ಜನಪ್ರಿಯ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್'ಗೆ ಭಾರತೀಯ ಗಾಯಕರ ಧ್ವನಿ

By ಫಿಲ್ಮಿಬೀಟ್ ಡೆಸ್ಕ್

ಜಪಾನಿನ ಜನಪ್ರಿಯ ಅನಿಮೇಟೆಡ್ ಸೀರಿಸ್ ಪೋಕ್ಮನ್ ಹೊಚ್ಚ ಶೋ ಅನ್ನು ಆರಂಭಿಸುತ್ತಿದೆ. ಮಕ್ಕಳ ಇಷ್ಟ ಪಡುವ ಈ ಜನಪ್ರಿಯ ಅನಿಮೇಟೆಡ್ ಸೀರಿಸ್‌ಗೆ ಇಂದಿಗೂ ಅಭಿಮಾನಿಗಳೇನು ಕಮ್ಮಿಯಿಲ್ಲ. ಹೀಗಾಗಿ ಪೋಕ್ಮನ್ ಕಂಪನಿಯು ಮೇ 25 ರಂದು ಹೊಚ್ಚ ಹೊಸ ಅನಿಮೇಟೆಡ್ ಶೋ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಅನ್ನು ಪ್ರಾರಂಭಿಸುತ್ತಿದೆ.

ವಿಶೇಷ ಅಂದರೆ, ಈ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್'ಗೆ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್, ಗಾಯಕ ಅರ್ಮಾನ್ ಮಲಿಕ್ ಮತ್ತು ಶೆರ್ಲಿ ಸೆಟಿಯಾ ಇವರು ಆರಂಭಿಕ ಹಾಗೂ ಅಂತ್ಯದ ಧ್ವನಿ ಮುದ್ರಿಕೆಗಳನ್ನು ಅನಾವರಣಗೊಳಿಸಿದ್ದಾರೆ. ಅಲ್ಲದೆ ಈ ಸೀರಿಸ್‌ಗಾಗಿ ಈ ದಿಗ್ಗಜರು ಕೆಲಸ ಮಾಡಿದ್ದಾರೆ. ಆ ಖುಷಿಯನ್ನು ಹಂಚಿಕೊಂಡಿದ್ದಾರೆ.

Pok mon Horizons The Series Premiere telecasting on Hungama from May 25th

ಈ ಹೊಚ್ಚ ಹೊಸ ಸರಣಿಯು ಅತ್ಯಾಕರ್ಷಕ ಕಥಾ ಹಂದರವನ್ನು ಹೊಂದಿದೆ. ಅಲ್ಲದೆ ಹೊಸ ಹೊಸ ಪಾತ್ರಗಳ ಮೂಲಕ ವೀಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದೆ. ಈ ಸೀರಿಸ್‌ನಲ್ಲಿ ಕ್ಯಾಪ್ಟನ್ ಪಿಕಾಚು ವಾಯುನೌಕೆಯ ಚುಕ್ಕಾಣಿ ಹಿಡಿದಿದ್ದಾರೆ. ಜಪಾನಿನ ಅನಿಮೇಷನ್ ಸೀರಿಸ್ ಆಗಿದ್ದರಿಂದ ಭಾರತೀಯ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಇಲ್ಲಿನ ವೀಕ್ಷಕರಿಗೆ ನೀಡುವುದಕ್ಕೆ ಪೋಕ್ಮನ್ ಮುಂದಾಗಿದೆ.

ಹೊಸ ಸೀರಿಸ್ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಜೊತೆ ಕೈ ಜೋಡಿಸುವ ಮ್ಯೂಸಿಕ್ ಡೈರೆಕ್ಟರ್‌ಗಳಾ ವಿಶಾಲ್-ಶೇಖರ್ ಈ ಪ್ರಾಜೆಕ್ಟ್ ಬಗ್ಗೆ ಥ್ರಿಲ್ ಆಗಿದ್ದಾರೆ. "ಪೋಕ್ಮನ್ ಜೊತೆ ಕೈ ಜೋಡಿಸಿದ್ದು ನಮ್ಮನ್ನು ರೋಮಾಂಚನಗೊಳಿಸಿದೆ. ನಾವು ಮನರಂಜನೆ ಮತ್ತು ಸಾಹಸವನ್ನು ಸೆರೆ ಹಿಡಿಯುವ ಟ್ರ್ಯಾಕ್‌ಗಳನ್ನು ಕಂಪೋಸ್ ಮಾಡಿದ್ದೇವೆ. ಲೋಕಲ್ ಆಡಿಯನ್ಸ್ ಅನ್ನು ತಲುಪಲು ಭಾರತ ಟ್ಯಾಲೆಂಟ್‌ಗಳನ್ನು ಬಳಸಿಕೊಂಡಿದ್ದೇವೆ." ಎಂದು ಹೇಳಿಕೊಂಡಿದ್ದಾರೆ.

ಇನ್ನು ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಕೂಡ ಥ್ರಿಲ್ ಆಗಿದ್ದಾರೆ. "ನಾನು ಬಾಲ್ಯದಲ್ಲಿ ಪೋಕ್ಮನ್ ಕಾರ್ಡ್‌ಗಳೊಂದಿಗೆ ಆಟವಾಡುತ್ತಿದ್ದೆ. ಈಗ ಅದೇ ಪೋಕ್ಮನ್ ಹಾರಿಜನ್ಸ್‌ಗಾಗಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಓಪನಿಂಗ್ ಟ್ರ್ಯಾಕ್ ಅನ್ನು ಹಾಡುವ ಅವಕಾಶ ನನಗೆ ಸಿಕ್ಕಿದೆಯಲ್ಲ ಎಂದು ಯೋಚಿಸಿದರೆ ಇದೆಷ್ಟು ರಿಯಲ್ ಅಂತ ಅನಿಸುತ್ತೆ. ನನ್ನ ಬೆಳವಣಿಗೆಯ ಪ್ರತಿಹಂತದಲ್ಲೂ ಪೋಕ್ಮನ್ ಅನ್ನು ಪ್ರತಿದಿನ ನೋಡುತ್ತಿದ್ದೆ. ಈಗ ಹಾರಿಜನ್ಸ್ ಸೀರಿಸ್ ಮೂಲಕ ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಾನೂ ಧ್ವನಿಯಾಗಿರುವುದು ಖುಷಿ ಕೊಟ್ಟಿದೆ. " ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.

ಇನ್ನು ಗಾಯಕಿ ಶೆರ್ಲಿ ಸೆಟಿಯಾ, "ಬಾಲ್ಯದ ಅನುಭವಗಳೊಂದಿಗೆ ಸೇರಿಕೊಳ್ಳುವ ಸಂಗೀತ ಯಾವಾಗಲೂ ಮನಸ್ಸಿಗೆ ಹತ್ತಿರವಾಗಿರುತ್ತೆ. ನಾನು ಅತಿ ಹೆಚ್ಚು ಪ್ರೀತಿಸಿದ ಪೋಕ್ಮನ್ ಆಟಿಕೆಗಳ ದೊಡ್ಡ ಸಂಗ್ರಹ ನನ್ನ ಬಳಿ ಈಗಲೂ ಇದೆ. ಈ ಐಕಾನಿಕ್ ಫ್ರ್ಯಾಂಚೈಸ್‌ಗೆ ನನ್ನ ಧ್ವನಿಯನ್ನು ನೀಡಿರುವುದು ಒಂದು ಮಧುರ ಅನುಭವ ಎಂದಿದ್ದಾರೆ." ಎಂದಿದ್ದಾರೆ. ಅಂದ್ಹಾಗೆ, ಮೊದಲ ಸಂಚಿಕೆ ಮೇ 25 ರಂದು ಹಂಗಾಮಾದಲ್ಲಿ ಪ್ರಸಾರವಾಗುತ್ತಿದೆ.

More from Filmibeat

English summary
Pokémon Horizons:The Series Premiere telecasting on Hungama from May 25th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X