»   » 'ಮಜಾ ಟಾಕೀಸ್'ನಲ್ಲಿ ಶೋಭಾ ಕರಂದ್ಲಾಜೆ ರವರ ಹಾಸ್ಯ ಪ್ರಜ್ಞೆ ಅನಾವರಣ

'ಮಜಾ ಟಾಕೀಸ್'ನಲ್ಲಿ ಶೋಭಾ ಕರಂದ್ಲಾಜೆ ರವರ ಹಾಸ್ಯ ಪ್ರಜ್ಞೆ ಅನಾವರಣ

Posted By:
Subscribe to Filmibeat Kannada

'ಮಜಾ ಸ್ಟಾರ್' ಸೃಜನ್ ಲೋಕೇಶ್ ನಡೆಸಿಕೊಡುವ 'ಮಜಾ ಟಾಕೀಸ್' ನಲ್ಲಿ ಇಲ್ಲಿಯವರೆಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಅತಿಥಿಗಳಾಗಿ ಭಾಗವಹಿಸಿ ತಾವೂ ನಕ್ಕು, ನೆರೆದಿದ್ದವರನ್ನೂ ನಗಿಸಿ ವೀಕ್ಷಕರನ್ನು ರಂಜಿಸಿರುವುದನ್ನು ನೀವೆಲ್ಲ ನೋಡಿದ್ದೀರಾ.

ಈ ವಾರದ 'ಮಜಾ ಟಾಕೀಸ್' ನಲ್ಲಿ ನಿಮಗೆಲ್ಲ ಮನರಂಜನೆಯ ರಸದೌತಣ ನೀಡಲು ತಾರೆಯರು ಬರುತ್ತಿಲ್ಲ. ಬದಲಾಗಿ ರಾಜಕಾರಣಿಯೊಬ್ಬರು ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

'ಮಹಿಳಾ ದಿನಾಚರಣೆ' ವಿಶೇಷ.!

'ಮಹಿಳಾ ದಿನಾಚರಣೆ'ಯ ವಿಶೇಷವಾಗಿ ಚಿತ್ರೀಕರಿಸಿರುವ 'ಮಜಾ ಟಾಕೀಸ್' ಸಂಚಿಕೆಗೆ ವಿಶೇಷ ಅತಿಥಿ ಆಗಿ ಭಾಗವಹಿಸಿರುವ ರಾಜಕಾರಣಿ ಶೋಭಾ ಕರಂದ್ಲಾಜೆ.

ಗಟ್ಟಿಗಿತ್ತಿ ಶೋಭಾ ಕರಂದ್ಲಾಜೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿದ್ದ, ಹಾಲಿ ಸಂಸತ್ ಸದಸ್ಯೆ ಆಗಿರುವ ಶೋಭಾ ಕರಂದ್ಲಾಜೆ 'ಮಜಾ ಟಾಕೀಸ್'ನಲ್ಲಿ ಭಾಗವಹಿಸಿದ್ದಾರೆ. ಪುರುಷ ರಾಜಕಾರಣಿಗಳೇ ಮುಂಚೂಣಿಯಲ್ಲಿರುವ ರಾಜಕಾರಣದಲ್ಲಿ ಪುರುಷ ರಾಜಕಾರಣಿಗಳಿಗೆ ಸರಿಸಾಟಿಯಾಗಿರುವ ಗಟ್ಟಿಗಿತ್ತಿ ಶೋಭಾ ಕರಂದ್ಲಾಜೆ.

ಶೋಭಾ ಕರಂದ್ಲಾಜೆಯ ಹಾಸ್ಯದ ಮುಖ ಅನಾವರಣ

ಸದಾ ಗಂಭೀರವಾಗಿರುವ ಶೋಭಾ ಕರಂದ್ಲಾಜೆಯವರ ಹಾಸ್ಯದ ಮುಖ ನೋಡಿದವರು ಕಡಿಮೆ. ಅವರ ಹಾಸ್ಯದ ಮೊಗವನ್ನು ಕನ್ನಡದ ಜನತೆಗೆ ಪರಿಚಯಿಸಲಿದೆ 'ಮಜಾ ಟಾಕೀಸ್'.

ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡವರು....

'ಮಹಿಳಾ ದಿನಾಚರಣೆ'ಯ ವಿಶೇಷ 'ಮಜಾ ಟಾಕೀಸ್' ಸಂಚಿಕೆಯಲ್ಲಿ ಆಂಬುಲೆನ್ಸ್ ಡ್ರೈವರ್, ಕಂಡಕ್ಟರ್, ಹೂ ಕಟ್ಟುವವರು, ವ್ಯವಸಾಯ ಮಾಡುವವರು... ಹೀಗೆ ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಬಳಗ ಹಾಜರಿತ್ತು.

ಹಾಡಿ, ಕುಣಿದ ಶೋಭಾ ಕರಂದ್ಲಾಜೆ

'ಮಜಾ ಟಾಕೀಸ್'ನಲ್ಲಿ ಶೋಭಾ ಕರಂದ್ಲಾಜೆ ಹಾಡಿ, ಕುಣಿದು ತಮ್ಮ ವೈಯಕ್ತಿಕ ಜೀವನ, ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು.

ಪ್ರೋಮೋ ನೋಡಿದ್ರಾ.?

'ಮಜಾ ಟಾಕೀಸ್'ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಿರುವ ಸಂಚಿಕೆಯ ಪ್ರೋಮೋ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

ಪ್ರಸಾರ ಯಾವಾಗ.?

ಮಹಿಳಾ ದಿನಾಚರಣೆರ ವಿಶೇಷ 'ಮಜಾ ಟಾಕೀಸ್' ಸಂಚಿಕೆ ಮಾರ್ಚ್ 11 ಶನಿವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Politician Shobha Karandlaje has taken part in 'Maja Talkies'. Don't miss to Watch 'Maja Talkies' this Saturday 8PM in Colors Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada