twitter
    For Quick Alerts
    ALLOW NOTIFICATIONS  
    For Daily Alerts

    'ನಾನು ತುಂಬಾ ತಪ್ಪುಗಳನ್ನು ಮಾಡಿದ್ದೀನಿ ಕ್ಷಮಿಸಿ': ಪೊಲೀಸರ ಬಳಿ ಕ್ಷಮೆ ಕೇಳಿದ ಅಪ್ಪು

    |

    'ನಾನು ತುಂಬ ತಪ್ಪುಗಳನ್ನು ಮಾಡಿದ್ದೀನಿ ಕ್ಷಮಿಸಿ' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕು ಅಪ್ಪು ದಿಢೀರನೆ ಕ್ಷಮೆ ಕೇಳುವಂತಹದ್ದು ಏನು ಮಾಡಿದ್ದಾರೆ ಎಂದು ಅಂದ್ಕೋತ್ತಿದ್ದೀರಾ. ಅಪ್ಪು ಕ್ಷಮೆ ಕೇಳಿರುವುದು ಕನ್ನಡದ ಕೋಟ್ಯದಿಪತಿ ವೇದಿಕೆಯಲ್ಲಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಸೀಸನ್ 4 ಕೊನೆಯ ಹಂತದಲ್ಲಿ ಇದೆ.

    ಮುಗಿಯುವ ಹಂತದಲ್ಲಿ ಇರುವ ಕನ್ನಡದ ಕೋಟ್ಯಧಿಪತಿಗೆ ಪೊಲೀಸ್ ಅಧಿಕಾರಿಗಳು ಹಾಟ್ ಸೀಟಿನಲ್ಲಿ ಕೂತಿದ್ದರು. ಕಳೆದ ವಾರದ ಕನ್ನಡದ ಕೋಟ್ಯಧಿಪತಿ ಪೊಲೀಸ್ ಅಧಿಕಾರಿಗಳಿಗಾಗಿಯೆ ವಿಶೇಷ ಶೋ ಏರ್ಪಡಿಸಲಾಗಿತ್ತು. ಪೊಲೀಸ್ ಅಧಿಕಾರಿಗಳಾದ ನಂದೀಶ್, ರವಿ ಪಾಟೀಲ್, ಎಚ್ ಕೆ ಮಹಾನಂದ್, ಎನ್ ನಾಯಾರಾಣ್, ಅನೀಲ್ ಕುಮಾರ್ ಭಾಗಿಯಾಗಿದ್ದರು.

    ಕೋಟ್ಯಧಿಪತಿಯಲ್ಲಿ ಬಿಗ್ ಟ್ವಿಸ್ಟ್: ಪವರ್ ಸ್ಟಾರ್ ಜಾಗಕ್ಕೆ ಹೊಸ ನಿರೂಪಕಿಕೋಟ್ಯಧಿಪತಿಯಲ್ಲಿ ಬಿಗ್ ಟ್ವಿಸ್ಟ್: ಪವರ್ ಸ್ಟಾರ್ ಜಾಗಕ್ಕೆ ಹೊಸ ನಿರೂಪಕಿ

    ಮೊದಲು ಹಾಟ್ ಸೀಟ್ ಏರಿದ ಪೊಲೀಸ್ ಅಧಿಕಾರಿಗಳಾದ ಎನ್.ನಾಯಾರಾಣ್ ಮತ್ತು ಅನೀಲ್ ಕುಮಾರ್ ಶೋನಲ್ಲಿ ವಿಶೇಷವಾಗಿ ಟ್ರಾಫಿಕ್ ನಿಯಮದ ಬಗ್ಗೆ ಮತ್ತು ರೂಲ್ಸ್ ಬ್ರೇಕ್ ಮಾಡುವವರ ಬಗ್ಗೆ ಹೇಳುತ್ತಿದ್ದಾಗ, ಅಪ್ಪು ನಾನು ತಪ್ಪುಗಳನ್ನು ಮಾಡಿದ್ದೀನಿ ಎಂದು ಹೇಳುತ್ತಾ ಪೊಲೀಸರ ಮುಂದೆ ಕ್ಷಮೆ ಕೇಳಿದ್ದಾರೆ.

    ನಾನು ತುಂಬ ತಪ್ಪು ಮಾಡಿದ್ದೀನಿ ಕ್ಷಮಿಸಿ

    ನಾನು ತುಂಬ ತಪ್ಪು ಮಾಡಿದ್ದೀನಿ ಕ್ಷಮಿಸಿ

    "ನಾನು ತುಂಬ ಸ್ಟ್ರಿಕ್ಟ್ ಆಗಿ ನಿಯಮ ಪಾಲಿಸುತ್ತೇನೆ ಎಂದು ಅಂದ್ಕೋಬೇಡಿ. ತುಂಬಾ ತಪ್ಪುಗಳನ್ನು ಮಾಡಿದ್ದೀನಿ. ಹಾಗಾಗಿ ಸತ್ಯ ಹೇಳುತ್ತೇನೆ. 20-25 ವರ್ಷದ ಹಿಂದೆ ಡ್ರೈವಿಂಗ್ ಮಾಡಬೇಕಾದರೆ ತುಂಬ ವೇಗವಾಗಿ ಚಲಾಯಿಸುತ್ತಿದ್ದೆ. ಆಗ ರೂಲ್ಸ್ ಫಾಲೋ ಮಾಡುತ್ತಿರಲ್ಲಿಲ್ಲ. ಹಾಗಾಗಿ ಕೆಲವು ಕಡೆ ಚಿಕ್ಕ ಪುಟ್ಟ ಗಲಾಟೆಗಳಾಗಿವೆ. ಹಾಗಾಗಿ ಈ ಸಮಯದಲ್ಲಿ ಅದನ್ನೆಲ್ಲ ಕ್ಷಮಿಸಿಬಿಡಿ" ಎಂದು ಕೇಳಿಕೊಂಡಿದ್ದಾರೆ.

    'ಸಿರಿಗನ್ನಡಂ ಗೆಲ್ಗೆ' ಘೋಷಣೆಯನ್ನು ರೂಪಿಸಿದವರು ಯಾರು?'ಸಿರಿಗನ್ನಡಂ ಗೆಲ್ಗೆ' ಘೋಷಣೆಯನ್ನು ರೂಪಿಸಿದವರು ಯಾರು?

    ಈಗ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತೇನೆ

    ಈಗ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತೇನೆ

    "ಆಗ ಇದ್ದಂತಹ ಪೊಲೀಸ್ ಅಧಿಕಾರಿಗಳು ಈಗ ನಿವೃತ್ತಿ ಆಗಿಬರಹುದು. ಆದ್ರೆ ಕ್ಷಮಿಸಿಬಿಡಿ" ಎಂದು ಹೇಳಿದ್ದಾರೆ. ಅದ್ರಾಗ ಅಪ್ಪು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಾರಂತೆ. ಆದ್ರೂ ಸ್ವಲ್ಪ ವೇಗವಾಗಿ ಓಡಿಸುತ್ತಿರುತ್ತೇನೆ. ಅದನ್ನ ಕಮ್ಮಿ ಮಾಡಿಕೊಳ್ಳಬೇಕು" ಎಂದು ಪೊಲೀಸರ ಮುಂದೆ ಕುಳಿತು ಕೋಟ್ಯಧಿಪತಿ ವೇದಿಕೆಯಲ್ಲಿ ಹೇಳಿದ್ದಾರೆ.

    ಯೂನಿಫಾರ್ಮ್ ಗೆ ಗೌರವ ಕೊಡಬೇಕು

    ಯೂನಿಫಾರ್ಮ್ ಗೆ ಗೌರವ ಕೊಡಬೇಕು

    "ಚಿಕ್ಕ ವಯಸ್ಸಿನಿಂದಲು ನಮ್ಮ ತಂದೆಯವರು ಹೇಳಿಕೊಟ್ಟಿದ್ದರು, ಯೂನಿಫಾರ್ಮ್ ಗೆ ಯಾವಾಗಲು ಗೌರವ ಕೊಡಬೇಕು, ನಮ್ಮಲ್ಲಿ ಇರುವ ಜನಸಂಖ್ಯೆಗೆ ಪೊಲೀಸ್ ಪವರ್ ಕಮ್ಮಿ ಇದೆ. ಆದ್ರೂ ಕೂಡ ಇಷ್ಟರ ಮಟ್ಟಿಗೆ ನಿಯಮ ಫಾಲೋ ಆಗುತ್ತಿದೆ ಅಂದರೆ ಪೊಲೀಸ್ ಡಿಪಾರ್ಟ್ ಮೆಂಟ್ ಗೆ ಹ್ಯಾಟ್ಸ್ ಆಫ್" ಎಂದು ಹೇಳಿದ್ದಾರೆ.

    25 ಲಕ್ಷದ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ ರಾಘವೇಂದ್ರ: ಯಾವುದು ಆ ಪ್ರಶ್ನೆ?25 ಲಕ್ಷದ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ ರಾಘವೇಂದ್ರ: ಯಾವುದು ಆ ಪ್ರಶ್ನೆ?

    ಪೊಲೀಸ್ ಕಲ್ಯಾಣ ನಿಧಿಗೆ ಆಡಿದ ಅಧಿಕಾರಿಗಳು

    ಪೊಲೀಸ್ ಕಲ್ಯಾಣ ನಿಧಿಗೆ ಆಡಿದ ಅಧಿಕಾರಿಗಳು

    ಇಬ್ಬರು ಪೊಲೀಸ್ ಅಧಿಕಾರಿಗಳಾದ ಎನ್. ನಾಯಾರಾಣ್ ಮತ್ತು ಅನೀಲ್ ಕುಮಾರ್ ಅಂತಿಮವಾಗಿ 3.2 ಲಕ್ಷ ಗೆದ್ದು ಪೊಲೀಸ್ ಕಲ್ಯಾಣ ನಿಧಿಗೆ ನೀಡಿದ್ದಾರೆ. ಕೊನೆಯ ಪ್ರಶ್ನೆ 'ಟೆಸ್ಟ್ ಇತಿಹಾಸದಲ್ಲಿ ಒಂದು ಪಂದ್ಯದ ಎಲ್ಲಾ ಐದು ದಿನಗಳಲ್ಲೂ ಬ್ಯಾಂಟಿಂಗ್ ಮಾಡಿದ ಭಾರತದ ಮೊದಲ ಕ್ರಿಕೆಟ್ ಆಟಗಾರ ಯಾರು'? ಆಡಿಯನ್ಸ್ ಹೆಲ್ಪ್ ತೆಗೆದುಕೊಂಡ ಅಧಿಕಾರಿಗಳಿಗೆ ಆಡಿಯನ್ಸ್ ಕಡೆಯಿಂದನೂ ತಪ್ಪು ಉತ್ತರ ಸಿಕ್ಕಿದೆ. ಹಾಗಾಗಿ ಆಟವನ್ನು ಅರ್ಧದಲ್ಲೆ ನಿಲ್ಲಿಸಿ ಗೆದ್ದ 3.2 ಲಕ್ಷವನ್ನು ಪೊಲೀಸ್ ಕಲ್ಯಾಣ ನಿಧಿಗೆ ನೀಡಿದ್ದಾರೆ.

    English summary
    Kannada actor Power star Puneeth Rajkumar apologizes to police in Kannadada Kotyadhipathi.
    Tuesday, October 8, 2019, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X