»   » ರು.2 ಕೋಟಿ ಕೊಡ್ತೀವಿ ಅಂದ್ರು ಪೂನಂ ಕ್ಯಾರೆ ಅಂತಿಲ್ಲ

ರು.2 ಕೋಟಿ ಕೊಡ್ತೀವಿ ಅಂದ್ರು ಪೂನಂ ಕ್ಯಾರೆ ಅಂತಿಲ್ಲ

Posted By:
Subscribe to Filmibeat Kannada

ತನ್ನ ಬಿಚ್ಚಾಟದ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುವ ಪೂನಂ ಪಾಂಡೆಯನ್ನು 'ಬಿಗ್ ಬಾಸ್' ಮನೆಗೆ ಕರೆತರಲು ಶತಾಯುಗತಾಯ ಪ್ರಯತ್ನಗಳು ನಡೆಯುತ್ತಿವೆ. ನಟ ಸಲ್ಮಾನ್ ಖಾನ್ ನಿರೂಪಸಲಿರುವ ಕಲರ್ಸ್ ವಾಹಿನಿಯ ಈ ರಿಯಾಲಿಟಿ ಸೆಪ್ಟೆಂಬರ್ 15ರಿಂದ ಅಮೋಘ ಪ್ರಾರಂಭವಾಗುತ್ತಿದೆ.

ಇದಕ್ಕಾಗಿ ಪೂನಂ ಪಾಂಡೆಗೆ ಭರ್ಜರಿ ಸಂಭಾವನೆಯನ್ನೂ ಕೊಡಲು ವಾಹಿನಿ ಮುಂದಾಗಿದೆ. ಪೂನಂ ಪಾಂಡೆ ಅವರು ರು.3 ಕೋಟಿ ಡಿಮ್ಯಾಂಡ್ ಮಾಡಿದರಂತೆ. ಆದರೆ ಕಡೆಗೆ ಚೌಕಾಸಿ ಮಾಡಿ ರು.2.5 ಕೋಟಿ ಕೊಡಲು ಮುಂದೆ ಬಂದಿದ್ದಾರೆ. ಆದರೆ ಪೂನಂ ಪಾಂಡೆ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲವಂತೆ.


ಈ ಹಿಂದಿನ ಸೀಸನ್ ಗಳಲ್ಲೂ ಪೂನಂ ಪಾಂಡೆಗೆ ಆಫರ್ ಬಂದಿತ್ತು. ಆದರೆ ತಾನು ಕೇಳಿದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಗ್ ಬಾಸ್ ಶೋಗೆ ಪೂನಂ ಪಾಂಡೆ ಕ್ಯಾರೆ ಎನ್ನುತ್ತಿಲ್ಲ. ವಾಹಿನಿ ಅವರು ಬಂದದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹಿಂತಿರುಗಿದ್ದಾರೆ.

ನಶಾ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಪೂನಂ ಈಗ ಮುಂಚೂಣಿ ನಾಯಕಿಯರ ಸಾಲಿಗೆ ಸೇರಿದ್ದಾರೆ. ಬಾಲಿವುಡ್ ನಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಹಾಟ್ ಬಾಂಬ್ ಗಳಾದ ವೀಣಾ ಮಲಿಕ್, ಸನ್ನಿ ಲಿಯೋನ್ ಅವರಿಗೆ ಪೈಪೋಟಿ ನೀಡುತ್ತಿದ್ದಾರೆ. (ಪಿಟಿಐ)

English summary
Bollywood hot beauty Poonam Pandey is said tohave been offered over Rs. 2 crore for the upcoming season of reality show Bigg Boss. "For this season of Bigg Boss Poonam was approached as well. She had asked Rs. 3 crore, but they (officials of the show) agreed for Rs. 2-2.5 crore. But she is not doing the show primarily due to monetary reasons," sources said.
Please Wait while comments are loading...