'ಮತ್ತೆ ಮದುವೆ' ವಿವಾದ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ; ವನಜಾ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಮೋಡಿ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿನಿವಾಸ'. ಅದರಲ್ಲಿ ನಾಯಕ ಶ್ರೀಕಾಂತ್‌ ಅಮ್ಮ ವನಜಾ ಪಾತ್ರದಲ್ಲಿ ಪವಿತ್ರಾ ಲೋಕೇಶ್ ನಟಿಸುತ್ತಿದ್ದಾರೆ. 2019ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ನಾಯಕನ ಅಮ್ಮ ಮೀನಾಕ್ಷಿಯಾಗಿ ಪವಿತ್ರಾ ಲೋಕೇಶ್ ನಟಿಸಿದ್ದರು.

'ಅರಮನೆ ಗಿಳಿ' ಬಳಿಕ ಕಾರಣಾಂತರಗಳಿಂದ ಪವಿತ್ರಾ ಲೋಕೇಶ್ ಧಾರಾವಾಹಿಯ ಮೀನಾಕ್ಷಿಯ ಪಾತ್ರದಿಂದ ಹೊರಬಂದಿದ್ದರು. ಆ ನಂತರ ಈ ಪಾತ್ರದಲ್ಲಿ ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ಅವರು ಜೀವ ತುಂಬಿದ್ದರು.

Pavitra Lokesh is charming on television as Vanaja in Lakshmi Nivasa serial

ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಪವಿತ್ರಾ ಲೋಕೇಶ್ ಬಣ್ಣದ ಪಯಣ ಶುರುವಾಗಿದ್ದು 'ಮಿಸ್ಟರ್ ಅಭಿಷೇಕ್' ಸಿನಿಮಾದ ಮೂಲಕ. ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಪವಿತ್ರಾ ಲೋಕೇಶ್ 'ದಿಯಾ', 'ಪೊಗರು', 'ಮಿ.ಬ್ಯಾಚುಲರ್', 'ಸೈರನ್' ಹಾಗೂ ಇತ್ತೀಚೆಗೆ ತೆರೆಕಂಡಿದ್ದ 'ಸಪ್ತ ಸಾಗರದಾಚೆ ಎಲ್ಲೋ - ಬಿ' ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನ ಸೆಳೆದಿದ್ದಾರೆ.

ಮುಂದೆ ತೆಲುಗಿನ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಪರಭಾಷೆಯ ಕಿರುತೆರೆ ವೀಕ್ಷಕರನ್ನು ಪವಿತ್ರಾ ಲೋಕೇಶ್ ರಂಜಿಸಿದ್ದಾರೆ. ಇದರ ಜೊತೆಗೆ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪವಿತ್ರಾ ಲೋಕೇಶ್ ಬಣ್ಣದ ಪಯಣ 'ಜೀವನ್ಮುಖಿ' ಧಾರಾವಾಹಿಯ ಮೂಲಕ ಶುರುವಾಗಿತ್ತು. ಟಿ.ಎನ್. ನಾಗಾಭರಣ ನಿರ್ದೇಶನದ 'ಜೀವನ್ಮುಖಿ'ಯ ಮೂಲಕ ಕಿರುಪರದೆಯಲ್ಲಿ ಕಾಣಿಸಿಕೊಂಡ ಈಕೆ ತದ ನಂತರ 'ಗುಪ್ತಗಾಮಿನಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

ಮುಂದೆ 'ಈಶ್ವರಿ', 'ಸ್ವಾಭಿಮಾನ', 'ಒಲವೇ ನಮ್ಮ ಬದುಕು', 'ದೇವಿ' ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಪವಿತ್ರಾ ಲೋಕೇಶ್ ಕೊನೆಯ ಬಾರಿ ನಟಿಸಿದ್ದು 'ಅರಮನೆ ಗಿಳಿ' ಧಾರಾವಾಹಿಯಲ್ಲಿ. ತದ ನಂತರ ಕನ್ನಡ ಕಿರುತೆರೆಯಿಂದ ಕೊಂಚ ದೂರವಿದ್ದ ಈಕೆ ಇದೀಗ 'ಲಕ್ಷ್ಮಿ ನಿವಾಸ'ದ ವನಜಾ ಪಾತ್ರದಲ್ಲಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಪರಭಾಷೆಯ ಧಾರಾವಾಹಿಗಳಾದ 'ಪುಸುಪ್ಪು ಕುಸುಮ' ಹಾಗೂ 'ಪುನ್ನಗ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪವಿತ್ರಾ '11 ಹವರ್' ಎನ್ನುವ ವೆಬ್ ಸಿರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

Pavitra Lokesh is charming on television as Vanaja in Lakshmi Nivasa serial

ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿರುವ ಪವಿತ್ರಾ ಲೋಕೇಶ್ ಕಳೆದ ವರ್ಷ ತೆರೆ ಕಂಡ 'ಮಲ್ಲಿ ಪೆಳ್ಳಿ' ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಆಕೆ ನರೇಶ್ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಆ ಸಿನಿಮಾ ಸಕತ್ ಸದ್ದು ಮಾಡಿತ್ತು. ಜೊತೆಗೆ ಒಂದಷ್ಟು ವಿವಾದಗಳನ್ನೂ ಕೂಡಾ ಹುಟ್ಟಾಕಿತ್ತು.

More from Filmibeat

English summary
Actress Pavitra Lokesh is charming on Kannada TV as Vanaja of Lakshmi Nivasa serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X