For Quick Alerts
  ALLOW NOTIFICATIONS  
  For Daily Alerts

  ದಯವಿಟ್ಟು ವದಂತಿ ಹಬ್ಬಿಸಬೇಡಿ; ನಟಿ ಪಾಯಲ್ ಮನವಿ ಮಾಡಿದ್ದೇಕೆ?

  |

  ದಯವಿಟ್ಟು ಈ ರೀತಿಯ ವದಂತಿ ಹಬ್ಬಿಸಬೇಡಿ ಎಂದು ಬಹುಭಾಷಾ ನಟಿ ಪಾಯಲ್ ರಜಪೂತ್ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಪಾಯಲ್ ಹೀಗೆ ಹೇಳಿದ್ದೇಕೆ? ನಟಿ ಪಾಯಲ್ ತೆಲುಗು ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೀಡಿರುವ ಪಾಯಲ್ ವದಂತಿ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

  ಅಂದಹಾಗೆ ತೆಲುಗು ಬಿಗ್ ಬಾಸ್ ಸೀಸನ್ 5ಗೆ ಸಿದ್ಧತೆ ನಡೆಯುತ್ತಿದೆ. ಇತ್ತೀಚಿಗೆಷ್ಟೆ ತೆಲುಗು ಬಿಗ್ ಬಾಸ್ ಸೀಸನ್ 4 ಯಶಸ್ವಿಯಾಗಿ ಮುಗಿದಿದ್ದು, ಆಗಲೇ ಬಿಗ್ ಬಾಸ್-5ಗೆ ತಯಾರಿ ನಡೆಯುತ್ತಿದೆ. 2020ರ ಸೆಪ್ಟೆಂಬರ್ 6 ರಂದು ಪ್ರಾರಂಭವಾಗಿದ್ದ ತೆಲುಗು ಬಿಗ್‌ಬಾಸ್ 4, ಡಿಸೆಂಬರ್ 20ಕ್ಕೆ ಅಂತ್ಯವಾಗಿತ್ತು. ಫಿನಾಲೆಗೆ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದರು.

  4ನೇ ಸೀಸನ್ ಮುಗಿದು 6 ತಿಂಗಳೊಳಗೆ ಮತ್ತೊಂದು ಸೀಸನ್ ಗೆ ಯೋಜನೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಮಂದಿಯ ಹೆಸರು ಕೇಳಿಬರುತ್ತಿದೆ. ಖ್ಯಾತ ನಟಿಯರ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ನಲ್ಲಿ ಓಡಾಡುತ್ತಿದ್ದು, ಪಾಯಲ್ ರಜಪೂತ್ ಹೆಸರು ಕೂಡ ವೈರಲ್ ಆಗಿದೆ.

  ಆದರೆ ಈ ಬಗ್ಗೆ ಪಾಯಲ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಗ್ ಬಾಸ್ ಗೆ ಹೋಗಲ್ಲ ಎಂದಿದ್ದಾರೆ. 'ನಾನು ತೆಲುಗು ಬಿಗ್ ಬಾಸ್ 5ನ ಭಾಗವಾಗಿಲ್ಲ. ನನ್ನ ವಿನಮ್ರ ಮನವಿ. ದಯವಿಟ್ಟು ಇಂಥ ವದಂತಿಗಳನ್ನು ಹಬ್ಬಿಸಬೇಡಿ' ಎಂದು ಕೇಳಿಕೊಂಡಿದ್ದಾರೆ.

  ಮೂಲಗಳ ಪ್ರಕಾರ ಆಯೋಜಕರು ಜೂನ್ 5 ರಿಂದ ಬಿಗ್ ಬಾಸ್ ಸೀಸನ್-5ಅನ್ನು ನಡೆಸಲು ಪ್ಲಾನ್ ಮಾಡಿದ್ದರಂತೆ. ಆದರೆ ಕೊರೊನಾ ಲಾಕ್ ಡೌನ್ ನಿಂದ ಮುಂದಕ್ಕೆ ಹೋಗಿದ್ದು, ಆಗಸ್ಟ್ ತಿಂಗಳಿಂದ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

  ಕಳೆದ ಸೀಸನ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ, ಸೀಸನ್ 5 ಅನ್ನು ನಡೆಸಿಕೊಡಲಿದ್ದಾರೆ. ನಾಗಾರ್ಜುನ್ ಸೀಸನ್ 3 ಮತ್ತು 4 ನಡೆಸಿಕೊಟ್ಟಿದ್ದು ಇದು ದಾಖಲೆಯ ಟಿ ಆರ್ ಪಿ ಗಳಿಸಿತ್ತು. ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದನೆ ಮಾಡಿದೆ.

  English summary
  Payal Rajput reaction about part of Bigg Boss Telugu 5. She says not part of Bigg Boss telugu 5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X