ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಖ್ಯಾತ ಯೂಟ್ಯೂಬರ್..!
ಪ್ರತಿ ವರ್ಷ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಶೋ ಅಪೂರ್ಣವೆನಿಸುತ್ತದೆ. ಹೀಗಾಗಿಯೇ ವರ್ಷಾನು ವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳುವ ಭಾಗ್ಯ ಸಿಗಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುವಾಗುತ್ತೆ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರಿಗೆ ಅವಕಾಶ ಸಿಗುತ್ತಾ ಎಂಬ ಪ್ರಶ್ನೆ ಕಾಡುತ್ತೆ.
ವಾಹಿನಿಯವರು ಕೂಡ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ. ಈ ವರ್ಷ ಕೂಡ ಇದೇ ತರಹದ ಪ್ರಯತ್ನಗಳಾಗುತ್ತಿವೆ. ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನು ಹಲವು ದಿನಗಳಿರುವ ಸಮಯದಲ್ಲಿಯೇ ಮನೆಗೆ ಹೋಗುವ ಕೆಲವರ ಹೆಸರುಗಳು ಆಗಲೇ ಚಾಲ್ತಿಯಲ್ಲಿವೆ.

ಹೌದು, ಅಸಲಿಗೆ ಪಕ್ಕದ ಆಂಧ್ರಪ್ರದೇಶದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗಿಂದನೇ ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ನಾಗಾರ್ಜುನ ಬದಲು ಈ ಬಾರಿ ಬಾಲಯ್ಯ ಕಾರ್ಯಕ್ರಮದ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಬಾಲಯ್ಯ ಈಗಾಗಲೇ ಅನ್‌ಸ್ಟಾಪೆಬಲ್ ವಿತ್ ಎನ್‌ಬಿಕೆ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ತಮ್ಮ ಮಾತು, ಹಾವ, ಭಾವದಿಂದ ತೆಲುಗು ನಾಡಿನ ಪ್ರೇಕ್ಷಕರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಹಿನ್ನೆಲೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಬಾಲಯ್ಯ ಮಾಡಿದರೆ ಸೂಕ್ತ ಎನ್ನುವ ಆಲೋಚನೆಯನ್ನು ಕಾರ್ಯಕ್ರಮದ ಆಯೋಜಕರು ಮಾಡಿದ್ಧಾರೆ ಎನ್ನುವ ಸುದ್ದಿ ಇದೆ.
ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮ ಕನ್ನಡ ಮತ್ತು ಹಿಂದಿಯಲ್ಲಿ ಅಕ್ಟೋಬರ್ ನಲ್ಲಿ ಶುರುವಾದರೆ ತೆಲುಗಿನಲ್ಲಿ ಸೆಪ್ಟೆಂಬರ್‌ನಲ್ಲಿ ಶುರುವಾಗುತ್ತೆ. ಆದರೆ ಈ ಬಾರಿ ಈ ಸಂಪ್ರದಾಯ ಮುರಿದು ಹೊಸ ಪದ್ದತಿಗೆ ನಾಂದಿ ಹಾಡಲಾಗುತ್ತಿದೆ. ಬಿಗ್ ಬಾಸ್ ಸೀಸನ್ 9 ಸೆಪ್ಟೆಂಬರ್‌ಗಿಂತ ಮೊದಲೇ ಅಂದರೆ ಮೇ ತಿಂಗಳಿನಲ್ಲಿಯೇ ಶುರುವಾಗುವ ಸಾಧ್ಯತೆ ಇದೆ ಎಂದು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ. ಇದಕ್ಕೆ ಪೂರಕವಾಗಿ ಸ್ಫರ್ಧಿಗಳ ಹುಡುಕಾಟ ಈಗಾಗಲೇ ಆಂಧ್ರಪ್ರದೇಶದಲ್ಲಿ ಶುರುವಾಗಿದ್ದು ಈ ಬಾರಿ ಮೊದಲ ಸ್ಫರ್ಧಿಯಾಗಿ ಪ್ರಖ್ಯಾತ ಯೂಟ್ಯೂಬರ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆದ ಬಬ್ಲೂ ಆಯ್ಕೆಯಾಗಿದ್ದಾರೆ ಎಂದು ಡೆಕ್ಕನ್ ಕ್ರೋನಿಕಲ್ ಪತ್ರಿಕೆ ವರದಿ ಮಾಡಿದೆ.
ಆ ಪ್ರಕಾರ ಇನ್‌ಸ್ಟಾಗ್ರಾಮ್‌ನಲ್ಲಿ 459,282 ಫಾಲೋವರ್ಸ್‌ಗಳನ್ನು ಹೊಂದಿರುವ ಬಬ್ಲೂಗೆ ಕಳೆದ ವರ್ಷವೇ ಬಿಗ್ ಬಾಸ್ ಮನೆಗೆ ಬರಲು ಕಾರ್ಯಕ್ರಮದ ಆಯೋಜಕರು ಆಹ್ವಾನ ನೀಡಿದ್ದರು. ಆದರೆ ಕಳೆದ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದ ಬಬ್ಲೂ ಈ ಬಾರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇನ್ನು ಕಳೆದ ವರ್ಷದ ಕಾರ್ಯಕ್ರಮ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಪ್ರೇಕ್ಷಕರನ್ನು ಸೆಳೆದಿರಲಿಲ್ಲ. ನಾಗಾರ್ಜುನ ಅವರ ನಿರೂಪಣೆ ಕೂಡ ಸಪ್ಪೆಯಾಗಿತ್ತು. ಟಿಆರ್‌ಪಿ ನೆಲಕಚ್ಚಿತ್ತು. ಹೀಗಾಗಿಯೇ ಈ ಬಾರಿ ಈಗಿಂದಲೇ ಕಾರ್ಯಕ್ರಮದ ರೂಪರೇಶೆಯನ್ನು ಸಿದ್ದ ಮಾಡುತ್ತಿರುವ ಆಯೋಜಕರು ಬಬ್ಲೂ ಜೊತೆಯಲ್ಲಿ ಇನ್ನು ಕೆಲವು ಯೂಟ್ಯೂಬರ್‌ಗಳಿಗೆ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳಿಗೆ ಈ ಬಾರಿ ಮಣೆ ಹಾಕುವ ಮನಸು ಮಾಡಿದ್ದಾರೆ ಎಂದು ಕೂಡ ವರದಿಯಾಗಿದೆ.
ಇನ್ನುಳಿದಂತೆ ಬಿಗ್ ಬಾಸ್ ಸೆಟ್ ನಿರ್ಮಾಣ ಕೆಲಸ ಕೂಡ ಶುರುವಾಗಿದೆ ಎಂದು ವರದಿಯಾಗಿದೆ. ಸ್ಟಾರ್ ಮಾ ಮತ್ತು ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ಈ ವರ್ಷ ಕೂಡ ತೆಲುಗು ಬಿಗ್ ಬಾಸ್ ಪ್ರಸಾರವಾಗಲಿದ್ದು, ಶೀಘ್ರದಲ್ಲಿಯೇ ಕಾರ್ಯಕ್ರಮ ಆರಂಭವಾಗುವ ದಿನವನ್ನು ಆಯೋಜಕರು ಘೋಷಿಸುವ ಸಾಧ್ಯತೆ ಇದೆ.


Click it and Unblock the Notifications











