For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಧಿಪತಿ' ಹಾಟ್ ಸೀಟಲ್ಲಿ ಬಿಜೆಪಿಯ ಯಂಗ್ ಲೀಡರ್ಸ್

  |
  ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಈ ಕಾರ್ಯಕ್ರಮಕ್ಕೆ ಬಂದಿದ್ದು ಯಾಕೆ ಗೊತ್ತಾ..? | Kannada Kotyadipathi 2019

  ಕನ್ನಡದ ಕೋಟ್ಯಧಿಪತಿ ಕನ್ನಡ ಕಿರುತೆರೆ ಲೋಕದ ಖ್ಯಾತ ರಿಯಾಲಿಟಿ ಶೋ. ಜ್ಞಾನ ಹೆಚ್ಚಿಕೊಳ್ಳಲು ಇರುವ ಕನ್ನಡದ ಏಕೈಕ ಶೋ ಅಂದ್ರೆ ತಪ್ಪಾಗಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡ ಕೋಟ್ಯಧಿಪತಿ ಕನ್ನಡ ಕಿರುತೆರೆ ಪ್ರೇಕ್ಷಕರ ಹಾಟ್ ಫೇವರೆಟ್ ಕಾರ್ಯಕ್ರಮ.

  ಕನ್ನಡದ ಕೋಟ್ಯಧಿಪತಿ ಸಾಮಾನ್ಯ ಜನರ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಒಂದಿಷ್ಟು ಹಣವನ್ನು ಗೆದ್ದು ಕಷ್ಟದಿಂದ ಕೊಂಚ ದೂರ ಆಗಬಹುದು ಎನ್ನುವುದು ಜನರ ಆಸೆ. ಸಾಮಾನ್ಯ ಜನರ ಜೊತೆಗೆ ವಿಶೇಷ ಸಂಚಿಕೆಗಳಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿ ಗೆದ್ದ ಹಣವನ್ನು ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಾರೆ. ಈ ಬಾರಿ ಕನ್ನಡದ ಕೋಟ್ಯಧಿಪತಿಯಲ್ಲಿ ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಕೋಟ್ಯಧಿಪತಿಯಲ್ಲಿ ನಿವೇದಿತಾ ಗೌಡ ಕಮಾಲ್: ಎಷ್ಟು ಹಣ ಗೆದ್ದರು?ಕೋಟ್ಯಧಿಪತಿಯಲ್ಲಿ ನಿವೇದಿತಾ ಗೌಡ ಕಮಾಲ್: ಎಷ್ಟು ಹಣ ಗೆದ್ದರು?

  ಹಾಟ್ ಸೀಟಲ್ಲಿ ಬಿಜೆಪಿ ನಾಯಕರು

  ಹಾಟ್ ಸೀಟಲ್ಲಿ ಬಿಜೆಪಿ ನಾಯಕರು

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಸೀಸನ್ 3ಯಲ್ಲಿ ಬಿಜೆಪಿಯ ಯಂಗ್ ಲೀಡರ್ಸ್ ಮೈಸೂರಿನ ಸಂಸದ ಪ್ರತಾಪ್ ಸಿಂಹ ಮತ್ತು ಜೂನಿಯರ್ ಪ್ರತಾಪ್ ಸಿಂಹ ಎಂದೆ ಕರೆಸಿಕೊಳ್ಳುವ ಬೆಂಗಳೂರಿನ ಎಂಪಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದಾರೆ. ಈ ವಾರ ಅಂದ್ರೆ ಶನಿವಾರ ಮತ್ತು ಬಾನುವಾರ ಪ್ರಸಾರವಾಗುವ ಕೋಟ್ಯಧಿಪತಿ ಕಾರ್ಯಕ್ರಮದ ಹಾಟ್ ಸೀಟಿನಲ್ಲಿ ಈ ಇಬ್ಬರು ಯಂಗ್ ಲೀಡರ್ಸ್ ಕುಳಿತುಕೊಂಡಿದ್ದಾರೆ.

  ಪ್ರವಾಹ ಸಂತ್ರಸ್ತರಿಗಾಗಿ ಆಡಲಿದ್ದಾರೆ ಇಬ್ಬರು

  ಪ್ರವಾಹ ಸಂತ್ರಸ್ತರಿಗಾಗಿ ಆಡಲಿದ್ದಾರೆ ಇಬ್ಬರು

  ಬಿಜೆಪಿಯ ಈ ಇಬ್ಬರು ನಾಯಕರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಪ್ರವಾಹ ಸಂತ್ರಸ್ತರಿಗಾಗಿ ಆಡುತ್ತಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋದ ಕನಸುಗಳಿಗೆ ಜೀವ ತುಂಬಲು ಇವರಿಬ್ಬರು ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಬೀಕರ ಪ್ರವಾಹದಿಂದ ಬದುಕು ಕಳೆದುಕೊಂಡವರ ಕಷ್ಟಕ್ಕೆ ನೆರವಾಗಲು ಇಬ್ಬರು ಹಟ್ ಸೀಟ್ ಏರಿದ್ದಾರೆ. ಇಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

  ಆಡಿಯೆನ್ಸ್ ಮಾತು ಕೇಳಿ 'ಕೋಟ್ಯಧಿಪತಿ'ಯಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆಆಡಿಯೆನ್ಸ್ ಮಾತು ಕೇಳಿ 'ಕೋಟ್ಯಧಿಪತಿ'ಯಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆ

  ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ

  ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ

  ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಇಬ್ಬರು ಕೋಟ್ಯಧಿಪತಿ ವೇದಿಕೆಗೆ ಎಂಟ್ರಿ ಕೊಡುವ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯುತ ಕೆಲಸದ ಬಗ್ಗೆಯೂ ಮಾತನಾಡಿದ್ದಾರೆ. ಜನ ಪ್ರೀತಿ, ವಿಶ್ವಾಸ, ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಜನರಿಗೆ ನಂಬಿಕೆ ಉಳಿಸಿಕೊಳ್ಳಲು ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಿರುವುದಾಗಿ ಹೇಳಿದ್ದಾರೆ.

  ಹಾಟ್ ಸೀಟಿನಲ್ಲಿ ರಾಜಕಾರಣಿಗಳು

  ಹಾಟ್ ಸೀಟಿನಲ್ಲಿ ರಾಜಕಾರಣಿಗಳು

  ಕೋಟ್ಯಧಿಪತಿ ಹಾಟ್ ಸೀಟಿನಲ್ಲಿ ಮೊದಲ ಬಾರಿಗೆ ರಾಜಕಾರಣಿಗಳಿಬ್ಬರು ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಿಶೇಷ ಸಂಚಿಕೆಯಲ್ಲಿ ಬೆಳ್ಳಿತೆರೆ, ಕಿರುತೆರೆ ಮತ್ತು ಕ್ರೀಡಾ ರಂಗದ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ. ಈ ಹಿಂದೆ ರಮ್ಯಾ ಮತ್ತು ಉಪೇಂದ್ರ ಕಾಣಿಸಿಕೊಂಡರು ಇಬ್ಬರು ಸಿನಿಮಾರಂದಲ್ಲಿ ಖ್ಯಾತಿಗಳಿಸಿದವರು. ಆದ್ರೆ ರಾಜಕೀಯ ರಂಗದಲ್ಲೇ ಖ್ಯಾತಿ ಗಳಿಸಿದವರಿಬ್ಬರು ಮೊದಲ ಬಾರಿಗೆ ಕನ್ನಡ ಕೋಟ್ಯಧಿಪತಿಯಲ್ಲಿ ಭಾಗಿಯಾಗಿರುವುದು ವಿಶೇಷ. ಇಬ್ಬರು ಎಷ್ಟು ಹಣ ಗೆಲ್ತಾರೆ ಎನ್ನುವುದು ಪ್ರೇಕ್ಷಕರ ಕುತೂಹಲ.

  English summary
  Politician Pratap Simha and Tejasvi Surya in Kannadada Kotyadhipathi show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X