'ಲಕ್ಷ್ಮಿ ನಿವಾಸ'ಕ್ಕೆ ಹಿಂಗ್ ಬಂದು ಹಂಗೆ ಹೊರಟೇ ಹೋದ್ರು ಪವಿತ್ರಾ ಲೋಕೇಶ್..!
ಕಳೆದ ಕೆಲವು ತಿಂಗಳ ಹಿಂದೆ ಪವಿತ್ರಾ ಲೋಕೇಶ್ ಕುರಿತು ಸಾಕಷ್ಟು ವಿವಾದಗಳೇ ಸದ್ದು ಮಾಡಿದ್ದವು. ಒಂದರ ಹಿಂದೊಂದು ವಿವಾದ ಸುತ್ತಿಕೊಂಡು ರಾದ್ಧಾಂತವಾಗಿತ್ತು. ಅದ್ಯಾವುದಕ್ಕೂ ಹೆದರದ ಪವಿತ್ರಾ ಲೋಕೇಶ್, ತಮ್ಮ ಜೀವನವನ್ನು ಮುಂದುವರೆಸುತ್ತಾ ಸಾಗಿದ್ದರು. ಆದರೆ ಕನ್ನಡದಲ್ಲಿ ಕಾಣಿಸಿಕೊಂಡಿದ್ದೆ ಕಡಿಮೆ. 'ಮತ್ತೆ ಮದುವೆ' ಸಿನಿಮಾ ತೆಲುಗಿನಲ್ಲಿ ನಿರ್ಮಾಣವಾಗಿತ್ತು. ಕನ್ನಡ ವರ್ಷನ್ ಕೂಡ ರಿಲೀಸ್ ಆಗಿತ್ತು.
ಪವಿತ್ರಾ ಲೋಕೇಶ್‌ಗೆ ಕನ್ನಡದಲ್ಲೇನು ಅಭಿಮಾನಿಗಳ ಸಂಖ್ಯೆ ಕಮ್ಮಿಯಿಲ್ಲ. ಪೋಷಕ ಪಾತ್ರದಲ್ಲಿಯೇ ನಟಿಸಿದರು ಕೂಡ ಅವರನ್ನು ಇಷ್ಟ ಪಡುವವರು ಇದ್ದಾರೆ. ತೆಲುಗು ಚಿತ್ರರಂಗದಲ್ಲಿ ಒಂದಷ್ಟು ಸುದ್ದಿಯಾದ ಮೇಲೆ ಪವಿತ್ರಾ ಲೋಕೇಶ್ ಇನ್ನು ಮುಂದೆ ಕನ್ನಡಕ್ಕೆ ಬರಲ್ಲವೇನೋ ಎಂಬಂತ ಅನಿಸಿಕೆಗಳು ಶುರುವಾಗಿತ್ತು. ಆದರೆ ಆ ರೀತಿ ಆಗಲಿಲ್ಲ. ಈಗ ಹೋದ್ಯಾ ಪುಟ್ಟಿ ಬಂದ್ಯಾ ಪುಟ್ಟಿ ಅನ್ನೋ ರೀತಿ ಆಗಿ ಹೋಗಿದೆ.

'ಲಕ್ಷ್ಮೀ ನಿವಾಸ'ದಲ್ಲಿ ಪವಿತ್ರಾ ಲೋಕೇಶ್
ಪವಿತ್ರಾ ಲೋಕೇಶ್ ಕನ್ನಡದ ನಟಿ. ಅವರ ನಟನೆಗೆ ಎಲ್ಲರೂ ಫಿದಾ ಆಗಲೇಬೇಕು. ಒಳ್ಳೆ ನಟಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಧಾರಾವಾಹಿಗಳಿಂದ, ಕನ್ನಡ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ, ಮತ್ತೆ 'ಲಕ್ಷ್ಮೀ ನಿವಾಸ'ದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಾನಕಿಯಾಗಿ ಬಣ್ಣ ಹಚ್ಚಿದ್ದರು.
ಮದುವೆ ಸಂಭ್ರಮದಲ್ಲಿದ್ದವರಿಗೆ ಆಕ್ಸಿಡೆಂಟ್
ಪವಿತ್ರಾ ಗೌಡ ಅಲಿಯಾಸ್ ಜಾನಕಿಯ ಮಗ ಶ್ರೀಕಾಂತ್‌ನಿಗೆ ಮದುವೆ ಮಾಡಬೇಕೆಂಬ ಆಸೆ. ಅವನಿಗೆ ಮಗು ಬೇರೆ ಇತ್ತು. ಮಗುವನ್ನು, ಶ್ರೀಕಾಂತ್‌ನನ್ನು ಇಬ್ಬರನ್ನು ಪ್ರೀತಿಸುವ ಹುಡುಗಿ ಬೇಕಾಗಿತ್ತು. ಅದಕ್ಕೆ ಪಕ್ಕಾ ಮ್ಯಾಚ್ ಆಗಿದ್ದು ಮಾತ್ರ ಭಾವನಾ. ಜಾನಕಿ ಕಣ್ಣಿಗೆ ಭಾವನ ಬಿದ್ದಾಗಿನಿಂದ ಮದುವೆಯ ಮಾತುಕತೆಯೂ ನಡೆಯಿತು, ಮದುವೆ ಮಂಟಕ್ಕೆ ದಿಬ್ಬಣ ಹೊರಟಾಗಲೇ ಪವಿತ್ರಾ ಗೌಡ ಅಲಿಯಾಸ್ ಜಾನಕಿಯಿದ್ದ ಕಾರು ಅಪಘಾತಕ್ಕೆ ಈಡಾಗಿದೆ.

ಎರಡೇ ವಾರಕ್ಕೆ ಮುಗಿದ ಅಧ್ಯಾಯ
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನಟಿ ಶ್ವೇತಾ ಸೇರಿದಂತೆ ಹಿರಿಯ ಕಲಾವಿದರಿದ್ದಾರೆ. ಧಾರಾವಾಹಿ ಶುರುವಾಗುವುದಕ್ಕೂ ಮುನ್ನ ಪವಿತ್ರಾ ಲೋಕೇಶ್ ಇದ್ದಾರೆ ಎಂಬುದು ತಿಳಿದಿರಲಿಲ್ಲ. ಆದರೆ ಧಾರಾವಾಹಿ ಶುರುವಾದ ಕೆಲವೇ ದಿನಗಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಆಯ್ತು. ಮಗನ ಆಫೀಸಲ್ಲಿ ಖುಷಿಗೆ ಇಷ್ಟವಾದ ಭಾವನಾರನ್ನು ನೋಡುವ ಮೂಲಕ ಎಂಟ್ರಿ, ಅಂದೇ ಭಾವನಾರ ತಾಯಿಯನ್ನು ಭೇಟಿ ಮಾಡಿ, ಮದುವೆ ವಿಚಾರವನ್ನು ಇಟ್ಟರು. ಆಮೇಲೆ ನಾಲ್ಕು ದಿನದಲ್ಲಿ ಮದುವೆ ತಯಾರಿ, ಐದನೇ ದಿನಕ್ಕೆ ಆಕ್ಸಿಡೆಂಟ್. ಎರಡು ವಾರಗಳಷ್ಟೇ ಲಕ್ಷ್ಮೀ ನಿವಾಸದ ಜರ್ನಿಯಲ್ಲಿ ಇದ್ದದ್ದು ಪವಿತ್ರಾ ಲೋಕೇಶ್.
ಮೂಢನಂಬಿಕೆಯೇ ಸತ್ಯವಾಗುವಂತಾಯ್ತು..!
ಈ ಧಾರಾವಾಹಿಯಲ್ಲಿ ಜಾತಕ ದೋಷದ ಮೂಢನಂಬಿಕೆಯೊಂದಿದೆ. ಭಾವನಾ ಮೂಲ ನಕ್ಷತ್ರದಲ್ಲಿ ಹುಟ್ಟಿರುವುದು. ಹೀಗಾಗಿ ಭಯಕ್ಕೆ ಯಾರೂ ಮದುವೆಯಾಗುವುದಕ್ಕೆ ಮುಂದೆ ಬಂದಿರಲಿಲ್ಲ. ಆದರೆ ಜಾತಕವನ್ನೇ ನಂಬದ ಜಾನಕಿ ಮತ್ತು ಶ್ರೀಕಾಂತ್ ಮದುವೆಯಾಗಲು ಮುಂದೆ ಬಂದರು. ಈಗ ಮದುವೆ ನಡೆಯದೇ ಗಂಡಿನ ಮನೆಯವರು ಮಸಣ ಸೇರಿದ್ದಾರೆ. ಈ ಮೂಲಕ ಆ ಮೂಢನಂಬಿಕೆಯನ್ನು ಈ ಧಾರಾವಾಹಿ ಹೀಗೆ ಉಳಿಸಿ ಬಿಟ್ಟಿತಲ್ಲ ಎಂಬ ಬೇಸರವಂತೂ ಹಲವರಲ್ಲಿ ಇದೆ.


Click it and Unblock the Notifications











