Ninagagi: 'ನಿನಗಾಗಿ' ಧಾರಾವಾಹಿಗೆ ಖ್ಯಾತ ಸ್ಯಾಂಡಲ್‌ವುಡ್ ನಟಿ ಎಂಟ್ರಿ; ಯಾರ ಬದುಕಿಗೆ ಸಿಗಲಿದೆ ಟ್ವಿಸ್ಟ್?

By ಎಸ್ ಸುಮಂತ್

ಸಂಪೃಥ್ವಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ನಿನಗಾಗಿ' ಧಾರಾವಾಹಿ ಆರಂಭದಿಂದಾನೂ ತನ್ನದೇ ಆದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ದಿವ್ಯಾ ಉರುಡುಗ ಕಮ್ ಬ್ಯಾಕ್ ಮಾಡಿರುವಂತ ಸೀರಿಯಲ್. ಇದರಲ್ಲಿ ಸೂಪರ್ ರಚನಾ ಹಾಗೂ ಜೀವನ ಮುದ್ದು ಬೇಬಿ ಕೃಷ್ಣಾ ಕಥೆಯೇ ಹೈಲೆಟ್. ತಂದೆ-ಮಗಳ ಸಂಭಾಷಣೆ, ಅವರಿಬ್ಬರ ಬದುಕು ಒಂದು ಕಡೆಯಾದರೆ, ಸೂಪರ್ ಸ್ಟಾರ್ ಆದ ತನ್ನಿಷ್ಟದಂತೆ ಬದುಕುವ ಸ್ವಾರ್ಥ್ಯವನ್ನು ಕಳೆದುಕೊಂಡು ಬದುಕುತ್ತಿರುವ ರಚನಾ ಇನ್ನೊಂದು ಕಡೆ. ಈ ಇಬ್ಬರು ಒಂದಾಗುವ ಕಾಲಕ್ಕಾಗಿಯೇ ಜನ ಕಾಯ್ತಾ ಇರುವುದು. ಟ್ವಿಸ್ಟ್ ಇರುವುದು ಅಲ್ಲೆ.

ತಾಯಿಯೇ ಮಗಳನ್ನು ಗಾಣದ ಎತ್ತಿನಂತೆ ದುಡಿಸಿಕೊಳ್ಳುತ್ತಿದ್ದಾಳೆ. ಅದನ್ನು ಕಂಡ ಅದೆಷ್ಟೋ ಪ್ರೇಕ್ಷಕರಿಗೆ ಅನ್ನಿಸಿದ್ದು, ಇವಳೊಬ್ಬ ತಾಯಿನಾ ಅಂತ. ಆದರೆ ಆಮೇಲೆ ಸತ್ಯ ಗೊತ್ತಾಗಿದ್ದು ಇವಳು ತಾಯಿಯೇ ಅಲ್ಲ ಎಂಬುದು. ಮನೋಹರ್ ತನಗೆ ಗೊತ್ತಿಲ್ಲದೆ ಮಾಡಿದ ತಪ್ಪಿಗೆ ರಚನಾಳನ್ನು ವಜ್ರೇಶ್ವರಿ ಕೈಗಿಟ್ಟಿದ್ದಾನೆ. ಆದ್ರೆ ವಜ್ರೇಶ್ವರಿ ಆಕೆಯನ್ನು ದುಡಿಯುವ ಯಂತ್ರ ಮಾಡಿಕೊಂಡಿದ್ದಾಳೆ.

Pooja Gandhi plays a guest role in colors kannada ninagagi serial

ಪೂಜಾ ಗಾಂಧಿ ಎಂಟ್ರಿ

ಮಳೆ ಹುಡುಗಿ ಅಂತಾನೇ ಖ್ಯಾತಿ ಪಡೆದಿರುವ ಪೂಜಾ ಗಾಂಧಿ ಇತ್ತಿಚೆಗಷ್ಟೇ ಮದುವೆಯಾಗಿದ್ದಾರೆ. ಕನ್ನಡ ಮೇಲಿನ ಅಪಾರ ಪ್ರೀತಿಯಿಂದ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ಆಕೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಸೀರಿಯಲ್ ಪ್ರಿಯರನ್ನು ಗೆಲ್ಲಲಿದ್ದಾರೆ. 'ನಿನಗಾಗಿ' ಧಾರಾವಾಹಿಗೆ ಪೂಜಾ ಗಾಂಧಿ ಬಂದಿದ್ದಾರೆ.

ಅಶ್ವಿನ್ ಜೊತೆಗೆ ಮದುವೆ ಕ್ಯಾನ್ಸಲ್?

ರಚನಾಗೆ ಮದುವೆಯಾಗಬೇಕೆಂಬ ಹಂಬಲ ಇದೆ. ಯಾಕಂದ್ರೆ ಈ ಸೂಪರ್ ಸ್ಟಾರ್ ಲೈಫ್ ಅವಳಿಗೆ ಸಾಕಾಗಿದೆ. ಹೀಗಾಗಿ ಒಳ್ಳೆ ಹುಡುಗನನ್ನು ಮದುವೆಯಾಗಬೇಕೆಂಬ ಬಯಕೆ. ಅಮ್ಮ ವಜ್ರೇಶ್ವರಿ ಕೂಡ ಮದುವೆ ಮಾಡಲು ಮುಂದಾಗಿದ್ದಾಳೆ. ಅಮ್ಮ ಅಲ್ವಾ ಒಳ್ಳೆ ಹುಡುಗನನ್ನೇ ಹುಡುಕಿರುತ್ತಾಳೆ ಎಂದರೆ ತನ್ನ ಬೇಳೆ ಬೇಯಿಸಿಕೊಳ್ಳಲು ಸಪೋರ್ಟ್ ಮಾಡುವಂತ ಹುಡುಗನನ್ನೇ ಹುಡುಕಿದ್ದಾಳೆ. ಇದನ್ನು ಕಂಡು ರಚನಾ ಕಣ್ಣೀರು ಹಾಕುತ್ತಾ ಕುಳಿತಿದ್ದಾಳೆ. ಪೂಜಾ ಗಾಂಧಿ ಎಂಟ್ರಿಯಿಂದ ಅಶ್ವಿನ್ ಟೆನ್ಶನ್ ರಚನಾಗೆ ತಪ್ಪುತ್ತಾ ನೋಡಬೇಕಿದೆ.

Pooja Gandhi plays a guest role in colors kannada ninagagi serial

ಆ ಎಪಿಸೋಡ್‌ಗಾಗಿ ಕಾತುರ

ದಿವ್ಯಾ ಉರುಡುಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳೆಲ್ಲಾ ಫುಲ್ ಖುಷಿಯಾಗಿದ್ದಾರೆ. ಇತ್ತಿಚೆಗೆ ಪೂಜಾಗಾಂಧಿ ಕ್ರೇಜ್ ಜೋರಾಗಿದೆ. ಹೀಗಾಗಿ ಅವರನ್ನು ಮತ್ತೆ ತೆರೆಮೇಲೆ ನೋಡುವ ಭಾಗ್ಯ ಸಿಕ್ತಲ್ಲ ಎಂಬ ಖುಷಿಯಲ್ಲಿ ಇದ್ದಾರೆ. ಈ ಎಪಿಸೋಡ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಯಾವಾಗಿಂದ ಎಪಿಸೋಡ್ ಬರಬಹುದು ಎಂದು ಕಮೆಂಟ್ ಬಾಕ್ಸ್‌ನಲ್ಲಿ ಕೇಳುತ್ತಿದ್ದಾರೆ.

ಪೂಜಾಯಿಂದ ರಚನಾ ಲೈಫ್ ಚೆಂಜ್

ಮಾತಾಶ್ರೀ ಈಗಾಗಲೇ ರಚನಾ ಬಗ್ಗೆ ಹೇಳಿದ್ದಾರೆ. ನಿನ್ನ ಕೈ ಮೀರಿ ಹೋಗುವ ಗಳಿಗೆ ಬಂದಾಗಿದೆ ಎಂದು. ಜೀವ ಕೂಡ ಅವಳ ಬಾಳಿಗೆ ಹತ್ತಿರವಾಗುತ್ತಿದ್ದಾನೆ. ಕೃಷ್ಣಾ ಕೂಡ ಭೂಮಿಗೆ ಇಳಿದು ಬಂದ ಸ್ಟಾರ್ ರಚನಾನೇ, ಅವಳೇ ನಮ್ಮ ಅಮ್ಮ ಎಂದು ನಂಬಿದ್ದಾಳೆ. ವಿಧಿ ಬರಹವೂ ಅವರಿಬ್ಬರು ಒಂದಾಗುವುದನ್ನೇ ಬಯಸುತ್ತಿದೆ. ದಿವ್ಯ ಉರುಡುಗ ಹಂಚಿಕೊಂಡಿರುವ ಫೋಟೋ ನೋಡಿದರೆ, ರಚನಾಳ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಪೂಜಾ ಗಾಂಧಿ ಎಂಟ್ರಿಯಾಗಿದೆ. ಅಂದ್ರೆ ಸೋಮವಾರ ಅಥವಾ ಮಂಗಳವಾರ ಈ ಎಪಿಸೋಡ್ ಪ್ರಸಾರವಾಗಬಹುದು. ಪೂಜಾ ಗಾಂಧಿ ಎಂಟ್ರಿಯಿಂದ ಯಾರ ಲೈಫ್‌ಗೆ ಟ್ವಿಸ್ಟ್ ಸಿಗಬಹುದು ಎಂಬುದು ಆ ನಂತರದಲ್ಲಿ ಗೊತ್ತಾಗಲಿದೆ.

More from Filmibeat

English summary
colors kannada serial Ninagagi Written Update on Divya Uruduga social media post. Here is the details about Pooja Gandhi came as a special guest in the serial for you;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X