ಪರ್ಫಾಮೆನ್ಸ್ ಸುತ್ತಿನಲ್ಲಿ ಮಿಂಚಿದ ಅಭಿಸ್ಯಂತ್ - ಮೋನಮ್ಮ
ಸರಿಗಮಪ ಕಾರ್ಯಕ್ರಮದಲ್ಲಿ ಪ್ರತಿ ವಾರ ಕೂಡ ಒಂದೊಂದು ವಿಶೇಷ ಸಂಚಿಕೆಗಳು ಪ್ರಸಾರ ಆಗುತ್ತಿದೆ. ಅದೇ ರೀತಿ ಈ ವಾರ ಪರ್ಫಾಮೆನ್ಸ್ ಸುತ್ತು ನಡೆಯುತ್ತಿದೆ.
ಈ ಸುತ್ತಿನಲ್ಲಿ ಎಲ್ಲ ಸ್ಪರ್ಧಿಗಳು ಚಿಂದಿ ಪರ್ಫಾಮೆನ್ಸ್ ನೀಡಿರುವ ಸೂಚನೆ ಸಿಕ್ಕಿದೆ. ಸ್ಪರ್ಧಿಗಳಾದ ಅಭಿಸ್ಯಂತ್ ಮತ್ತು ಮೋನಮ್ಮ ಅವರ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ಅಭಿಸ್ಯಂತ್ ಹಾಗೂ ಮೋನಮ್ಮ ಕಾರ್ಯಕ್ರಮದ ಪ್ರತಿಭಾವಂತ ಗಾಯಕರು. ಆದರೆ, ಅವರು ಇನ್ನು ಒಪನ್ ಆಗಿರಲಿಲ್ಲ. ಕೊಂಚ ನಾಚಿಕೆ, ಅಂಜಿಕೆ ಅವರಿಗೆ ಇತ್ತು. ಆದರೆ, ಅದನ್ನು ಈ ಸುತ್ತು ಹೋಗಲಾಡಿಸಿದೆ.
ಕಾರ್ಯಕ್ರಮದ ಪ್ರೊಮೋ ನೋಡಿದರೆ ಇಬ್ಬರು ಸ್ಪರ್ಧಿಗಳು ಮೈ ಚಳಿ ಬಿಟ್ಟು ಕುಣಿದಿದ್ದಾರೆ. 'ಕೆಂಪೇಗೌಡ' ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಅಭಿಸ್ಯಂತ್ ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದುಕೊಂಡಿದ್ದಾನೆ.
ಇತ್ತ ಮೊನಮ್ಮ ಡ್ಯಾನ್ಸ್ ನೋಡಿ ಹಂಸಲೇಖ ಅವರೆ 'ಮೋನಮ್ಮ.. ಏನಮ್ಮ..' ಎಂದು ಆಶ್ಚರ್ಯ ಪಟ್ಟಿದ್ದಾರೆ. ಪರ್ಫಾಮೆನ್ಸ್ ಸುತ್ತಿನಲ್ಲಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಇರುವುದು ಪಕ್ಕಾ ಆಗದೆ.
ಅಂದಹಾಗೆ, ಸರಿಗಮಪ ಕಾರ್ಯಕ್ರಮ ಇಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.


Click it and Unblock the Notifications











