Pavitra Naik: ಅರಸನ ಕೋಟೆಯ ಸೊಸೆಗೆ ಕಿರುತೆರೆಯೊಂದಿಗೆ ವಿಶೇಷ ನಂಟು

By ಅನಿತಾ ಬನಾರಿ

ಕಿರುತೆರೆಯ ಮೂಲಕ ನಟನೆಗಿಳಿಯುವವರು ಪರ್ಮನೆಂಟ್ ಆಗಿ ಅಲ್ಲೇ ಉಳಿಯುತ್ತಾರೆ ಎನ್ನುವಂತಿಲ್ಲ. ಹೆಚ್ಚಿನವರು ಬೆಳ್ಳಿತೆರೆಯಲ್ಲಿ ತಮ್ಮ ಬದುಕನ್ನು ಕಂಡುಕೊಳ್ಳಲು ಬಯಸುತ್ತಾರೆ. ಇನ್ನು ಹೆಚ್ಚು ಫೇಮಸ್ ಆಗುವ ದೃಷ್ಟಿಯಿಂದಲೂ ಕೆಲವರು ಅದನ್ನು ಆರಿಸುವುದುಂಟು. ಹಾಗೆಂದು ಈ ಮಾತನ್ನು ಎಲ್ಲರಿಗೂ ಹೇಳುವಂತಿಲ್ಲ. ಕಿರುತೆರೆಯಲ್ಲಿ ಉದ್ಯೋಗವನ್ನು ಆರಂಭಿಸಿದವರು ಕೊನೆಯ ತನಕ ಅದರಲ್ಲೇ ಉಳಿಯುವವರೂ ಇದ್ದಾರೆ. ಇನ್ನು ಕೆಲವರು ಅದಲು ಬದಲು ಮಾಡುತ್ತಾರೆ. ಅಂತಹವರಲ್ಲಿ ಒಬ್ಬರು ಪವಿತ್ರಾ ನಾಯ್ಕ್.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಬಹುತೇಕರ ನೆಚ್ಚಿನ ಧಾರಾವಾಹಿಯಾಗಿರುವ ಇದರಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿಯ ಎರಡನೇ ಸೊಸೆ ನಿಮಗೆಲ್ಲಾ ಗೊತ್ತೇ ಇರಬೇಕು. ಹೌದು, ಅವರೇ... ಪ್ರೀತಮ್ ಪತ್ನಿ ಜನನಿಯಾಗಿ ನಟಿಸುತ್ತಿರುವ ಚಿಕ್ಕಮಗಳೂರಿನ ಚೆಲುವೆಯ ಹೆಸರು ಪವಿತ್ರಾ ನಾಯ್ಕ್.

 ಪವಿತ್ರಾ ನಾಯ್ಕ್‌ಗೆ ಕಿರುತೆರೆಯೇ ವಿಳಾಸ

ಪವಿತ್ರಾ ನಾಯ್ಕ್‌ಗೆ ಕಿರುತೆರೆಯೇ ವಿಳಾಸ

ಅಭಿನಯದ ಮೂಲಕ ಮನೆ ಮಾತಾಗಿರುವ ಇವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಬೆಳ್ಳಿತೆರೆಯ ಮೂಲಕ ಎನ್ನುವುದು ವಿಶೇಷ. ಆದರೆ ಪವಿತ್ರಾ ನಾಯ್ಕ್‌ಗೆ ಯಶಸ್ಸಿನ ಯಾನವನ್ನು ನೀಡಿದ್ದು ಮಾತ್ರ ಕಿರುತೆರೆ. ಅಂದ ಹಾಗೆ ಇವರು 'ಎಲ್ಲಿ ನನ್ನ ವಿಳಾಸ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟನಾ ಜಗತ್ತಿಗೆ ರಂಗ ಪ್ರವೇಶ ಮಾಡಿದ್ದರು. ಮುಂದೆ 'ಸ್ವೇಚ್ಛ', 'ಲಡ್ಡು' ಚಿತ್ರಗಳಲ್ಲಿ ಅಭಿನಯಿಸಿದ ಪವಿತ್ರಾ ತದ ನಂತರ ಮುಖ ಮಾಡಿದ್ದು ಕಿರುತೆರೆಯತ್ತ.

 'ರಕ್ಷಾಬಂಧನ'ದ ನಂದಿನಿಯಾಗಿ ಕಿರುತೆರೆ ಪಯಣ

'ರಕ್ಷಾಬಂಧನ'ದ ನಂದಿನಿಯಾಗಿ ಕಿರುತೆರೆ ಪಯಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಪವಿತ್ರಾ ನಾಯ್ಕ್ ಅದನ್ನು ಸಂತಸದಿಂದ ಒಪ್ಪಿಕೊಂಡರು. ಅಣ್ಣ ತಂಗಿಯರ ನಡುವಿನ ಬಾಂಧವ್ಯದ ಕುರಿತಾಗಿದ್ದ ಈ ಧಾರಾವಾಹಿಯಲ್ಲಿ ನಾಯಕಿ ನಂದಿನಿಯಾಗಿ ಪವಿತ್ರಾ ನಾಯ್ಕ್‌ ಬಣ್ಣ ಹಚ್ಚಿದರು.

 'ಕಾದಂಬರಿ'ಯಾಗಿ ಮೋಡಿ

'ಕಾದಂಬರಿ'ಯಾಗಿ ಮೋಡಿ

ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಎರಡನೇ ಸೊಸೆಯಾಗಿ ಅಭಿನಯಿಸುತ್ತಿದ್ದು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪವಿತ್ರಾ ನಾಯ್ಕ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾದಂಬರಿ' ಧಾರಾವಾಹಿಯಲ್ಲಿ ನಾಯಕಿ ಕಾದಂಬರಿಯಾಗಿ ಮಿಂಚಿ ಸೈ ಎನಿಸಿಕೊಂಡರು. ಇದರ ಜೊತೆಗೆ ತೆಲುಗು ಕಿರುತೆರೆಗೂ ಕಾಲಿಟ್ಟಿರುವ ಪವಿತ್ರಾ 'ನುವ್ವೆ ನೇನು ಪ್ರೇಮ' ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

 ಕಿರುತೆರೆ ಒಂದು ಹೊಸ ಲೋಕ

ಕಿರುತೆರೆ ಒಂದು ಹೊಸ ಲೋಕ

ಬೆಳ್ಳಿತೆರೆಯಲ್ಲಿ ಅದೆಷ್ಟೇ ಬೆಳಗಿದ್ದರೂ ಕಿರುತೆರೆ ಒಂದು ರೀತಿಯಲ್ಲಿ ಹೊಸ ಲೋಕದಂತೆಯೇ ಭಾಸವಾಗುವಂತಿದೆ. ಅಲ್ಲಿ ಮೂರು ಗಂಟೆಯ ಸಿನಿಮಾಕ್ಕಾಗಿ ಬಣ್ಣ ಹಚ್ಚಿ ಮುಗಿಸುವುದಾದರೆ ಇಲ್ಲಿ ಅದೆಷ್ಟೋ ಕಂತುಗಳ ಧಾರಾವಾಹಿಗಾಗಿ ಅದೇ ಪಾತ್ರವನ್ನು ನಿಭಾಯಿಸುತ್ತಲೇ ಇರಬೇಕು. ಅಲ್ಲದೆ ದೊರೆತದ್ದು ನಾಯಕಿಯ ಪಾತ್ರ. ಸ್ವಲ್ಪ ಹೆಚ್ಚಿನ ಏಕಾಗ್ರತೆಯಂತೂ ಮುಖ್ಯವಾಗುತ್ತದೆ. ವೀಕ್ಷಕರು ತನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯದೊಂದಿಗೆ ಕಿರುತೆರೆಗೆ ಕಾಲಿಟ್ಟ ನಟಿ ಮೊದಲ ಧಾರಾವಾಹಿಯಲ್ಲಿಯೇ ಗೆದ್ದು, ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

More from Filmibeat

English summary
Pavitra Naik, who played the role of Janani in the serial Paru, started her acting journey on the big screen, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X