ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದಾರೆ ನಟ ಪ್ರಜ್ವಲ್ ದೇವರಾಜ್!

ಸಿನಿಮಾಗಳಲ್ಲಿ ಮಿಂಚುತ್ತಿರುವ ಹೊತ್ತಿನಲ್ಲಿಯೇ ನಟ ಪ್ರಜ್ವಲ್ ದೇವರಾಜ್ ಕಿರುತೆರೆಗೆ ಬರುತ್ತಿದ್ದಾರೆ.

ಡ್ಯಾನ್ಸ್ ಶೋ ಒಂದರ ಜಡ್ಜ್ ಆಗಿ ಪ್ರಜ್ವಲ್ ದೇವರಾಜ್ ಕಿರುತೆರೆಗೆ ಬರುತ್ತಿದ್ದು, ಶೋನ ಪ್ರೋಮೊ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಈಗಾಗಲೇ ಕಿರುತೆರೆಯಲ್ಲಿ ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳು ಚಾಲ್ತಿಯಲ್ಲಿವೆ. ಈ ನಡುವೆ ಸ್ಟಾರ್ ಸುವರ್ಣ ಹೊಸದೊಂದು ಡ್ಯಾನ್ಸ್ ಶೋ ಆಯೋಜಿಸುತ್ತಿದ್ದು, ಇದಕ್ಕೆ ಪ್ರಜ್ವಲ್ ದೇವರಾಜ್ ಅವರನ್ನು ಜಡ್ಜ್ ಆಗಿ ಆಹ್ವಾನಿಸಿದೆ.

ಸ್ವತಃ ಒಳ್ಳೆಯ ಡ್ಯಾನ್ಸರ್ ಆಗಿರುವ ಪ್ರಜ್ವಲ್ ದೇವರಾಜ್ ಟಿವಿಯವರು ನೀಡಿರುವ ಆಹ್ವಾನವನ್ನು ಹೆಚ್ಚು ಯೋಚಿಸದೆ ಒಪ್ಪಿಕೊಂಡಿದ್ದಾರೆ. ಇದೀಗ ಪ್ರೊಮೊ ಶೂಟ್‌ಗಳು ಜಾರಿಯಲ್ಲಿದ್ದು ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಪ್ರಸಾರ ಆರಂಭವಾಗಲಿದೆ.

Prajwal Devaraj Judging Dancing Reality Show On Tv

ಪ್ರಜ್ವಲ್ ದೇವರಾಜ್ ಮಾತ್ರವೇ ಅಲ್ಲದೆ ಅವರ ಪತ್ನಿ ರಾಗಿಣಿ ಪ್ರಜ್ವಲ್ ಸಹ ಬಹಳ ಒಳ್ಳೆಯ ಡ್ಯಾನ್ಸರ್. ಬಿಡುವಿನ ವೇಳೆಯಲ್ಲಿ ಈ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ರಾಗಿಣಿ ಪ್ರಜ್ವಲ್ ಡ್ಯಾನ್ಸ್ ತರಗತಿ ಸಹ ನಡೆಸುತ್ತಾರೆ.

ಪ್ರಜ್ವಲ್ ದೇವರಾಜ್ ಜಡ್ಜ್ ಆಗಲಿರುವ ಡ್ಯಾನ್ಸ್ ಶೋ ಅನ್ನು ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಿರೂಪಣೆ ಮಾಡಲಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆಗೆ ಇನ್ನೂ ಕೆಲವರು ಜಡ್ಜ್‌ಗಳಿರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಹೆಸರುಗಳು ಇನ್ನೂ ಬಹಿರಂಗವಾಗಿಲ್ಲ.

ಪ್ರಜ್ವಲ್ ದೇವರಾಜ್ ನಟನೆಯ 'ಅರ್ಜುನ್ ಗೌಡ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದರ ಜೊತೆಗೆ 'ಮಾಫಿಯಾ', 'ವೀರಂ', 'ಠಾಕ್ರೆ', 'ಅಬ್ಬರ' ಇನ್ನೂ ಕೆಲವು ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ನಟಿಸುತ್ತಿದ್ದಾರೆ.

More from Filmibeat

English summary
Actor Prajwal Devaraj judging dancing reality show on Tv soon. He said prom shooting is in progress, program will air soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X