ಬೇಬಿ ಬಂಪ್ ಫೋಟೊಶೂಟ್‌ ವೇಳೆಯೂ ಧನಂಜಯ್-ಪ್ರಜ್ಞಾ ಫನ್ನಿ ವೀಡಿಯೋ

By Poorva

ವಿಭಿನ್ನ ರೀತಿಯಲ್ಲಿ ಜನರ ಮನಗೆದ್ದ ನಟ ಎಂದರೆ ಧನರಾಜ್ ಆಚಾರ್ಯ. ಮೊದ ಮೊದಲು ಇವರು ಸಣ್ಣ ಪುಟ್ಟ ವ್ಲಾಗ್‌ಗಳನ್ನೂ ಮಾಡಿ ಜನರನ್ನು ರಂಜಿಸುತ್ತಿದ್ದರು. ಇವರಿಗೆ ಇವರ ಮನೆಯವರು ಸಾಥ್ ನೀಡುತ್ತಿದ್ದರು. ಇವರ ಕಾಮಿಡಿ ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿರುತ್ತದೆ.

ಧನಂಜಯ ಆಚಾರ್ಯ ಹಾಗೂ ಪ್ರಜ್ಞಾ ದಂಪತಿ ಕೆಲ ದಿನಗಳ ಹಿಂದೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸುದ್ದಿ ತಿಳಿದ ಅಭಿಮಾನಿಗಳು ಕಾಮೆಂಟ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ. ಪ್ರಜ್ಞಾ ಆಚಾರ್ಯ ಗರ್ಭಿಣಿ ಆಗಿದ್ದು ದಂಪತಿಗಳಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಎಲ್ಲರೂ ಇದಕ್ಕಿಂತ ಮುಂಚೆ ಎನು ಗುಡ್ ನ್ಯೂಸ್ ಇಲ್ವಾ ಎಂದು ಅನೇಕರು ಕೇಳುತ್ತಿದ್ದರು. ಅವರಿಗಾಗಿ ಒಂದು ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Prajna Acharya flaunts baby bump in new photoshoot with husband dhananjay Acharya

ವೀಡಿಯೋವನ್ನು ನೋಡಿದ ಧನಂಜಯ ಆಚಾರ್ಯ ಅವರ ಅಭಿಮಾನಿಗಳು ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಸೀಸನ್ -2 ಮೂಲಕ ಫೇಮಸ್ ಆಗಿರುವ ಧನರಾಜ್ ಆಚಾರ್ಯ ಪ್ರೇಕ್ಷಕರನ್ನು ನಕ್ಕು ನಗಿಸುವ ಪ್ರಯತ್ನವನ್ನು ಮಾಡುತ್ತಿದ್ದರು.

ತಮ್ಮ ವಿಭಿನ್ನ ವೀಡಿಯೋಗಳ ಮೂಲಕ ಧನಂಜಯ್ ಕರಾವಳಿಯಲ್ಲಿ ಮನೆ ಮಾತಾಗಿದ್ದಾರೆ. ಹಾಗೆಯೇ ಇತ್ತೀಚೆಗೆ 'ಅಬ್ಬಬ್ಬಾ' ಎನ್ನುವ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನೂ ಈ ಇಬ್ಬರು ಪೋಷಕರಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ವೀಡಿಯೋ ಫುಲ್ ವೈರಲ್

ಲಾಕ್ ಡೌನ್ ಸಂದರ್ಭದಲ್ಲಿ ಹಾಸ್ಯ ನಟ ಧನರಾಜ್ ಆಚಾರ್ಯ ಕಾಮಿಡಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು. ಬಳಿಕ ಅದನ್ನು ಹಾಗೆ ಮುಂದುವರೆಸಿದ್ದರು. ಇತ್ತೀಚೆಗೆ ಪ್ರಜ್ಞಾ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಧನಂಜಯ ಆಚಾರ್ ಬಳಿ ಮೊದಲು ಪ್ರಜ್ಞಾ ತಾಯಿ ಆಗುತ್ತಿರುವ ವಿಚಾರವನ್ನು ಹೇಳಿಕೊಂಡಾಗ ಧನಂಜಯ್‌ಗೆ ಅಷ್ಟೇನೂ ಎಕ್ಸೈಟ್ ಆಗಲಿಲ್ಲ. ಆದರೆ ಕುಟುಂಬದವರಿಗೆ ಮಾತ್ರ ಬಹಳ ಖುಷಿ ಆಗಿತ್ತು. ಪ್ರಜ್ಞಾ ಎಲ್ಲರ ಬಾಯಿಗೆ ಸಕ್ಕರೆ ಹಾಕಿ ಸಿಹಿ ಮಾಡಿದ್ದರು.

Prajna Acharya flaunts baby bump in new photoshoot with husband dhananjay Acharya

ಸಿಹಿ ಹಂಚಿ ಖುಷಿ ಹಂಚಿಕೊಂಡ ಪ್ರಜ್ಞಾ

'ಗಿಚ್ಚಿ ಗಿಲಿ ಗಿಲಿ'ಯಲ್ಲಿ ಪ್ರಜ್ಞಾ ಆಚಾರ್ಯ ಕೂಡ ಭಾಗವಹಿಸಿದ್ದರು . ಹಾಗೆಯೇ ಧನಂಜಯ್‌ಗೆ ಸಾಥ್ ನೀಡುವ ಸಾರಥಿಯ ಹಾಗೆ ಪ್ರಜ್ಞಾ ಗಂಡನಿಗೆ ಸಪೋರ್ಟ್ ಮಾಡುತ್ತಾರೆ. ಧನಂಜಯ್ ಆಚಾರ್ಯ ಅವರು ಚಿಕ್ಕ ವಯಸ್ಸಿನಿಂದಲೂ ಅಭಿನಯದಲ್ಲಿ ಹೆಚ್ಚಾಗಿ ತನ್ನನ್ನು ತಾನು ತೊಡಗಿಸಿಕೊಂಡು ಇದ್ದರು. ಬಂಟ್ವಾಳದ ಅನಂತಾಡಿಯವರು ಧನಂಜಯ್ ಆಚಾರ್ಯ ರಾಘವೇಂದ್ರ ಆಚಾರ್ ಮತ್ತು ಸಂಧ್ಯಾ .ಎಸ್ ದಂಪತಿಯ ಪುತ್ರ.

ಮತ್ತಷ್ಟು ಫನ್ನಿ ವೀಡಿಯೋ

ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್‌ಗಳು ಧಾರಾವಾಹಿ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನು ಅಲ್ಲ. ಇನ್ನು 'ಅಮೃತ ವರ್ಷಿಣಿ' ಧಾರಾವಾಹಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸೇರಿಕೊಂಡು ಧನಂಜಯ್ ಟೆಕ್ನಿಕಲ್ ಹಾಗೂ ಕ್ಯಾಮೆರಾ ವಿಷಯ ಸಂಬಂಧಪಟ್ಟ ಕೆಲವು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಬಣ್ಣದಲೋಕದಲ್ಲಿ ಮತ್ತಷ್ಟು ಸಾಧಿಸುವ ಹಂಬಲ ಹೊಂದಿದ್ದಾರೆ. ಪ್ರಜ್ಞಾ ಗರ್ಭಿಣಿ ಆದ ಬಳಿಕ ಕೂಡ ಪತಿ ಜೊತೆ ಸೇರಿ ಫನ್ನಿ ವೀಡಿಯೋಗಳನ್ನು ಮಾಡುತ್ತಿದ್ದಾರೆ.

More from Filmibeat

English summary
Prajna Acharya Baby Bump In Maternity Shoot With Husband dhananjay Acharya;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X