Dinesh Phadnis: ಜನಪ್ರಿಯ ಧಾರಾವಾಹಿ 'ಸಿಐಡಿ' ನಟ ದಿನೇಶ್ ಫಡ್ನಿಸ್ (57) ನಿಧನ
ಎರಡು ದಶಕಗಳಿಮದ ಪ್ರಸಾವಾಗುತ್ತಿದ್ದ ಜನಪ್ರಿಯ ಟಿವಿ ಧಾರಾವಾಹಿ ಸಿಐಡಿಯಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟ ದಿನೇಶ್ ಫಡ್ನಿಸ್ ಸೋಮವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಜನಪ್ರಿಯ ಟಿವಿ ಶೋನಲ್ಲಿ ನಟ ದಿನೇಶ್ 'ಫ್ರೆಡೆರಿಕ್ಸ್' ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ 57 ನೇ ವಯಸ್ಸಾಗಿತ್ತು.
ಅನಾರೋಗ್ಯಕ್ಕೆ ಒಳಗಾಗಿದ್ದ ನಟ ದಿನೇಶ್ ಫಡ್ನಿಸ್ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಉಪನಗರದಲ್ಲಿರುವ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರಾಗಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ದಿನೇಶ್ ಫಡ್ನಿಸ್ ಅವರ ಸಿಐಡಿ ಸಹ ಸ್ಟಾರ್ ಆದಿತ್ಯ ಶ್ರೀವಾಸ್ತವ ಅವರು ಸುದ್ದಿಯನ್ನು ದೃಢಪಡಿಸಿದ್ದಾರೆ.

ಲಿವರ್ ಪ್ರಾಬ್ಲಮ್ ಹೊಂದಿದ್ದ ನಟ ದಿನೇಶ್ ಫಡ್ನಿಸ್
ನಟ ದಿನೇಶ್ ಫಡ್ನಿಸ್ ಅವರಿಗೆ ಯಕೃತ್ತಿನ ಸಮಸ್ಯೆಗಳಿದ್ದವು. ಅದು ಇತರ ಅಂಗಗಳ ಮೇಲೆ ಪರಿಣಾಮ ಬೀರಿದೆ. ಕಳೆದ ಎರಡು-ಮೂರು ದಿನಗಳಿಂದ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಸಾವನ್ನಪ್ಪಿದ್ದಾರೆ.
ಮಂಗಳವಾರ ಬೋರಿವಲಿ ಪೂರ್ವದಲ್ಲಿ ದಿನೇಶ್ ಫಡ್ನಿಸ್ ಅವರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ನಟ ತನ್ನ ಪತ್ನಿಯನ್ನು ಅಗಲಿದ್ದಾರೆ. ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ CINTAA (ಸಿನಿ ಮತ್ತು ಟಿವಿ ಕಲಾವಿದರ ಸಂಘ) ಸಾಮಾಜಿಕ ಮಾಧ್ಯಮದಲ್ಲಿ ನಟನಿಗೆ ಗೌರವ ಸಲ್ಲಿಸಿದೆ. "CINTAA ಆಗಸ್ಟ್ 2004 ರಿಂದ ಸದಸ್ಯರಾಗಿರುವ ದಿನೇಶ್ ಫಡ್ನಿಸ್ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತದೆ" ಎಂದು ಶ್ರದ್ಧಾಂಜಲಿ ತಿಳಿಸಿದೆ.
ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ನಟನೆ
ದಿನೇಶ್ ಫಡ್ನಿಸ್ ಅವರು ಟಿವಿ ಶೋ ಸಿಐಡಿಯಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಅಮೀರ್ ಖಾನ್ ನಟನೆಯ ಸರ್ಫರೋಶ್ ಮತ್ತು ಮೇಳದಂತಹ ಚಲನಚಿತ್ರಗಳಲ್ಲಿ ಕಿರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2001 ರಲ್ಲಿ ಬಿಡುಗಡೆಯಾದ ಆಫೀಸರ್ ಚಲನಚಿತ್ರದಲ್ಲಿ ಸಹ ನಟಿಸಿದರು.ಜೊತೆಗೆ ಹೃತಿಕ್ ರೋಷನ್ ಚಿತ್ರ ಸೂಪರ್ 30 ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ದಿನೇಶ್ ಫಡ್ನಿಸ್, CID: ಸ್ಪೆಷಲ್ ಬ್ಯೂರೋ, ಅದಾಲತ್, ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾಹ್ ಮತ್ತು CIF ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಮರಾಠಿ ಚಲನಚಿತ್ರಕ್ಕೆ ಕಥೆ ಬರೆದಿದ್ದಾರೆ.
CID: ಸ್ಪೆಷಲ್ ಬ್ಯೂರೋ
1997 ರಲ್ಲಿ ಮೊದಲ ಬಾರಿಗೆ ಪ್ರಸಾರವಾದ ಟಿವಿ ಶೋ ಸಿಐಡಿ, ಶಿವಾಜಿ ಸತಮ್ (ಎಸಿಪಿ ಪ್ರದ್ಯುಮನ್), ಹಿರಿಯ ಇನ್ಸ್‌ಪೆಕ್ಟರ್‌ಗಳಾದ ಆದಿತ್ಯ ಶ್ರೀವಾಸ್ತವ (ಅಭಿಜೀತ್) ಮತ್ತು ದಯಾನಂದ ಶೆಟ್ಟಿ (ದಯಾ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊಲೆ ರಹಸ್ಯಗಳನ್ನು ಪರಿಹರಿಸಿವ ಈ ಕಥೆ ಎರಡು ದಶಕಗಳಿಂದ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಸುಮಾರು 1,500 ಸಂಚಿಕೆಗಳನ್ನು ಪ್ರಸರ ಮಾಡಲಾಗಿದೆ.


Click it and Unblock the Notifications










