ಬಿಗ್ ಬಾಸ್‌ನಲ್ಲಿ ಸೊಳ್ಳೆ ಕಾಟ ; ಪ್ರಬಲ ಸ್ಫರ್ಧಿಗೆ ಡೆಂಗ್ಯೂ ಜ್ವರ- ಆಸ್ಪತ್ರೆಗೆ ದಾಖಲು

''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗಕ್ಕೆ ''ಬಿಗ್ ಬಾಸ್‌'' ಕಾರ್ಯಕ್ರಮ ಅಚ್ಚು ಮೆಚ್ಚು. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಹಲವು ವರ್ಷಗಳಿಂದ ಎಲ್ಲ ಭಾಷೆಗಳಲ್ಲಿ ''ಬಿಗ್ ಬಾಸ್''ನ ಮೆರವಣಿಗೆ...

ಯಾವ ಅಡೆ ತಡೆಯಿಲ್ಲದೇ ನಡೆಯುತ್ತಿದೆ. ಕಿರುತೆರೆಯಲ್ಲಿ ಆಗಾಗ ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಆದರೆ ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಈ ಬಾರಿ ಅದ್ಯಾವ ಮುಹೂರ್ತದಲ್ಲಿ ಶುರು ಮಾಡಲಾಗಿದೆ ಎನ್ನುವುದು ಗೊತ್ತಿಲ್ಲವಾದರು ಈ ಬಾರಿ ಈ ಕಾರ್ಯಕ್ರಮಕ್ಕೆ ಬಂದ ಸ್ಫರ್ಧಿಗಳಲ್ಲಿ ಕಾರ್ಯಕ್ರಮ ಶುರುವಾದ ದಿನದಿಂದ ಒಬ್ಬರಲ್ಲೊಬ್ಬರು ಮನೆಯಲ್ಲಿ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಮನೆಯಲ್ಲಿನ ಕಿರಿಕಿರಿ .. ಉದ್ವಿಗ್ನ ವಾತಾವರಣ.. ರಂಪ ರಾಮಾಯಣ.. ಸಹಿಸಲಾಗದೇ ಕುಸಿದು ಬೀಳುತ್ತಿದ್ದಾರೆ. ಮನೆಯಿಂದ ಪ್ರೇಕ್ಷಕರಾಗಲಿ ಅಥವಾ ''ಬಿಗ್ ಬಾಸ್'' ಆಗಲಿ ಹೊರಗಡೆ ಕಳುಹಿಸದಿದ್ದರೂ ಕೂಡ ತಾವೇ ಸ್ವಯಂ ಪ್ರೇರಣೆಯಿಂದ ಮನೆ ಹೊರಗಡೆ ಬರುತ್ತಿದ್ದಾರೆ.

pranit-mores-shock-eviction-mid-reign-hospitalized-is-the-bigg-boss-19-door-slammed-shut

ಹೌದು, ನಿಮಗೆ ಗೊತ್ತಿರಲಿ.. ಈಗಾಗಲೇ ವಿಜೆ ನಂದಿನಿ ಮತ್ತು ರಮ್ಯಾ ಜೂ ''ಬಿಗ್ ಬಾಸ್'' ಮನೆಯಿಂದ ಹೊರ ಬಂದಿದ್ದಾರೆ. ಒಬ್ಬರು ಮಾನಸಿಕ ನೆಮ್ಮದಿ ಮುಖ್ಯ ಎಂದು ಕಾರಣ ಹೇಳಿ ಹೊರ ಬಂದರೆ ಮತ್ತೊಬ್ಬರು ಪ್ರಜ್ಞೆ ತಪ್ಪಿ ಬಿದ್ದು ಹೊರ ಬಂದಿದ್ದಾರೆ. ಈ ಇಬ್ಬರು ತಮಿಳಿನ ''ಬಿಗ್ ಬಾಸ್'' ಸ್ಫರ್ಧಿಗಳಾಗಿದ್ದರು. ಇನ್ನು ತೆಲುಗಿನಲ್ಲಿ ಆಯೇಶಾ ಜೀನತ್ ಮೊನ್ನೆ ಮೊನ್ನೆ ಥೈಪಾಯ್ಡ್ ಗೆ ತುತ್ತಾಗಿದ್ದರು. ಇವರನ್ನು ಕೂಡ ಮನೆಯ ಹೊರಗಡೆ ಕಳುಹಿಸಲಾಗಿದೆ.

ಹೀಗಿರುವಾಗ ಇದೀಗ ಹಿಂದಿ ''ಬಿಗ್ ಬಾಸ್'' ಮನೆಯಿಂದ ಪ್ರಣೀತ್ ಮೋರ್ ಹೊರ ಬಂದಿದ್ದಾರೆ. ಹೌದು, ಪ್ರಣೀತ್ ಮೋರ್.. ಸ್ಟ್ಯಾಂಡಪ್ ಕಾಮೆಡಿಯನ್. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಈ ಬಾರಿಯ ಹಿಂದಿ ''ಬಿಗ್ ಬಾಸ್‌''ನ ಸ್ಫರ್ಧಿ. ಬಿಗ್ ಬಾಸ್ ಗೆಲ್ಲುವ ಎಲ್ಲ ಅರ್ಹತೆ ಹೊಂದಿರುವ ವ್ಯಕ್ತಿ ಎಂದೇ ಎಲ್ಲರು ಇವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

pranit-mores-shock-eviction-mid-reign-hospitalized-is-the-bigg-boss-19-door-slammed-shut

ಆದರೆ, ದುರ್ದೈವ.. ''ಬಿಗ್ ಬಾಸ್‌'' ಮನೆಯಲ್ಲಿರುವ ಪ್ರಣೀತ್ ಅವರಿಗೆ ಡೆಂಗ್ಯೂ ಸೋಂಕು ತಗುಲಿದೆ. ಈ ಹಿನ್ನೆಲೆ ಪ್ರಣೀತ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಲಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು free press journal ವರದಿ ಮಾಡಿದೆ. ಇದಕ್ಕೆ ಪೂರಕವಾಗ ಸೋಶಿಯಲ್ ಮೀಡಿಯಾದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಪ್ರಣೀತ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ವೈದ್ಯರು ಪ್ರಣೀತ್ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆ ಸದ್ಯ ಇವರ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ. ಪ್ರಣೀತ್ ಮತ್ತೆ ''ಬಿಗ್ ಬಾಸ್‌'' ಮನೆಗೆ ಮರಳುತ್ತಾರಾ..? ಇಲ್ವಾ..? ಎಂದು ಚರ್ಚೆಯನ್ನು ಹಲವರು ಮಾಡುತ್ತಿದ್ದಾರೆ. ಅಂದ್ಹಾಗೇ ಮನೆಯಿಂದ ಡೆಂಗ್ಯೂದಿಂದ ಹೊರ ಬಂದ ಪ್ರಣೀತ್ ಅವರಿಗೆ ಕ್ಯಾಪ್ಟನ್ ಪಟ್ಟವನ್ನು ನೀಡಲಾಗಿತ್ತು. ಕ್ಯಾಪ್ಟನ್ ಆದ ಕೆಲ ದಿನಗಳಲ್ಲಿ ಪ್ರಣೀತ್ ಡೆಂಗ್ಯೂ ಸೋಂಕಿನಿಂದ ಹೊರ ಬಂದ ಕಾರಣ ಹಲವರು ಇದೆಲ್ಲವೂ ಪೂರ್ವ ನಿರ್ಧಾರಿತ ಎನ್ನುವ ಅಭಿಪ್ರಾಯ ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದಂತೆ ಅಭಿಷೇಕ್ ಬಜಾಜ್.. ಅಶ್ನೂರ್ ಕೌರ್.. ಮತ್ತು ಮೃದುಲ್ ತಿವಾರಿ ಅವರನ್ನು ಹೊರತುಪಡಿಸಿದರೆ ಈ ವಾರ ಮನೆಯಲ್ಲಿರುವ ಉಳಿದ ಎಲ್ಲ ಸದಸ್ಯರು ಮನೆಯಿಂದ ಹೊರಗಡೆ ಬರುವ ಭಯದಲ್ಲಿದ್ದಾರೆ. ಆ ಪೈಕಿ ಈ ವಾರ ಯಾರು ಹೊರ ಬರಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಂದು ( ನವೆಂಬರ್ 1) ಸಿಗಲಿದೆ.

More from Filmibeat

English summary
Confirmed: Bigg Boss 19 contestant Pranit More has been hospitalized following a sudden exit due to a health emergency. Get the full details on his condition and the latest updates on his potential return to the show.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X