For Quick Alerts
  ALLOW NOTIFICATIONS  
  For Daily Alerts

  ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಜ್ವಲ್- ರಾಗಿಣಿ ಚಂದ್ರನ್ ಜೋಡಿ

  By Naveen
  |

  ನಟ ಪ್ರಜ್ವಲ್ ದೇವರಾಜ್ ಮತ್ತು ಅವರ ಮುದ್ದಿನ ಮಡದಿ ರಾಗಿಣಿ ಚಂದ್ರನ್ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ. ಮದುವೆಯಾಗಿ ಎರಡು ವರ್ಷ ಆಗಿದ್ದರೂ, ಈ ಜೋಡಿ ಯಾವುದೇ ಸಿನಿಮಾ ಅಥವಾ ಕಿರುತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಸಂದರ್ಶನ ಕೂಡ ನೀಡಿಲ್ಲ.

  ಪ್ರಜ್ವಲ್ ಸಿನಿಮಾರಂಗದಲ್ಲಿ, ರಾಗಿಣಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಈ ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಜೊತೆಯಾಗಲಿರುವುದು ಅಭಿಮಾನಿಗಳಿಗೆ ಸ್ಪೆಷಲ್ ಎನಿಸುತ್ತಿದೆ. ಅಲ್ಲದೆ ಅನೇಕರಿಗೆ ತಿಳಿಯದ ಇಬ್ಬರ ಲವ್ ಸ್ಟೋರಿ ಸಹ ಈ ಕಾರ್ಯಕ್ರಮದಲ್ಲಿ ತೆರೆದುಕೊಳ್ಳಲಿದೆ.

  ಅಂದಹಾಗೆ, ಕಿರುತೆರೆಯಲ್ಲಿ ಈ ರಿಯಲ್ ಜೋಡಿ ಒಂದಾಗುತ್ತಿರುವ ಆ ಕಾರ್ಯಕ್ರಮ ಯಾವುದು? ಸದ್ಯ ಈ ಜೋಡಿ ಏನ್ ಮಾಡುತ್ತಿದ್ದಾರೆ? ಎಂಬುದಕ್ಕೆ ಉತ್ತರ ಇಲ್ಲಿದೆ ಓದಿ....

  ಸೂಪರ್ ಟಾಕ್ ಟೈಮ್

  ಸೂಪರ್ ಟಾಕ್ ಟೈಮ್

  ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಸೂಪರ್ ಟಾಕ್ ಟೈಮ್' ಎಂಬ ಹೊಸ ಶೋ ಶುರುವಾಗಲಿದೆ. ಈ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ.

  ಮೊದಲ ಬಾರಿಗೆ

  ಮೊದಲ ಬಾರಿಗೆ

  'ಸೂಪರ್ ಟಾಕ್ ಟೈಮ್' ಮೂಲಕ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಇದೇ ಕಾರಣದಿಂದ ಅಭಿಮಾನಿಗಳಿಗೂ ಸಹ ಕಾರ್ಯಕ್ರಮದ ಬಗ್ಗೆ ಕುತೂಹಲವಿದೆ.

  ಫಾರಿನ್ ಪ್ರವಾಸ

  ಫಾರಿನ್ ಪ್ರವಾಸ

  'ಚೌಕ' ಸಿನಿಮಾ ಗೆದ್ದ ಖುಷಿಯಲ್ಲಿದ್ದ ಪ್ರಜ್ವಲ್ - ರಾಗಿಣಿ ಜೋಡಿ ಇತ್ತೀಚಿಗಷ್ಟೆ ವಿದೇಶ ಪ್ರವಾಸಕ್ಕೆ ಹೋಗಿದ್ದರು.

  ಕಿರುಚಿತ್ರದಲ್ಲಿ ರಾಗಿಣಿ

  ಕಿರುಚಿತ್ರದಲ್ಲಿ ರಾಗಿಣಿ

  'ರಿಷಭಾಪ್ರಿಯ' ಎಂಬ ಕಿರುಚಿತ್ರದಲ್ಲಿ ರಾಗಿಣಿ ಚಂದ್ರನ್ ಈಗ ನಟಿಸಲಿದ್ದಾರೆ. ಈ ಕಿರುಚಿತ್ರವನ್ನು ಆರ್.ಜೆ ಮಯೂರ್ ರಾಘವೇಂದ್ರ ನಿರ್ದೇಶನ ಮಾಡಲಿದ್ದಾರೆ.

  ಲವ್ ಸ್ಟೋರಿ

  ಲವ್ ಸ್ಟೋರಿ

  ಡ್ಯಾನ್ಸ್ ಕ್ಲಾಸ್ ನಲ್ಲಿ ಪರಿಚಯವಾಗಿ ನಂತರ ಪ್ರೇಮಿಗಳಾದ ಪ್ರಜ್ವಲ್ ಮತ್ತು ರಾಗಿಣಿ ಲವ್ ಸ್ಟೋರಿ 'ಸೂಪರ್ ಟಾಕ್ ಟೈಮ್'ನಲ್ಲಿ ಬಹಿರಂಗವಾಗಲಿದೆ.

  ಸುಖಿ ಸಂಸಾರ

  ಸುಖಿ ಸಂಸಾರ

  ಈ ಡೈನಮಿಕ್ ಜೋಡಿ ಮದುವೆಯಾಗಿ ಎರಡು ವರ್ಷ ಕಳೆದಿದೆ. ಪ್ರೀತಿಸಿದವರನ್ನೇ ಕೈ ಹಿಡಿದಿರುವ ಇವರದ್ದು ಹ್ಯಾಪಿ ಫ್ಯಾಮಿಲಿ.

  ರಾಗಿಣಿ ಚಂದ್ರನ್ ಮಾತು

  ರಾಗಿಣಿ ಚಂದ್ರನ್ ಮಾತು

  ಪ್ರಜ್ವಲ್ ದೇವರಾಜ್ ಅವರನ್ನು ಮದುವೆಯಾದ ರಾಗಿಣಿ ಚಂದ್ರನ್ ಯಾವ ಟಿವಿ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿರಲಿಲ್ಲ. ಈಗ ಅವರ ಮಾತು ಹೇಳುವ ಅವಕಾಶ ಎಲ್ಲರಿಗೂ ಸಿಗಲಿದೆ.

  ಜೂನ್ 1 ದಿಂದ ಶುರು

  ಜೂನ್ 1 ದಿಂದ ಶುರು

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಜೂನ್ 1 ರಿಂದ ಗುರುವಾರ ಮತ್ತು ಶುಕ್ರವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

  English summary
  Kannada Actor Prajwal Devaraj and His Wife Ragini Chandran will take part in Colors Super Channel's 'Super Talk Time' Show

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X