ನಟಿ ಶೃತಿ ಕೃಷ್ಣ ಹಂಚಿಕೊಂಡ ಫೋಟೋ ವೈರಲ್; ಅಪರೂಪದ ಕ್ಷಣವನ್ನು ನೆನೆದ ಹಿರಿಯ ನಟಿ

By ಅನಿತಾ ಬನಾರಿ

ನಟಿ ಶ್ರುತಿ ಕೃಷ್ಣ ಅವರು ಯಾರಿಗೆ ಗೊತ್ತಿಲ್ಲ ಹೇಳಿ? ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ನಟಿ ಶ್ರುತಿ ಕೃಷ್ಣ ಅವರು ವಿಶೇಷ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ. ಫೋಟೋದಲ್ಲಿ ಡಾ. ರಾಜಕುಮಾರ್ ಅವರು ನಟಿ ಶ್ರುತಿ ಕೃಷ್ಣ ಅವರಿಗೆ ಒಂದು ಅವಾರ್ಡನ್ನು ಕೊಡುತ್ತಿದ್ದು, ಅದು ನೂರು ದಿನದ ಅವಾರ್ಡ್ ಶೀಲ್ಡ್ ಆಗಿದೆ.

ಹೌದು, ನಟಿ ಶ್ರುತಿ ಕೃಷ್ಣ ಅವರ ತವರಿನ ತೊಟ್ಟಿಲು ಸಿನಿಮಾ ನೂರು ದಿನಗಳ ಕಾಲ ಓಡಿತ್ತು. ನಟ ರಾಮ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಶ್ರುತಿ ಕೃಷ್ಣ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾವನ್ನು ಎಸ್ ನಾರಾಯಣ್ ಅವರು ನಿರ್ದೇಶಿಸಿದ್ದರು. ಸಿನಿಮಾ ನೂರು ದಿನಗಳ ಕಾಲ ಓಡಿದ್ದಕ್ಕೆ ನಟ ಡಾ.ರಾಜಕುಮಾರ್ ಅವರು ಇಡೀ ಸಿನಿಮಾ ತಂಡವನ್ನು ಕರೆದು ಅಭಿನಂದಿಸಿದ್ದರು. ಆ ಅಪರೂಪದ ಕ್ಷಣದ ಫೋಟೋ ಇದಾಗಿದೆ.

Photo shared by actress Shruti Krishna went viral actress remembered a rare moment

ಈ ಫೋಟೋವನ್ನು ಶೇರ್ ಮಾಡಿಕೊಂಡ ನಟಿ ಶ್ರುತಿ ಕೃಷ್ಣ ಅವರು "ಅಪರೂಪದ ಹಾಗೂ ವಿಶೇಷವಾದ ಫೋಟೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದೇನೆ. ನಾನು ನಾಯಕಿಯಾಗಿ ನಟಿಸಿದ ಚಿತ್ರ 'ತವರಿನ ತೊಟ್ಟಿಲು' 100 ದಿನದ ಕಾರ್ಯಕ್ರಮ. ಈ ಚಿತ್ರದ ನಿರ್ದೇಶಕರಿಗೆ ಧನ್ಯವಾದಗಳು (ಎಸ್ ನಾರಾಯಣ್) ಹಾಗೂ ನನ್ನನು ಈ ಚಿತ್ರರಂಗಕ್ಕೆ ಪರಿಚಯಿಸಿದ ರಾಜಕುಮಾರ್ ಅಪ್ಪಾಜಿಯವರ ಸಂಸ್ಥೆಗೆ, ನನ್ನನು ಆಶೀರ್ವದಿಸಿದ ಅಭಿಮಾನಿಗಳಿಗೆ ಕೋಟಿ ಕೋಟಿ ನಮನಗಳು" ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ಆಗೆಲ್ಲ ನೂರು ದಿನಗಳ ಕಾಲ ಒಂದು ಸಿನಿಮಾ ಓಡಿದೆ ಎಂದರೆ ಬಹಳ ದೊಡ್ಡ ವಿಚಾರವಾಗಿತ್ತು. ಅಂತಹ ಸಂದರ್ಭಗಳಲ್ಲಿ ಸಿನಿಮಾ ರಂಗದ ಮೇರು ನಟರು ಇಡೀ ಸಿನಿಮಾ ತಂಡವನ್ನು ಕರೆದು ಅಭಿನಂದಿಸುವ ಒಂದು ಪರಿಪಾಠವಿತ್ತು. ಆಂತೆಯೇ ಈ ತವರಿನ ತೊಟ್ಟಿಲು ಸಿನಿಮಾ ಯಶಸ್ಸು ಕಂಡಾಗ ಈ ರೀತಿಯ ಕಾರ್ಯಕ್ರಮವನ್ನು ಏರ್ಪಾಡು ಮಾಡಿದ್ದರು. ಈ ಸುಂದರ ಕ್ಷಣವನ್ನು ನೆನೆದಿರುವ ನಟಿ ಶ್ರುತಿ ಕೃಷ್ಣ ಅವರು, ತಮ್ಮ ಎಲ್ಲಾ ಸಹ ನಟರಿಗೂ ಹಾಗೂ ಪ್ರೇಕ್ಷಕರು ಅಭಿಮಾನಿಗಳಿಗೂ ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ.

ಚರಣ್ ರಾಜ್ ಅವರು ಬರೆದ ಕಥೆ "ತವರಿನ ತೊಟ್ಟಿಲು" ಕಥೆಯನ್ನು ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿದ್ದರು. ಡಾಕ್ಟರ್ ರಾಜ್ ಕುಮಾರ್ ಅವರ ಅಳಿಯನೇ ಆದ ನಟ ರಾಮ್ ಕುಮಾರ್ ಅವರು ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಶ್ರುತಿ ಕೃಷ್ಣ ಅವರು ತಂಗಿಯ ಪಾತ್ರದಲ್ಲಿ. ಕನ್ನಡದಲ್ಲಿ ಬಹು ದೊಡ್ಡ ಯಶಸ್ಸನ್ನು ಕಂಡ ಈ ಸಿನಿಮಾವನ್ನು ತಮಿಳಿಗೆ ರೀಮೇಕ್ ಮಾಡಲಾಯಿತು.

Photo shared by actress Shruti Krishna went viral actress remembered a rare moment

ತಮಿಳಿನಲ್ಲಿ ಈ ಸಿನಿಮಾವನ್ನು ಚರಣ್ ರಾಜ್ ಅವರೇ ನಿರ್ದೇಶನ ಮಾಡಿದರು. ಅಣ್ಣನ್ ತಂಗಚಿ ಎಂಬ ಹೆಸರಿನ ಈ ಸಿನಿಮಾ ತಮಿಳಿನಲ್ಲಿ ಬಹಳಷ್ಟು ಯಶಸ್ಸು ಕಂಡಿತು. ಈ ರೀತಿ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಬಹುದೊಡ್ಡ ಯಶಸ್ಸನ್ನು ಕಂಡ ಸಿನಿಮಾ ಒಂದರ ಭಾಗವಾಗಿದ್ದ ನಟಿ ಶ್ರುತಿ ಕೃಷ್ಣ ಅವರು ಹಳೆ ವಿಚಾರಗಳನ್ನೆಲ್ಲ ನೆನೆದು ಆಪ್ತತೆಯಿಂದ ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

90ರ ದಶಕದ ಸಿನಿಮಾಗಳನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು, ಪ್ರೇಕ್ಷಕರು ಹಾಗೂ ನೆಟ್ಟಿಗರು ಕಾಮೆಂಟಿಸುವ ಮೂಲಕ ತಮ್ಮ ಸಿನಿಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Photo shared by actress Shruti Krishna went viral actress remembered a rare moment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X