ ಅಶುತೋಷ್ ಕೌಶಿಕ್ ಗೆದ್ದಿದ್ದರು. ಮಾಡೆಲ್ ಆಗಿ ಅಶುತೋಷ್ ಕೌಶಿಕ್ ನಂತರ ಬಾಲಿವುಡ್ ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದರು. ಎರಡನೇ ಆವೃತ್ತಿಯನ್ನ ನಟಿ ಶಿಲ್ಪಾ ಶೆಟ್ಟಿ ನಿರೂಪಣೆ ಮಾಡಿದ್ದರು.

  ಮೂರನೇ ವಿನ್ನರ್ ವಿಂದು ದರಾ ಸಿಂಗ್

  ಮೂರನೇ ವಿನ್ನರ್ ವಿಂದು ದರಾ ಸಿಂಗ್

  2009ರಲ್ಲಿ ನಡೆದ ಮೂರನೇ ಆವೃತ್ತಿಯ ಬಿಗ್ ಬಾಸ್ ನಲ್ಲಿ ವಿಂದು ದರಾ ಸಿಂಗ್ ವಿಜಯಶಾಲಿ ಆಗಿದ್ದರು. ಬಾಲಿವುಡ್ ನಲ್ಲಿ ಪೋಷಕ ನಟನಾಗಿದ್ದ ವಿಂದು ದರಾ ಸಿಂಗ್ ನಂತರ ನಾಯಕನಟನಾಗಿಯೂ ಅಭಿನಯಿಸಿದರು. ಮೂರನೇ ಆವೃತ್ತಿಯನ್ನ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ್ದರು.

  ಶ್ವೇತಾ ತಿವಾರಿ ಮುಡಿಗೆ ಬಿಗ್ ಬಾಸ್

  ಶ್ವೇತಾ ತಿವಾರಿ ಮುಡಿಗೆ ಬಿಗ್ ಬಾಸ್

  ಹಿಂದಿಯ ನಾಲ್ಕನೇ ಬಿಗ್ ಬಾಸ್ ಕಿರೀಟವನ್ನ ಶ್ವೇತಾ ತಿವಾರಿ ಮುಡಿಗೇರಿಸಿಕೊಂಡಿದ್ದರು. ಟಿವಿ ನಟಿಯಾಗಿದ್ದ ಶ್ವೇತಾ ಬಿಗ್ ಬಾಸ್ ಗೆದ್ದ ನಂತರ 'ಜಲಕ ದಿಕಲಾಜ' ರಿಯಾಲಿಟಿ ಶೋ ನಿರೂಪಣೆ ಮಾಡಿದರು. ತಮ್ಮ ಬಾಯ್ ಫ್ರೆಂಡ್ ಅಭಿನಯ್ ಕೊಹ್ಲಿ ಅವರೊಂದಿಗೆ ವಿವಾಹವಾದರು. 2010ರಲ್ಲಿ ನಡೆದ ಬಿಗ್ ಬಾಸ್ ಸಲ್ಮಾನ್ ಖಾನ್ ನಿರೂಪಣೆ ಮಾಡಿದ ಮೊದಲ ಆವೃತ್ತಿ.

  5ನೇ ಆವೃತ್ತಿ ಗೆದ್ದ ಜೂಹಿ ಪರ್ಮಾರ್

  5ನೇ ಆವೃತ್ತಿ ಗೆದ್ದ ಜೂಹಿ ಪರ್ಮಾರ್

  ಕಿರುತೆರೆ ನಟಿ ಜೂಹಿ ಪರ್ಮಾರ್ ಬಿಗ್ ಬಾಸ್ ಹಿಂದಿಯ 5ನೇ ಆವೃತ್ತಿಯ ಟ್ರೋಫಿ ಗೆದ್ದುಕೊಂಡಿದ್ದರು. 2011ರಲ್ಲಿ ನಡೆದ ಈ ಕಾರ್ಯಕ್ರಮವನ್ನ ನಟ ಸಂಜಯ್ ದತ್ ನಿರೂಪಣೆ ಮಾಡಿದ್ದರು.

  6ನೇ ಆವೃತ್ತಿ ಊರ್ವಶಿ ಧೋಲಕಿಯಾ

  6ನೇ ಆವೃತ್ತಿ ಊರ್ವಶಿ ಧೋಲಕಿಯಾ

  ಕಿರುತೆರೆ ನಟಿ ಊರ್ವಶಿ ಧೋಲಕಿಯಾ 6ನೇ ಆವೃತ್ತಿಯ ಬಿಗ್ ಬಾಸ್ ಗೆದ್ದ ಅದೃಷ್ಟವಂತರು. ಸದ್ಯ, 'ಚಂದ್ರಕಾಂತಿ' ಎಂಬ ಧಾರಾವಾಹಿಯಲ್ಲಿ ರಾಣಿ ಇರಾವತಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ಆವೃತ್ತಿಯನ್ನ ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು.

  ಗೌಹಾರ್ ಖಾನ್

  ಗೌಹಾರ್ ಖಾನ್

  2013ರಲ್ಲಿ ನಡೆದ ಬಿಗ್ ಬಾಸ್ 6ನೇ ಆವೃತ್ತಿಯಲ್ಲಿ ನಟಿ ಗೌಹಾರ್ ಖಾನ್ ವಿಜಯಶಾಲಿಯಾಗಿ ಹೊರಹೊಮ್ಮಿದರು. ಈ ಆವೃತ್ತಿಯನ್ನ ಕೂಡ ಸಲ್ಮಾನ್ ಖಾನ್ ನಿರೂಪಣೆ ಮಾಡಿದರು.

  ಗೌತಮ್ ಗುಲಾಟಿ

  ಗೌತಮ್ ಗುಲಾಟಿ

  ಬಿಗ್ ಬಾಸ್ ಹಿಂದಿಯ 8ನೇ ಆವೃತ್ತಿ 2014ರಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ಗೌತಮ್ ಗುಲಾಟಿ ಬಿಗ್ ಬಾಸ್ ವಿನ್ನರ್ ಆಗಿದ್ದರು. ಈ ಸೀಸನ್ ಕೂಡ ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು.

  9ನೇ ವಿನ್ನರ್ ಪ್ರಿನ್ಸ್ ನರುಲಾ

  9ನೇ ವಿನ್ನರ್ ಪ್ರಿನ್ಸ್ ನರುಲಾ

  2015ರಲ್ಲಿ ನಡೆದ ಬಿಗ್ ಬಾಸ್ 9ನೇ ಆವೃತ್ತಿಯನ್ನ ನಟ ಪ್ರಿನ್ಸ್ ನರುಲಾ ಗೆದ್ದರು. ಅದಕ್ಕು ಮುಂಚೆ 'ರೋಡೀಸ್ ಸೀಸನ್ ಎಕ್ಸ್-2' ಮತ್ತು 'ಸ್ಪ್ಲಿಟ್ಸ್ವಿಲ್ಲಾ ಸೀಸನ್ 8' ಗೆದ್ದಿದ್ದರು. ಬಿಗ್ ಬಾಸ್ 9 ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದರು. ಈ ಸೀಸನ್ ಕೂಡ ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು.

  10ನೇ ಆವೃತ್ತಿ ಯಾರ ಮಡಿಲಿಗೆ?

  10ನೇ ಆವೃತ್ತಿ ಯಾರ ಮಡಿಲಿಗೆ?

  ಇನ್ನು ಕಳೆದ ವರ್ಷ ಬಿಗ್ ಬಾಸ್ ವಿನ್ನರ್ ಯಾರೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ, ಇದು ಮೊದಲ ಬಾರಿಗೆ ಕಾಮನ್ ಮ್ಯಾನ್ ಬಿಗ್ ಬಾಸ್ ಗೆದ್ದ ಆವೃತ್ತಿ. ಜನಸಾಮಾನ್ಯ ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿದ್ದ ಮನ್ವಿರ್ ಗುರ್ಜರ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದರು.

  ಹೊಸ ವಿಜಯಶಾಲಿ

  ಹೊಸ ವಿಜಯಶಾಲಿ

  ಈಗಷ್ಟೇ ಮುಗಿದ ಬಿಗ್ ಬಾಸ್ 11ನೇ ಆವೃತ್ತಿಯ ವಿನ್ನರ್ ಆಗಿ ನಟಿ ಶಿಲ್ಪಾ ಶಿಂಧೆ ನೂತನ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ.

  English summary
  The first edition of reality show 'Bigg Boss' was won by actor Rahul Roy in 2007 while Ashutosh Kaushik was the second season's winner. Dara Singh's son Vindu won the third season before Shweta Tiwari became the first female to win the show in its fourth season. Juhi Parmar, Urvashi Dholakia, Gauahar Khan and Gautam Gulati won the subsequent seasons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X