For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರೂಪಕ, ನಟ ಆನಂದ್ ಕ್ಯಾನ್ಸರ್‌ಗೆ ಬಲಿ

  By ಫಿಲ್ಮಿಬೀಟ್ ಡೆಸ್ಕ್
  |

  ತಮಿಳಿನ ಖ್ಯಾತ ನಿರೂಪಕ, ನಟ ಆನಂದ್ ಕಣ್ಣನ್ ಕ್ಯಾನ್ಸರ್ ನಿಂದ ನಿಧನ ಹೊಂದಿದರು. 1990ರ ದಶಕದಲ್ಲಿ ಮತ್ತು 2000ರ ಆರಂಭದಲ್ಲಿ ಆನಂದ್ ಖ್ಯಾತ ನಿರೂಪಕನಾಗಿ ತಮಿಳಿನಲ್ಲಿ ಪ್ರಸಿದ್ಧಿ ಪಡೆದಿದ್ದರು. ಆನಂದ್ ಕಳೆದ ಕೆಲವು ತಿಂಗಳಿಂದ ಪಿತ್ತನಾಳ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 48 ವರ್ಷದ ಆನಂದ್ ಕಣ್ಣನ್ ನಿನ್ನೆ (ಆಗಸ್ಟ್ 16) ತಡರಾತ್ರಿ ನಿಧನ ಹೊಂದಿದರು.

  ಕಳೆದ ಕೆಲವು ತಿಂಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುತ್ತಿದ್ದ ಆನಂದ್ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ್ ನಿಧನ ಹೊಂದಿದರು. ಖ್ಯಾತ ನಿರೂಪಕನ ನಿಧನಕ್ಕೆ ತಮಿಳು ಸಿನಿಮಾರಂಗದ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವೆಂಕಟೇಶ್ ಪ್ರಭು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

  ಆನಂದ್ ತನ್ನ ವೃತ್ತಿ ಜೀವನನ್ನು ಸಿಂಗಾಪು ಮೂಲದ ವಾಹಿನಿ ಮೂಲಕ ಪ್ರಾರಂಭಿಸಿದರು. ನಿರೂಪಕನಾಗಿ ಟಿವಿ ಲೋಕಕ್ಕೆ ಎಂಟ್ರಿ ಕೊಟ್ಟ ಆನಂದ್ ಬಳಿಕ ನಟನಾಗಿಯೂ ಗುರುತಿಸಿಕೊಂಡರು. ಬಳಿಕ ಚೆನ್ನೈನಲ್ಲಿ ಆರ್ ಜೆ ಆಗಿ ಕೆಲಸ ಮಾಡಿದರು. ಟಿವಿ ಕಾರ್ಯಕ್ರಮಗಳಾದ ಸಿಂಧುಬಾದ್ ಸಿಂಧುಬಾದ್, ಕಾದಲ್ ಚಾನೆಲ್, ಸವಾಲ್ ಸಿಂಗಾಪುರ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವ ಮೂಲಕ ಪ್ರಸಿದ್ಧಿ ಗಳಿಸಿದ್ದರು.

  2008ರಲ್ಲಿ ಆನಂದ್ ನಿರ್ದೇಶಕ ವೆಂಕಟೇಶ್ ಪ್ರಭು ನಿರ್ದೇಶನದ ಸರೋಜ ಸಿನಿಮಾ ಮೂಲಕ ನಟನಾರಂಗಕ್ಕೆ ಪದಾರ್ಪಣೆ ಮಾಡಿದರು. ಸಣ್ಣ ಪಾತ್ರದಲ್ಲಿ ಆನಂದ್ ನಟಿಸಿದ್ದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಕಿರುತೆರೆಯಲ್ಲಿ ಪ್ರಸಿದ್ದಿಗಳಿಸಿದ್ದ ಆನಂದ್, ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಣ್ಣದ ಲೋಕದಲ್ಲಿ ಮತ್ತಷ್ಟು ಸಾಧನೆ ಮಾಡುವ ಕನಸು ಕಂಡಿದ್ದ ಆನಂದ್ ಗೆ ಮಹಾಮಾರಿ ಕ್ಯಾನ್ಸರ್ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಕರೆದೊಯ್ದಿದೆ.

  ಆನಂದ್ ನಿಧನ ಸುದ್ದಿ ಕೇಳಿ ಶಾಕ್ ಆಗಿರುವ ನಿರ್ದೇಶಕ ವೆಂಕಟೇಶ್ ಪ್ರಭು ಭಾವುಕ ಟ್ವೀಟ್ ಮಾಡಿದ್ದಾರೆ. ಆನಂದ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ಒಬ್ಬ ಉತ್ತಮ ಸ್ನೇಹಿತ, ಗ್ರೇಟ್ ಮನುಷ್ಯ ಇನ್ನಿಲ್ಲ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಂತಾಪ ಸೂಚಿಸಿದ್ದಾರೆ.

  ನಟಿ ಮತ್ತು ರಾಜಕಾರಣಿ ಗಾಯತ್ರಿ ರಘುರಾಮ್ ಟ್ವೀಟ್ ಮಾಡಿ, "ಆನಂದ್ ನಿಧನದ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಒಳ್ಳೆಯ ವ್ಯಕ್ತಿ. ಎಷ್ಟು ಬೇಗ ಹೊರಟು ಹೋದಿರಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ" ಎಂದು ಹೇಳಿದ್ದಾರೆ.

   Popular VJ Ananda Kannan passed away due to Cancer

  ನಟ ಅಶೋಕ್ ಕುಮಾರ ಟ್ವೀಟ್ ಮಾಡಿ, "ಆತ್ಮೀಯ ಸಹೋದರ ಆನಂದ್ ಯಾವಾಗಲು ಪಾಸಿಟಿವ್ ಆಗಿ ಇರುತ್ತಿದ್ರಿ. ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ" ಎಂದು ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

  ಆನಂದ್ ಅಭಿಮಾನಿಗಳ ಸಹ ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. "ನಾನು ಬಾಲ್ಯದಲ್ಲಿ ನೋಡಿದ ಅದ್ಭುತ ವ್ಯಕ್ತಿ. ಅವರು ಈಗಿಲ್ಲ ಎಂದು ನಂಬಲು ಸಾಧ್ಯವಿಲ್ಲ. ನಿಮ್ಮನ್ನು ಟಿವಿಯಲ್ಲಿ ನೋಡಲು ಕಾಯುತ್ತಿದ್ದ ನೆನಪು ಹಾಗೆ ಇದೆ" ಎಂದು ಹೇಳಿದ್ದಾರೆ.

  English summary
  Popular VJ Ananda Kannan passed away due to Cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X