ಹೊಸ ಚಾಲೆಂಜ್ ಗೂ 'ಪ್ರಜಾ ಟಿವಿ' ಜೈ : ಈಗೇನ್ ಹೇಳ್ತೀರಾ ಯಶ್ ಸಾರ್?

By Harshitha

'ಒಂದು ದಿನ, ಎರಡು ದಿನ ಅಂತಲ್ಲ, ಸಮಸ್ಯೆ ಪರಿಹಾರ ಆಗುವವರೆಗೂ ಪ್ರೈಮ್ ಟೈಮ್ ನಲ್ಲಿ ರೈತರಿಗೆ ಸಂಬಂಧಪಟ್ಟ ವಿಚಾರಗಳ ಕುರಿತು ಗಂಭೀರ ಚರ್ಚೆ ಮಾಡಬೇಕು' ಅಂತ ಕನ್ನಡ ನ್ಯೂಸ್ ಚಾನೆಲ್ ಗಳಿಗೆ ರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲನ್ನು 'ಪ್ರಜಾ ಟಿವಿ' ಸ್ವೀಕರಿಸಿ, ಅಕ್ಟೋಬರ್ 20 ರಂದು ಪ್ರೈಮ್ ಟೈಮ್ ನಲ್ಲಿ (ಸಂಜೆ 7) 'ಅಣ್ತಮ್ಮ...ನಿಮಗೆ ಸ್ವಾಗತ' ಎಂಬ ಚರ್ಚಾ ಕಾರ್ಯಕ್ರಮ ಆಯೋಜಿಸಿತ್ತು.

ಬಹಿರಂಗ ಪತ್ರದ ಮೂಲಕ 'ಅಣ್ತಮ್ಮ...ನಿಮಗೆ ಸ್ವಾಗತ' ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರೂ, 'ಪ್ರಜಾ ಟಿವಿ' ಸ್ಟುಡಿಯೋಗೆ ಆಗಮಿಸದೆ, ದೂರವಾಣಿ ಕರೆ ಮುಖಾಂತರ ಚರ್ಚೆಯಲ್ಲಿ ಯಶ್ ಭಾಗವಹಿಸಿದರು.

ಇದೇ ಪ್ರೋಗ್ರಾಂನಲ್ಲಿ, ''ಎಲ್ಲಾ ಚಾನೆಲ್ ನಲ್ಲೂ ನನಗೆ ಚೇರ್ ಹಾಕಿ ಕರೆಯುತ್ತಿದ್ದಾರೆ. ಅದಕ್ಕೆ, ನಾನೇ ಎಲ್ಲರಿಗೂ ಚೇರ್ ಹಾಕಿ ಕರೆಯುತ್ತಿದ್ದೇನೆ. ಎಲ್ಲಾ ವಾಹಿನಿ ಮುಖ್ಯಸ್ಥರು ಬನ್ನಿ. ರೈತರು ಮತ್ತು ಜನರೂ ಕೂಡ ಬರಲಿ. ನಿರಂತರವಾದ ಚರ್ಚೆ ನಡೆಯಲಿ. ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ರೈತರ ಪರವಾಗಿ ಹೋರಾಟ ಮಾಡೋಣ'' ಅಂತ ಹಳೇ ಸವಾಲು ಪಕ್ಕಕ್ಕೆ ಇಟ್ಟು, ಕನ್ನಡ ವಾಹಿನಿ ಮುಖ್ಯಸ್ಥರಿಗೆ ಯಶ್ ಹೊಸ ಆಫರ್ ನೀಡಿದರು. [ಪ್ರಜಾ ಟಿವಿಯ 'ಖಾಲಿ ಕುರ್ಚಿ' ಪ್ರೋಗ್ರಾಂಗೆ ಯಶ್ ಕೊಟ್ಟ ಟ್ವಿಸ್ಟ್ ಏನು?]

prajaa-tv-is-ready-for-kannada-actor-yash-s-new-offer

ಈಗ ಈ ಆಫರ್ ಗೂ ಬಹಿರಂಗ ಪತ್ರದ 'ಪ್ರಜಾ ಟಿವಿ' ಜೈ ಎಂದಿದೆ. 'ಅಣ್ತಮ್ಮ' ಯಶ್ ರವರ ಹೊಸ 'ಕಾನ್ಸೆಪ್ಟ್'ಗೆ ಸಮ್ಮತಿ ಸೂಚಿಸಿ 'ಪ್ರಜಾ ಟಿವಿ' ಬರೆದಿರುವ ಪತ್ರ ಹೀಗಿದೆ....

ಶಹಬ್ಬಾಷ್...ಯಶ್ ಸಾರ್...ನೀವು ಅಂದ್ರೆ ಸುಮ್ನೆನಾ...
ಯಾಕಂದ್ರೆ ಈಗ ಏನಿದ್ರೂ ನಿಮ್ಮದೇ ಜಮಾನಾ...
ನಿಮ್ಮದೇ ದುನಿಯಾ...

ಸೂಪರ್ ಡೈಲಾಗ್ ಬಾಸ್...ನೋಡಿ ಅಣ್ತಮ್ಮ...
ಮಾತು ಅಂದ್ರೆ ಮಾತಾಗಿರಬೇಕು...ನುಡಿದಂತೆ ನಡೆಯಬೇಕು...ಆದ್ರೆ, ಪಲಾಯನವಾದ ಬೇಡ. ಮಾತಿಗೆ ಬದ್ಧರಾಗಿರಬೇಕು. ನೀವು ಕೊಟ್ಟಿರುವ ಸವಾಲನ್ನು ನಾವು ಪ್ರೀತಿಯಿಂದಲೇ ಸ್ವೀಕರಿಸಿದ್ದೇವೆ. ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಹೊಸ ಕಾನ್ಸೆಪ್ಟ್ ಕೊಟ್ಟಿದ್ದೀರಿ. ಅದನ್ನು ನಾವು ಪ್ರೈಮ್ ಟೈಮ್ ನಲ್ಲೇ ಪ್ರಸಾರ ಮಾಡಲು ಸಿದ್ಧರಿದ್ದೇವೆ. ಆದ್ರೆ, ನೀವು ಈಗ ಬೇರೆನೇ ಚಿತ್ರಕಥೆ ರಚನೆ ಮಾಡುತ್ತಿದ್ದೀರಿ.. [
ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!]

ಅಷ್ಟಕ್ಕೂ ಮಾಧ್ಯಮದವರು ನಿಮಗೆ ಏನು ಮಾಡಿದ್ರು. ಕಾವೇರಿ ಹೋರಾಟಕ್ಕೆ ಯಾಕೆ ಬರಲಿಲ್ಲ ಅಂತ ಕೇಳಿದ್ದೇ ತಪ್ಪಾ? ಹಾಗಂತ ಈ ಪ್ರಶ್ನೆಯನ್ನು ನಾವು ಕೇಳಿಲ್ಲ ಅಣ್ತಮ್ಮ. ಕೇಳಿದ್ದು ನಿಮ್ಮ ಪ್ರೀತಿಯ ಅಭಿಮಾನಿಗಳೇ..

ಆದ್ರೂ, ರೈತರ ಸಮಸ್ಯೆಗೆ ಸ್ಪಂದಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಯಾಕಂದ್ರೆ ಈಗ ನಿಮಗೆ ಬೋಧನೆ ಮಾಡುವ ವಯಸ್ಸು ಅಲ್ಲವೇ?

ಸರಿ, ವಾದ ವಿವಾದ ಏನು ಬೇಡ. ನಮ್ಮ ಆಹ್ವಾನವನ್ನು ಸ್ವೀಕರಿಸಿದ್ದೀರಿ ಅಲ್ವಾ...ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನೀವೇ ಕೊಟ್ಟಿರುವ ಕಾನ್ಸೆಪ್ಟ್ ಅನ್ನು ಕಾರ್ಯರೂಪಕ್ಕೆ ತರೋಣ.

ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡೋಣ. ಶೂಟಿಂಗ್ ಗೆ ಮುಹೂರ್ತ ಫಿಕ್ಸ್ ಮಾಡೋಣ. ನಮ್ಮೂರಿನ ಊರು ಕೇರಿಗಳಲ್ಲಿ ಲೊಕೇಷನ್ ಗಳನ್ನು ಹುಡುಕೋಣ.

ಕಥೆ, ಚಿತ್ರಕಥೆ-ಸಂಭಾಷಣೆ ಎಲ್ಲವನ್ನೂ ರೆಡಿ ಮಾಡೋಣ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯೋಣ. ಇಲ್ಲಿ ನಾವು ಪಾತ್ರಧಾರಿ. ನೀವು ಸೂತ್ರಧಾರಿ. ಅಷ್ಟೆ ಸಾರ್. [ಯಶ್ ಸವಾಲಿಗೆ 'ಪ್ರಜಾ ಟಿವಿ' ಚೀಫ್ ಎಡಿಟರ್ ಕೊಟ್ಟ ಜವಾಬು ಏನು?]

ನೋ ಪ್ರಾಬ್ಲಂ ಸಾರ್..ನೀವೇ ಹೀರೋ ಸಾರ್..ಆಮೇಲೆ ಏನು ಆಗುತ್ತೆ ನೋಡಿಯೇ ಬಿಡೋಣ. ನಿಮ್ಮ ವೇದಿಕೆ ಏರಲು ನಾವು ಎಷ್ಟು ದಿನ ಕಾಯಬೇಕು. ನೀವೇ ಹೇಳಿ ಸಾರ್...ಮತ್ತೆ ಸಿಟ್ಟು ಮಾಡ್ಕೋಬಾರದು ಅಣ್ತಮ್ಮ..ದೇವರಾಣೆ ಹೇಳ್ತೀವಿ.

'ರೈತರ ಹಿತಕ್ಕಾಗಿ ನಾವು ಸದಾ ಸಿದ್ಧ' ಎಂದಿರುವ 'ಪ್ರಜಾ ಟಿವಿ' ತಮ್ಮ ಮಾತಿಗೆ ಬದ್ಧವಾಗಿ ಯಶ್ ರವರ ಹೊಸ ಸವಾಲನ್ನೂ ಸ್ವೀಕರಿಸಿದೆ. ಈಗ ಯಶ್ ಸಾರ್ ಏನ್ ಹೇಳ್ತಾರೋ, ನೋಡೇ ಬಿಡೋಣ....

More from Filmibeat

English summary
Prajaa TV News Editors and Management has accepted Kannada Actor Yash's invitation to take part in Special Discussion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X