ಜೀ ಕನ್ನಡದಲ್ಲಿ ಪೂಜಾ ಗಾಂಧಿ ಜೊತೆ ರಿಷಿಕಾ ರಗಳೆ

ಜೀ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ಕಾರ್ಯಕ್ರಮ 'ರಗಳೆ ವಿಥ್ ರಿಷಿಕಾ' ವೈವಿಧ್ಯತೆಯಿಂದ ಕೂಡಿದ್ದು ವೀಕ್ಷಕರನ್ನು ಸೆಳೆಯುತ್ತಿದೆ. ಈ ಬಾರಿಯ ಎಪಿಸೋಡ್ ನಲ್ಲಿ ನಟಿ ಪೂಜಾ ಗಾಂಧಿ, ನಿರ್ದೇಶಕ ಯೋಗರಾಜ್ ಭಟ್ ಹಾಗೂ 'ಜೋಗಿ' ಪ್ರೇಮ್ ಅತಿಥಿಗಳು.
ಪೂಜಾ ಗಾಂಧಿ ಅವರ ರಾಜಕೀಯ ಪಯಣ ಸೇರಿದಂತೆ ಒಂದಷ್ಟು ಪರ್ಸನಲ್ ವಿಚಾರಗಳು ರಗಳೆಯಲ್ಲಿ ಪ್ರಸ್ತಾಪವಾಗಲಿವೆ. ಇನ್ನು ಯೋಗರಾಜ್ ಭಟ್ಟರ 'ಡ್ರಾಮಾ' ಚಿತ್ರದ ಬಗ್ಗೆಯೂ ಮಾತುಕತೆ ನಡೆಯಲಿದೆ. ಜೊತೆಗೆ 'ಪ್ರೇಮ್ ಅಡ್ಡ' ಚಿತ್ರವೂ ಚರ್ಚೆಗೆ ಬರಲಿದೆ.
ಒಟ್ಟಿನಲ್ಲಿ ಸುದ್ದಿಯಲ್ಲಿರುವ ಮೂವರು ತಾರೆಗಳ ನಡುವೆ ರಿಷಿಕಾ ರಗಳೆ ಆಸಕ್ತಿಕರವಾಗಿ ಸಾಗಲಿದೆ. ಈ ಶೋ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಾ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಟಿಆರ್ ಪಿಯಲ್ಲೂ ಗಮನಾರ್ಹ ಬೆಳವಣಿಗೆ ದಾಖಲಿಸಿದೆಯಂತೆ.
ಇದುವರೆಗೂ 'ರಗಳೆ ವಿಥ್ ರಿಷಿಕಾ' ಜೊತೆ 15ಕ್ಕೂ ಹೆಚ್ಚು ಸಿನೆಮಾ ತಾರೆಗಳು ಅತಿಥಿಗಳಾಗಿ ಬಂದು ಹೋಗಿದ್ದಾರೆ. ಈ ಬಾರಿಯ 7ನೇ ಕಂತಿನಲ್ಲಿ ಪೂಜಾ ಗಾಂಧಿ, ಯೋಗರಾಜ್ ಭಟ್ ಹಾಗೂ ಪ್ರೇಮ್ ಮುಖ್ಯ ಅತಿಥಿಗಳು. ಸ್ಟಾರ್ ವರ್ಲ್ಡ್ ಇಂಡಿಯಾ ಚಾನೆಲ್ ನ Koffee with Karan ಕಾರ್ಯಕ್ರಮದ ಸ್ಫೂರ್ತಿಯೇ 'ರಗಳೆ ವಿಥ್ ರಿಷಿಕಾ'. (ಒನ್ಇಂಡಿಯಾ ಕನ್ನಡ)


Click it and Unblock the Notifications











