ಬದಲಾದ ಭಾರ್ಗಿ ಎರಡನೆ ಮಗಳು: ಹೊಸ ಚಂಚಲ ನೋಡಿ ಹೇಳಿದ್ದೇನು ಪ್ರೇಕ್ಷಕರು?

ಕಿರುತೆರೆಯ ಖ್ಯಾತ ದಾರಾವಾಹಿಗಳಲ್ಲಿ 'ಮಗಳು ಜಾನಕಿ' ಸೀರಿಯಲ್ ಕೂಡ ಒಂದು. ಈ ದಾರಾವಾಹಿ ಈಗ ದಿನದಿಂದನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಒಂದು ಕಡೆ ಜಾನಕಿ ಪೊಲೀಸ್ ಆಫೀಸರ್ ಆಗಬೇಕೆಂದು ತಯಾರಿ ನಡೆಸುತ್ತಿದ್ದಾರೆ. ಇತ್ತ ನಿರಂಜನ್ ಸ್ವಂತ ಉದ್ಯೋಗ ಮಾಡಬೇಕೆಂದು ಹೋರಾಡುತ್ತಿದ್ದಾರೆ.

ಸಿ ಎಸ್ ಪಿ ಮಗ ಮಧುಕರ್ ಕೆಲಸದ ನಿಮಿತ್ತ ಮನೆಬಿಟ್ಟುಹೋಗುವ ನಿರ್ಧಾರ ಮಾಡಿದ್ದಾರೆ. ಮಧುಕರ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ರಶ್ಮಿ ಬಂಡವಾಳ ಹೂಡುವ ಮೂಲಕ ಕಂಪೆನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹಾಗಾಗಿ ಮಧುಕರ್ ಬೆಂಗಳೂರಿಗೆ ಶಿಫ್ಟ್ ಆಗುವ ಲಕ್ಷಣಗಳು ಕಾಣುತ್ತಿವೆ. ಮಧುಕರನನ್ನು ಸಿ ಎಸ್ ಪಿ ಯಿಂದ ದೂರ ಮಾಡಬೇಕು ಎನ್ನುವುದು ಚಂದು ಭಾರ್ಗಿ ಕುತಂತ್ರ ಆದ್ರೆ ಮಗ ಜೊತೆಯಲ್ಲಿ ಇರಬೇಕು ಎನ್ನುವುದು ರಶ್ಮಿಯ ಆಸೆ.

ಮಗಳು ಜಾನಕಿ ನಾನಾತಿರುವುಗಳನ್ನು ಪಡೆದುಕೊಳ್ಳುತ್ತಾ ಪ್ರೇಕ್ಷಕರಲ್ಲಿ ಕುತೂಹಲಗಳನ್ನು ಹೆಚ್ಚಿಸುತ್ತಾ ಮುನ್ನುಗ್ಗುತ್ತಿದೆ. ಆದ್ರೆ ಮತ್ತೊಂದೆಡೆ ಪ್ರೇಕ್ಷಕರ ಅಚ್ಚುಮೆಚ್ಚಿನ ಚಂಚಲ ಪಾತ್ರ ಬದಲಾಗಿದೆ. ಜಾನಕಿಯ ಮುದ್ದಿನ ತಂಗಿ, ಭಾರ್ಗಿಯ ಎರಡನೇ ಮಗಳು ಚಂಚಲ ಪಾತ್ರಕ್ಕೀಗ ಹೊಸ ನಟಿಯ ಎಂಟ್ರಿಯಾಗಿದೆ. ಮುಂದೆ ಓದಿ..

ಐಶ್ವರ್ಯ ಜಾಗಕ್ಕೆ ಪೂಜಾ ಎಂಟ್ರಿ

ಐಶ್ವರ್ಯ ಜಾಗಕ್ಕೆ ಪೂಜಾ ಎಂಟ್ರಿ

ಈ ಮೊದಲು ಚಂಚಲ ಪಾತ್ರದಲ್ಲಿ ಐಶ್ವರ್ಯ ಅಭಿನಯಿಸುತ್ತಿದ್ದರು. ಐಶ್ವರ್ಯ ಅವರ ಮುದ್ದುಮುದ್ದಾದ ಅಭಿನಯಕ್ಕೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ರು. ಆದ್ರೀಗ ಐಶ್ವರ್ಯ ಜಾಗಕ್ಕೆ ಪೂಜಾ ಭಾರಿತ್ತಾಯ ಎನ್ನುವ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. ಎಂ ಬಿ ಎ ಓದಿರುವ ಪೂಜಾ ಭಾರಿತ್ತಾಯ ಇನ್ನು ಮುಂದೆ ಚಂಚಲ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಭೂಮಿ ಕಲಾವಿದೆ ಆಗಿರುವ ಪೂಜಾ ಬೆನಕ ನಾಟಕ ತಂಡದಲ್ಲಿ ರಂಗ ಗೀತೆಗಳನ್ನು ಹಾಡುತ್ತಿದ್ದರಂತೆ. ಅಲ್ಲದೆ ಬಿ ಜಯಶ್ರಿ ಜೊತೆ ರಂಗ ಗೀತೆಗಳನ್ನು ಹಾಡಿದ್ದಾರಂತೆ ಪೂಜಾ.

ಇಂಗ್ಲೆಂಡ್ ನಿಂದ ಬರುವಾಗ ಬದಲಾದ ಚಂಚಲ

ಇಂಗ್ಲೆಂಡ್ ನಿಂದ ಬರುವಾಗ ಬದಲಾದ ಚಂಚಲ

ಭಾರ್ಗಿ ಎರಡನೇ ಪುತ್ರಿ ಚಂಚಲ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್ ಗೆ ಹೋಗಿದ್ದರು. ಅನೇಕ ದಿನಗಳಿಂದ ಚಂಚಲ ಪಾತ್ರ ದಾರಾವಾಹಿಯಿಂದ ಕಣ್ಮರೆಯಾಗಿತ್ತು. ಚಂಚಲ ಪಾತ್ರವನ್ನು ತೆರೆಮೇಲೆ ತೋರಿಸಿ ಎಂದು ಪ್ರೇಕ್ಷಕರು ಒತ್ತಾಯ ಮಾಡುತ್ತಿದ್ದರು. ಆದ್ರೆ ದಿಢೀರನೆ ಇಂಗ್ಲೆಂಡಿನಿಂದ ಮನೆಗೆ ಮರಳಿದ ಚಂಚಲ ಎಲ್ಲರಿಗೂ ಶಾಕ್ ನೀಡಿದ್ದಾರೆ. ಯಾಕೆಂದರೆ ಇಂಗ್ಲೆಂಡಿಗೆ ಹೋದ ಚಂಚಲ ಬರುವಾಗ ಬದಲಾಗಿ ವಾಪಸ್ ಬಂದಿದ್ದಾರೆ.

ಮೊದಲ ಚಂಚಲನೆ ಇರಬೇಕಿತ್ತು

ಮೊದಲ ಚಂಚಲನೆ ಇರಬೇಕಿತ್ತು

ದಾರಾವಾಹಿ ಪ್ರಾರಂಭವಾದಾಗಿನಿಂದಲು ಚಂಚಲ ಪಾತ್ರದಲ್ಲಿ ಐಶ್ವರ್ಯ ಕಾಣಿಸಿಕೊಳ್ಳುತ್ತಿದ್ದರು. ಮುದ್ದು ಮುದ್ದಾದ ಐಶ್ವರ್ಯ ಅವರ ಮಾತು ಅಭಿನಯ ಪ್ರೇಕ್ಷಕರ ಮನಗೆದ್ದಿತ್ತು. ಆದ್ರೀಗ ಹೊಸ ಚಂಚಲನ ಎಂಟ್ರಿ ಸ್ವಲ್ಪ ಬೇಜಾರು ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಳೆ ಚಂಚಲನೆ ಇರಬೇಕಿತ್ತು, ಅವರನ್ನೆ ವಾಪಸ್ ಕರೆಸಿ ಎನ್ನುವ ಕಮೆಂಟ್ಸ್ ಗಳನ್ನು ಹಾಕುತ್ತಿದ್ದಾರೆ.

ಸ್ವಲ್ಪದಿನಗಳಲ್ಲಿ ಈ ಚಂಚಲನೂ ಇಷ್ಟ ಆಗುತ್ತಾರೆ

ಸ್ವಲ್ಪದಿನಗಳಲ್ಲಿ ಈ ಚಂಚಲನೂ ಇಷ್ಟ ಆಗುತ್ತಾರೆ

ಮೊದಲಿನಿಂದ ಚಂಚಲ ಪಾತ್ರದಲ್ಲಿ ಆಶ್ವರ್ಯ ಅವರನ್ನೆ ನೋಡಿದ್ದರಿಂದ ಆಕೆ ಎಲ್ಲರಿಗೂ ಇಷ್ಟವಗುತ್ತಿದ್ದರು. ದಿಢೀರನೆ ಬದಲಾಗಿದ್ದು ತಕ್ಷಣಕ್ಕೆ ಒಪ್ಪಿಕೊಳ್ಳುವುದಕ್ಕೆ ಆಗದಿದ್ದರು ಕ್ರಮೇಣ ಇಷ್ಟವಾಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಮೊದಲು ರಶ್ಮಿ ಪಾತ್ರ ಕೂಡ ಹಾಗೆ ಆಗಿತ್ತು. ರಶ್ಮಿ ಪಾತ್ರ ಬದಲಾದ ನಂತರ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಆದ್ರೀಗ ರಶ್ಮಿ ಎಲ್ಲರ ಅಚ್ಚುಮೆಚ್ಚು ಆಗಿದ್ದಾರೆ. ಹಾಗೆ ಚಂಚಲ ಪಾತ್ರನು ಮುಂದೆ ಇಷ್ಟ ಆಗುತ್ತಾ ಹೋಗುತ್ತೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಮನೆಬಿಟ್ಟು ಹೋಗುತ್ತಾರಾ ಮಧುಕರ್ ?

ಮನೆಬಿಟ್ಟು ಹೋಗುತ್ತಾರಾ ಮಧುಕರ್ ?

ಮಧುಕರ್ ಚಿಕ್ಕವನಾಗಿದ್ದಾಗಿನಿಂದಲು ಸಿ ಎಸ್ ಪಿ ಅವರೆ ಸಾಕಿ ಬೆಳೆಸಿದ ಮಗ. ಈಗ ಮನೆಬಿಟ್ಟುಹೋಗುವ ನಿರ್ಧಾರಾ ಮಾಡಿದ್ದಾರೆ. ಮಧುಕರ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ರಶ್ಮಿ ಭಾರ್ಗಿ ಹೂಡಿಗೆ ಮಾಡಿ ಕಂಪೆನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ. ಹಾಗಾಗಿ ಮಧುಕರ್ ಬೆಂಗಳೂರಿಗೆ ಹೋಗುವ ನಿರ್ಧಾರ ಮಾಡಿದ್ದಾರೆ. ಅಲ್ಲದೆ ರಶ್ಮಿ ಅವರ ಮನೆಯಲ್ಲಿ ಇರಬೇಕೆಂದು ರಶ್ಮಿ ತಾಕೀತು ಮಾಡಿದ್ದಾರೆ. ಇದು ಸಿ ಎಸ್ ಪಿ ಅವರಿಗೆ ಇಷ್ಟವಾಗದಿದ್ದರು ಮನೆಯಿಂದ ಹೊರಡಲು ಮಗನಿಗೆ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಮಧುಕರ್ ಮುಂದಿನ ನಡೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

More from Filmibeat

English summary
actress Pooja replaced Aishwarya as chanchala character in Magalu Janaki serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X