Weekend with Ramesh: 11ನೇ ತರಗತಿ ಫೇಲಾದ್ರೂ ಜೀವನದಲ್ಲಿ ಪಾಸಾದ ಪ್ರಭುದೇವ
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಪ್ರಭುದೇವ ಅವರು ತಮ್ಮ ಜೀವನದ ಸ್ವಾರಸ್ಯಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ತಂದೆ ಕೇಳಿದ್ರು, ನೀನು ಪಾಸ್ ಆಗಿದ್ಯಾ? ಇಲ್ವಾ? ಎಂದು ನಾನು ಪಾಸ್ ಆಗಿಲ್ಲ ಎಂದೆ. ಅದಕ್ಕೆ ನನ್ನ ತಂದೆ ನಿನಗೆ ಏನು ಬೇಕು ಅದನ್ನು ಮಾಡು ಎಂದರು. ನನ್ನ ತಂದೆ ತುಂಬಿದ ಆತ್ಮಸ್ಥೈರ್ಯದಿಂದ ನಾನು ಈಗ ಇಲ್ಲಿ ಬಂದು ಕುಳಿತಿದ್ದೇನೆ ಎಂದು ಪ್ರಭುದೇವ ಹೇಳಿದ್ದಾರೆ.
ಪ್ರಭುದೇವ ಅವರನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿ ಹೊಗಳಿದ್ದಾರೆ. ಅವರ ಹೆಸರಿನಲ್ಲೇ ಪ್ರಭುದತ್ತ ಎಂದು ಹೆಸರಿರುವುದರಿಂದ ಪ್ರಭುದೇವ ಆಗಿದ್ದಾರೆ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಸಹ ಪ್ರಭುದೇವ ಅವರನ್ನು ಮಾನವೀಯ ಗುಣವುಳ್ಳ ವ್ಯಕ್ತಿ ಎಂದು ತಿಳಿಸಿದ್ದಾರೆ. ನೃತ್ಯ ಸಂಯೋಜಕ ಚಿನ್ನಿ ಮಾಸ್ಟರ್ ಅದ್ಭುತವಾದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಪ್ರಭುದೇವ್ ಬಗ್ಗೆ ತಿಳಿಸಿದ್ದಾರೆ.

ಪ್ರಭುದೇವ ಅವರ(ಏಪ್ರಿಲ್ 3) 50ನೇ ವರ್ಷದ ಹುಟ್ಟುಹಬ್ಬವನ್ನು ವೀಕೆಂಡ್ ವಿತ್ ರಮೇಶ್ ವೇದಿಕೆಯ ಮೇಲೆ ಆಚರಣೆ ಮಾಡಲಾಯಿತು. ಇದೇ ವೇಳೆ ಪ್ರಭುದೇವ ಮಾತನಾಡಿ ಜೀವನದಲ್ಲಿ ಏನೇ ಬಂದರೂ ಸಹ ಟೇಕ್ ಇಟ್ ಇಸಿಯಾಗಿ ತೆಗೆದುಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಮುನ್ನುಗ್ಗಬೇಕು ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನ ಮಕ್ಕಳು ಡ್ಯಾನ್ಸ್ ಮಾಡುವ ಮೂಲಕ ಪ್ರಭುದೇವ ಅವರಿಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇದೇ ವೇಳೆ ಮಕ್ಕಳ ಜೊತೆಗೆ ಪ್ರಭುದೇವ್ ಸಹ ನೃತ್ಯವನ್ನು ಮಾಡಿ ಮನರಂಜನೆ ನೀಡಿದ್ದಾರೆ. ತಮ್ಮ ಅಸಾಧಾರಣ ಪ್ರತಿಭೆಯಿಂದ ಅಚ್ಚ ಕನ್ನಡದ ಕಂದನಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಜೀವನದ ಏಳು ಬೀಳುಗಳ ಬಗ್ಗೆ ತಿಳಿಸಿದ್ದಾರೆ .
ಮೈಸೂರಿನ ದೂರ ಎಂಬ ಗ್ರಾಮದವರಾದ ಪ್ರಭುದೇವ ಅವರು ಆಡುಭಾಷೆಯ ಮೂಲಕ ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದ್ದಾರೆ. ಎಲ್ಲರಿಗೂ ಸಹ ಪ್ರಭುದೇವ ಅವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರೂ ಸಹ ಅಚ್ಚ ಕನ್ನಡದಲ್ಲಿ ಮಾತನಾಡಿ ನಮ್ಮ ಮಣ್ಣಿನ ಸೊಗಡನ್ನು ಮರೆಯದೇ ಇರುವುದು ಖುಷಿ ತಂದೆದೆ. ಕಳೆದ ವಾರದ ರಮ್ಯಾ ಎಪಿಸೋಡ್‌ಗಿಂತ ಈ ಎಪಿಸೋಡ್‌ಗಳು ಸೂಪರ್ ಎನ್ನುತ್ತಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಏನೇ ಆದರೂ ಗಾಸಿಪ್ ಮಾಡಿದರು ಸಹ ಅಂಜದೇ, ಕುಗ್ಗದೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಜೊತೆಗೆ ತಾವು ಹುಟ್ಟಿ ಬೆಳೆದ ಊರಿನ ಜನರ ಪ್ರೀತಿ ವಿಶ್ವಾಸವನ್ನು ಮರೆಯದೇ ಕನ್ನಡ ನಾಡಿನ ಕಂದನಾಗಿದ್ದಾರೆ. ಪ್ರಭುದೇವ ಅವರ ಕುಟುಂಬ ಕಲಾವಿದರ ಕುಟುಂಬವೇ ಆಗಿದ್ದು, ಅಪ್ಪ, ತಮ್ಮ ಎಲ್ಲರೂ ಸಹ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಮೂಗೂರು ಸುಂದರಂ ಫ್ಯಾಮಿಲಿ ಅಂದ್ರೆ ಎಲ್ಲರೂ ಸಾಧಕರೇ ಸಿಗಲು ಕಾಣುತ್ತಾರೆ.


Click it and Unblock the Notifications











