For Quick Alerts
  ALLOW NOTIFICATIONS  
  For Daily Alerts

  ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಟ ಪರ್ಲ್ ಬೆಂಬಲಕ್ಕೆ ನಿಂತ ಸಂತ್ರಸ್ತೆ ತಾಯಿ

  |

  ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪದ ಮೇರೆಗೆ ಜೈಲು ಸೇರಿರುವ ಕಿರುತೆರೆ ಖ್ಯಾತ ನಟ ಪರ್ಲ್ ವಿ ಪುರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಪೋಷಕರು ದೂರು ನೀಡಿದ ಆಧಾರದ ಮೇಲೆ ಪರ್ಲ್ ವಿ ಪುರಿಯನ್ನು ಬಂಧಿಸಲಾಗಿದೆ.

  ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ಎರಡು ವರ್ಷದ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ವೆಸಗಿದ್ದಾರೆ ಎಂದು ಸಂತ್ರಸ್ತೆ ಕುಟುಂಬದವರು ಆರೋಪ ಮಾಡಿದ್ದಾರೆ. ಇದೀಗ ಸಂತ್ರಸ್ತೆ ತಾಯಿ ಏಕ್ತಾ ಶರ್ಮಾ ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಲ್ಲುವ ಮೂಲಕ ಪ್ರಕರಣಕ್ಕೆ ತಿರುವು ಸಿಕ್ಕಿದೆ.

  ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಕಿರುತೆರೆ ನಟ ಬಂಧನಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಕಿರುತೆರೆ ನಟ ಬಂಧನ

  ಸಂತ್ರಸ್ತೆ ತಾಯಿ ಏಕ್ತಾ ಶರ್ಮಾ ಅವರ ಹತ್ತಿರದ ಸಂಬಂಧಿ ಆರತಿ ಪುರಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು, ಏಕ್ತಾ ಶರ್ಮಾ ಮತ್ತು ಪತಿ ನಡುವೆ ಅನೇಕ ವರ್ಷಗಳಿಂದ ವೈಮನಸ್ಸು ಇದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳನ್ನು ಸುಪರ್ದಿಗೆ ಪಡೆಯುವ ಉದ್ದೇಶದಿಂದ ಏಕ್ತಾ ಪತಿ ಹೀಗೆ ಮಾಡಿದ್ದಾರೆ ಎನ್ನುವ ಆಘಾತಕಾರಿ ವಿಚಾರ ಬಹಿರಂಗ ಪಡಿಸಿದ್ದಾರೆ. ಓದಿ..

  ದಾಂಪತ್ಯ ಕಲಹದಿಂದ ಜೈಲು ಸೇರಿದ್ರಾ ಪರ್ಲ್ ವಿ ಪುರಿ

  ದಾಂಪತ್ಯ ಕಲಹದಿಂದ ಜೈಲು ಸೇರಿದ್ರಾ ಪರ್ಲ್ ವಿ ಪುರಿ

  ಏಕ್ತಾ ಮತ್ತು ಪತಿ 'ಕಳೆದ 10 ವರ್ಷಗಳಿಂದ ದಾಂಪತ್ಯ ಕಲಹ ಅನುಭವಿಸುತ್ತಿದ್ದರೆ. 2 ವರ್ಷಗಳಿಂದ ಮಗಳು ಏಕ್ತಾ ಜೊತೆ ಇಲ್ಲ. ಈ ವಿಚಾರದಲ್ಲಿ ಪರ್ಲ್ ವಿ ಪುರಿ, ಏಕ್ತಾಗೆ ಬೆಂಬಲಿಸಿದ್ದಾರೆ. ಶೀಘ್ರದಲ್ಲೇ ನ್ಯಾಯ ಹೊರಬರಲಿದೆ ಎಂದು ಭಾವಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

  ಮಗಳ ಸುಪರ್ದಿ ಪಡೆಯಲು ಮಾಡಿದ ಮೋಸ

  ಮಗಳ ಸುಪರ್ದಿ ಪಡೆಯಲು ಮಾಡಿದ ಮೋಸ

  'ಸಂತ್ರಸ್ತೆಯ ತಾಯಿ ಏಕ್ತಾ ಶರ್ಮಾ ಮಗಳನ್ನು ಸುಪರ್ದಿ ಪಡೆಯಲು ಹೋರಾಡುತ್ತಿದ್ದಾರೆ. ಹಾಗಾಗಿ ಪರ್ಲ್ ವಿ ಪುರಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. ಏಕ್ತಾ ಈಗಾಗಲೇ ಕುಗ್ಗಿಹೋಗಿದ್ದಾಳೆ. ಬಹಿರಂಗವಾಗಿ ಹೋರಾಡಲು ನಿಮ್ಮ ಬೆಂಬಲ ಬೇಕು.' ಎಂದು ಕೇಳಿಕೊಂಡಿದ್ದಾರೆ.

  ಪರ್ಲ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ

  ಪರ್ಲ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ

  'ಪರ್ಲ್ ವಿ ಪುರಿಯ ಬೆಂಬಲಕ್ಕೆ ಏಕ್ತಾ ನಿಂತಿದ್ದಾರೆ. ಪರ್ಲ್ ವಿ ಪುರಿ ನಿರಪರಾಧಿ. ಅನಗತ್ಯವಾಗಿ ಪರ್ಲ್ ವಿ ಪುರಿ ಮೇಲೆ ಆರೋಪ ಮಾಡಲಾಗಿದೆ. ಏಕ್ತಾ ಪತಿ ಬರೆದ ಚೀಪ್ ಕಥೆಯಲ್ಲಿ ಇದು ಒಂದು. ಅಂತಿಮವಾಗಿ ನ್ಯಾಯ ಗೆಲ್ಲುತ್ತದೆ' ಎಂದು ಬರೆದುಕೊಂಡಿದ್ದಾರೆ. ನಟಿ ಆರತಿ ಪುರಿ ಪೋಸ್ಟ್ ಅನ್ನು ಏಕ್ತಾ ಶರ್ಮಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

  ಪರ್ಲ್ ಬೆಂಬಲಕ್ಕೆ ನಿಂತ ಕಲಾವಿದರು

  ಪರ್ಲ್ ಬೆಂಬಲಕ್ಕೆ ನಿಂತ ಕಲಾವಿದರು

  ನಟ ಪರ್ಲ್ ವಿ ಪುರಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ 31 ವರ್ಷದ ನಟ ಪರ್ಲ್ ವಿ ಪುರಿ ವಿರುದ್ಧ ಸೆಕ್ಷನ್ 376 ಮತ್ತು 2012ರ ಪೋಕ್ಸೋ ಕಾಯ್ದೆಯಡೆ ಪ್ರಕರಣ ದಾಖಲಾಗಿದೆ. ಕಿರುತೆರೆಯ ಅನೇಕ ಕಲಾವಿದರು ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತಿದ್ದಾರೆ.

  English summary
  TV Actor Pearl V Puri rape case; Rape victim's mother supoort Pearl V Puri ans she says he is innocent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X