Puttakkana Makkalu: 400 ಸಂಚಿಕೆಗಳ ಗಡಿ ದಾಟಿದ ನಂಬರ್ ಒನ್ ಧಾರಾವಾಹಿ
ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿ ಇದೀಗ 400 ಸಂಚಿಕೆಗಳನ್ನು ಪೂರ್ಣಗೊಳಿಸುತ್ತಿದೆ. ಹಾಗೆಯೇ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಪುಟ್ಟಕ್ಕನ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರು ಬಹಳ ಅದ್ಭುತವಾಗಿ ಅಭಿನಯ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ವೀಕ್ಷಕರ ಮೆಚ್ಚಿನ ಕಥೆ ಎನಿಸಿಕೊಂಡಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯನ್ನು ನೋಡಲು ಜನರು ತುದಿ ಕಾಲಲ್ಲಿ ನಿಂತಿದ್ದಾರೆ. ಗಂಡ ಬಿಟ್ಟು ಹೋಗಿದ್ದರು ಪುಟ್ಟಕ್ಕ ಮಾತ್ರ ತನ್ನ ಮೂವರು ಮಕ್ಕಳನ್ನು ಹೊಟ್ಟೆಬಟ್ಟೆ ಕಟ್ಟಿ ಸಾಕುತ್ತಿದ್ದಾಳೆ. ಆಕೆ ಆ ಮಕ್ಕಳ ಏಳು ಬೀಳುಗಳಿಗೆ ಹೆಗಲಾಗಿ ನಿಂತವಳು. ತನ್ನ ಇಬ್ಬರು ಮಕ್ಕಳನ್ನು ಪುಟ್ಟಕ್ಕ ಚೆನ್ನಾಗಿ ಓದಿಸುತ್ತಾಳೆ. ಹಾಗೆಯೇ ಸಹನಾ ತನ್ನ ತಾಯಿಗೆ ಸಹಾಯ ಮಾಡಲು ತನ್ನ ಕನಸನ್ನೆಲ್ಲಾ ಬದಿಗೆ ಸರಿಸಿದ್ದಾಳೆ.

ಧಾರವಾಹಿ ತಂಡ ಸಂತಸ
ರಾಜೇಶ್ವರಿ ಕಾಟದಿಂದ ಪಾರಾಗಲು ಪುಟ್ಟಕ್ಕ ಮಾತ್ರ ಶತಾಯ ಗತಾಯ ಪ್ರಯತ್ನ ಪಡುತ್ತಿರುತ್ತಾಳೆ. ಇದೀಗ ಸಹನಾ ಮದುವೆ ಮುರಳಿ ಮೇಷ್ಟ್ರ ಜೊತೆ ಆಗಿ ಹೋಗಿದೆ. ಆದರೆ ಸ್ನೇಹಾ ಹಾಗೂ ಕಂಠಿ ಮದುವೆ ಮಾತ್ರ ನಡೆಯುತ್ತಾ ಎಂಬುವುದು ಎಲ್ಲರ ಪ್ರಶ್ನೆ. ಇದೀಗ ಸ್ನೇಹಾ ಜೀವನದಲ್ಲಿ ಭುವನ್ ಬಂದರೆ ಕಂಠಿ ಜೀವನದಲ್ಲಿ ರಾಧ ಎಂಟ್ರಿ ಆಗಿದ್ದಾರೆ.
ಕಂಠಿ ಜೀವನಕ್ಕೆ ರಾಧ ಎಂಟ್ರಿ
ಅವರಿಬ್ಬರ ಜೀವನ ಇದೀಗ ಬೇರೆ ಪಥದಲ್ಲಿ ಸಾಗುತ್ತಿದೆ. ಸ್ನೇಹಾ ಕಂಠಿಯನ್ನು ಮರೆಯಲು ಹರ ಸಾಹಸ ಪಟ್ಟರೆ. ಕಂಠಿ ಮಾತ್ರ ಸ್ನೇಹಳನ್ನು ಹೇಗಾದರೂ ಮಾಡಿ ಮರೆಯಬೇಕು ಹಾಗೆಯೇ ತನ್ನಿಂದ ಆಗಿ ತನ್ನ ಮನೆಯವರು ನೋವು ಅನುಭವಿಸಬಾರದು ಎನ್ನುವ ದೃಷ್ಟಿಯಿಂದ ಕಂಠಿ ಮಾತ್ರ ಮನಸಿಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಗೆ ನೀಡಿ ಇದೀಗ ಹಸೆ ಮಣೆವರೆಗೂ ಬಂದಿದೆ.

ಧಾರವಾಹಿಗೆ ಹೊಸ ತಿರುವು
'ಪುಟ್ಟಕ್ಕನ ಮಕ್ಕಳು' ಧಾರವಾಹಿ ದಿನಕ್ಕೊಂದು ತಿರುವಿನಿಂದ ಕುತೂಹಲ ಮೂಡಿಸುತ್ತಾ ಇದೆ. ಸದ್ಯ 400 ಸಂಚಿಕೆ ಪೂರ್ಣಗೊಳಿಸಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ ಬಹಳ ಖುಷಿಯಲ್ಲಿ ಇದ್ದಾರೆ. ಇನ್ನು ಈ ಧಾರಾವಾಹಿ ನೋಡಿದ ಜನರು ಮಾತ್ರ ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಾ ಇದ್ದಾರೆ. ಸ್ನೇಹಾ ಬಹಳ ದ್ವೇಷ ಮಾಡುವ ಬಂಗಾರಮ್ಮನ ಮಗನೇ ಕಂಠಿ.
ಕಂಠಿಗೆ ಮುರಳಿ ಕ್ಲಾಸ್
ಇದೀಗ ಎಲ್ಲಾ ವಿಚಾರ ಮುರಳಿಗೆ ತಿಳಿದು ಹೋಗಿದೆ. ಸ್ನೇಹಾ ಇದೀಗ ತೆಗೆದುಕೊಂಡು ಇರುವ ನಿರ್ಧಾರ ಮಾತ್ರ ಸರಿಯಾಗಿದೆ ಎಂದು ವಾದಿಸುತ್ತಾ ಇರುತ್ತಾರೆ. ಇನ್ನು ಕಂಠಿ ಬಂಗಾರಮ್ಮನ ಮಗ ಎಂದು ಯಾವಾಗ ತಿಳಿಯುತ್ತೆ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಕಂಠಿ ಸ್ನೇಹಾ ದೂರ ದೂರ
ನಿಜ ವಿಚಾರ ತಿಳಿದರೆ ಸ್ನೇಹಾ ರಿಯಾಕ್ಷನ್ ಹೇಗೆ ಇರಬಹುದು ಎಂದೆಲ್ಲ ಜನರು ತಲೆ ಕೆಡಿಸಿಕೊಂಡು ಇದ್ದಾರೆ. ಇದೀಗ ಪುಟ್ಟಕ್ಕನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುರೋಹಿತರು ಕೂಡ ಪುಟ್ಟಕ್ಕನ ಬಳಿ ಮದುವೆ ಬಗ್ಗೆ ಮದುಮಗಳ ಬಗ್ಗೆ ಜಾಗರೂಕರಾಗಿ ಇರು ಎಂದು ಕಿವಿ ಮಾತು ಹೇಳಿದ್ದಾರೆ.


Click it and Unblock the Notifications











