ಸ್ಯಾಂಡಲ್‌ವುಡ್‌ಗೆ ಎಂಟ್ರಿ 'ಅಮೃತಾಂಜನ್' ಬ್ಯೂಟಿ; ಪಾಯಲ್ ಚೆಂಗಪ್ಪ ಕಿರುಚಿತ್ರಗಳ್ಯಾವುವು ಗೊತ್ತೇ?

By ಅನಿತಾ ಬನಾರಿ

ಸೋಶಿಯಲ್ ಮೀಡಿಯಾ.. ಇದರ ಮೂಲಕ ಅನೇಕ ನಟ ನಟಿಯರು ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಸೋಶಿಯಲ್ ಮೀಡಿಯಾದ ಮೂಲಕ ಎಲೆಮರೆಯ ಕಾಯಿಯಂತಿದ್ದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿವೆ, ಬರುತ್ತಿದ್ದಾರೆ. ಅವರ ಪೈಕಿ ಪಾಯಲ್ ಚೆಂಗಪ್ಪ ಕೂಡಾ ಒಬ್ಬರು. ಕಿರುಚಿತ್ರದ ಮೂಲಕ ನಟನಾ ಜಗತ್ತಿನ ನಂಟು ಬೆಳೆಸಿಕೊಂಡಿರುವ ಪಾಯಲ್ ಚೆಂಗಪ್ಪ ಇದೀಗ ಸ್ಯಾಂಡಲ್‌ವುಡ್‌ನಲ್ಲಿಯೂ ಕಮಾಲ್ ಮಾಡುತ್ತಿರುವ ಕುವರಿ.

'ಅಮೃತಾಂಜನ್' ಎನ್ನುವ ಕಿರುಚಿತ್ರದಲ್ಲಿ ನಟಿಸಿದ್ದ ಪಾಯಲ್ ಚೆಂಗಪ್ಪ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ತದ ನಂತರ ಹಿಂತಿರುಗಿ ನೋಡದ ಆಕೆ 'ಶೆಟ್ರು ಸಂಸಾರ', 'ಸೋಡಾ ಬುಡ್ಡಿ', 'ಜುಗ್ಗ ನನ್ನ ಗಂಡ' ಮುಂತಾದ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಖಡಕ್ ನಟನೆಯ ಮೂಲಕ ನೆಟ್ಟಿಗರ ಮನ ಸೆಳೆದಿದ್ದಾರೆ.

Payal Chengappa who gain popularity in short films is entering movies with credit Kumara

ಕಿರುಚಿತ್ರಗಳ ಹೊರತಾಗಿ ಮ್ಯೂಸಿಕ್ ಆಲ್ಬಂನಲ್ಲಿಯೂ ನಟಿಸಿ ಮೋಡಿ ಮಾಡಿರುವ ಬೆಡಗಿ ಈಕೆ. 'ಹೇ ಸಂಚಾರಿ' ಎನ್ನುವ ಮ್ಯೂಸಿಕ್ ಆಲ್ಬಂನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪಾಯಲ್ ಚೆಂಗಪ್ಪ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ ಬೆಡಗಿ‌‌. 'ದ್ವಿಪಾತ್ರ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಈಕೆ ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಕ್ರೆಡಿಟ್ ಕುಮಾರ' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಪಾಯಲ್ ಚೆಂಗಪ್ಪ ನಟಿಸುತ್ತಿದ್ದು, ಪತ್ರಕರ್ತ ಹರೀಶ್ ಸೀನಪ್ಪ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಜೋಡಿಯಾಗಿದ್ದಾರೆ. 'ಕ್ರೆಡಿಟ್ ಕುಮಾರ' ಸಿನಿಮಾದ ಮುಹೂರ್ತ ಈಗಾಗಲೇ ನಡೆದಿದ್ದು, ಧ್ರುವ ಸರ್ಜಾ ಅವರು ಚಾಲನೆ ನೀಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಅವರು ಶುಭಹಾರೈಸಿದ್ದಾರೆ‌.

ತಮ್ಮ ಪಾತ್ರದ ಬಗ್ಗೆಯೂ ಹಂಚಿಕೊಂಡಿದ್ದಾರೆ ಪಾಯಲ್ ಚೆಂಗಪ್ಪ. "ಭೂಮಿ ಎನ್ನುವ ಪಾತ್ರಕ್ಕೆ ನಾನು ಜೀವ ತುಂಬುತ್ತಿದ್ದೇನೆ. ಬ್ಯೂಟಿಶಿಯನ್ ಆಗಿ ನಾನು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಿಡಲ್‌ ಕ್ಲಾಸ್ ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಆಕೆ ಹೇಳಿಕೊಂಡಿದ್ದಾರೆ.

Payal Chengappa who gain popularity in short films is entering movies with credit Kumara

ಈಗಾಗಲೇ ನಾನು ಅನೇಕ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನೀವೆಲ್ಲಾ ಕಿರುಚಿತ್ರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಪ್ರೋತ್ಸಾಹವನ್ನು ಕೂಡಾ ನೀಡಿದ್ದೀರಿ. ಇದೀಗ ಚಂದನವನಕ್ಕೆ ಕಾಲಿಟ್ಟಿರುವ ನನಗೆ ನಿಮ್ಮ ಬೆಂಬಲ, ಪ್ರೀತಿ, ಪ್ರೋತ್ಸಾಹ ಇರಲಿ ಎಂದು ನಟಿ ಪಾಯಲ್ ಚೆಂಗಪ್ಪ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಕಿರುಚಿತ್ರಗಳ ಮೂಲಕ ಮೋಡಿ ಮಾಡುತ್ತಿದ್ದ ಪಾಯಲ್ ಚೆಂಗಪ್ಪ ಈಗ ಮೊದಲ ಬಾರಿಗೆ ಹಿರಿತೆರೆಗೆ ಕಾಲಿಡುತ್ತಿದ್ದು ಸಿನಿ ಪ್ರಿಯರನ್ನು ರಂಜಿಸಲಿದ್ದಾರೆ. ಜೊತೆಗೆ ಇಷ್ಟು ದಿನಗಳ ಕಾಲ ಕೇವಲ ಕಿರುಚಿತ್ರದಲ್ಲಷ್ಟೇ ಪಾಯಲ್ ಅವರ ನಟನೆಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ವೀಕ್ಷಕರಿಗೆ ಇದೀಗ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ.

More from Filmibeat

English summary
Payal Chengappa who gain popularity in short films is entering movies with credit Kumara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X