ಅದ್ಧೂರಿಯಾಗಿ ಪ್ರಣೀತಾ ಮಗನ ನಾಮಕರಣ: ಮುದ್ದು ಕಂದನ ಹೆಸರಿನ ಗುಟ್ಟೇನು?
ಕೆಲ ವರ್ಷಗಳಿಂದ ಸಂಸಾರದಲ್ಲಿ ಬ್ಯುಸಿಯಾಗಿರುವ ನಟಿ ಪ್ರಣೀತಾ ಸುಭಾಷ್ ಅವರು ನಿನ್ನೆಯಷ್ಟೇ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಬಹುಭಾಷಾ ನಟಿ ಪ್ರಣೀತಾ ಅವರು ಸದ್ದಿಲ್ಲದೇ ಮದುವೆಯಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ನಿತಿನ್ ರಾಜು ಎಂಬುವರ ಜೊತೆಗೆ ನಟಿ ಪ್ರಣೀತಾ ಸುಭಾಷ್ ಸಪ್ತಪದಿ ತುಳಿದಿದ್ದರು. ನಿತಿನ್ ರಾಜು ಹಾಗೂ ಪ್ರಣೀತಾ ಸುಭಾಷ್ ಮದುವೆಗೆ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಸಾಕ್ಷಿಯಾಗಿದ್ದರು.
ಪ್ರಣೀತಾ ಸುಭಾಷ್ ಮದುವೆಯಾಗಿರುವ ಫೋಟೋವನ್ನು ಸ್ನೇಹಿತರೊಬ್ಬರು ಸೋಶಿಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಪ್ರಣೀತಾ ಅವರ ಮದುವೆ ಗುಟ್ಟಾಗಿ ಉಳಿಯಲಿಲ್ಲ. ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ಪ್ರಣೀತಾ ಅವರು ಫೋಟೋಶೂಟ್ ಮಾಡಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಮದುವೆಯ ಬಳಿಕ ನಟಿ ಪ್ರಣೀತಾ ಅವರು ನಟನೆಯಿಂದ ಕಂಪ್ಲೀಟ್ ಆಗಿ ದೂರವೇ ಉಳಿದಿದ್ದಾರೆ.

ಬಣ್ಣದ ಲೋಕದಿಂದ ದೂರ
ಆಗೊಮ್ಮೆ ಈಗೊಮ್ಮೆ ಎಂಬಂತೆ ಯಾವುದಾದರೂ ಜಾಹೀರಾತುಗಳಲ್ಲಿ ಮಾತ್ರವೇ ನಟಿ ಪ್ರಣೀತಾ ಅವರು ಕಾಣಿಸಿಕೊಂಡಿದ್ದಾರೆ. ಪ್ರಣೀತಾ ಅವರಿಗೆ ಮೊದಲು ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ ಆರ್ನ ಎಂಬ ಮುದ್ದಾದ ಹೆಸರನ್ನಿಟ್ಟಿದ್ದರು. ಈ ಖುಷಿ ವಿಚಾರವನ್ನು ಮರೆಯುವ ಮುನ್ನವೇ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದರು. ಅದುವೇ ಮತ್ತೆ ಎರಡನೇ ಬಾರಿಗೆ ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದರು. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಈ ಸುದ್ದಿಯನ್ನು ಹೇಳಿದ್ದರು. ಕೆಲ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ ಅವರು ಬಾಣಂತನ ಮಾಡಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು.
ಅದ್ಧೂರಿಯಾಗಿ ಮಗನ ನಾಮಕರಣ
ಮುದ್ದು ಮಗನಿಗೆ ಅದ್ಧೂರಿಯಾಗಿ ನಾಮಕರಣವನ್ನು ಮಾಡಿದ್ದಾರೆ. ಪುಟ್ಟ ಕಂದಮ್ಮನಿಗೆ 'ಕೃಷ್ಣ ನಿತಿನ್' ಎಂದು ನಾಮಕರಣ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಮೊದಲು ಚೇ ಪದದಿಂದ ಹೆಸರನ್ನಿಡಬೇಕು ಎಂದುಕೊಂಡಿದ್ದರಂತೆ. ಆದರೆ, ಪ್ರಣೀತಾ ಅವರ ತಂದೆಯವರ ತಂದೆ ಹೆಸರು ಬಾಲಕೃಷ್ಣ, ನಮ್ಮ ಆಸ್ಪತ್ರೆ ಹೆಸರು ಶ್ರೀಕೃಷ್ಣ, ಪತಿ ನಿತಿನ್ ಅವರ ತಂದೆಯ ಹೆಸರು ಅಂದರೆ ಪ್ರಣೀತಾ ಅವರ ಮಾವನ ಹೆಸರು ವಾಸುದೇವ. ಎಲ್ಲರ ಹೆಸರಿನ ಮೂಲವೂ ಕೃಷ್ಣ ಆಗಿರುವುದರಿಂದ ತಮ್ಮ ಮಗನಿಗೂ ಜೈ ಕೃಷ್ಣ ಎಂದೇ ಹೆಸರನ್ನಿಟ್ಟಿದ್ದಾರೆ.
ಸೆಲಬ್ರಿಟಿಗಳಿಗೆ ಆಹ್ವಾನ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ನಟಿ ಪ್ರಣೀತಾ ಅವರು ಸೆಲಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ಮಗನ ನಾಮಕರಣಕ್ಕೆ ನಟಿ ಪ್ರಣೀತಾ ಅವರು ಮಹಾರಾಣಿಯಂತೆ ಸಿಂಗಾರಗೊಂಡಿದ್ದರು. ನಾಮಕರಣ ಸಮಾರಂಭಕ್ಕೆ ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಎಲ್ಲರೂ ಆಗಮಿಸಿದ್ದರು. ಕನ್ನಡ ಚಿತ್ರರಂಗದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ನಟಿ ಶೃತಿ, ಮಾಳವಿಕಾ, ಜಯಮಾಲಾ, ನಟಿ ಕಾವ್ಯಾ ಶಾ, ನಟಿ ಅಮೂಲ್ಯ ಗೌಡ, ನಟಿ ಸಂಯುಕ್ತಾ ಹೊರನಾಡು, ನಟ ಡಾಲಿ ಧನಂಜಯ್, ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಹಲವರು ಆಗಮಿಸಿದ್ದರು.
ಪ್ರಣೀತಾ ಸಿನಿಮಾಗಳು
ಇನ್ನು ನಟಿ ಪ್ರಣೀತಾ ಅವರು ಕನ್ನಡ, ತೆಲುಗು, ತಮಿಳು, ಮಳಯಾಳಂ, ಹಿಂದಿ ಸೇರಿದಂತೆ 29 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಣೀತಾ ಅವರ ನಟನೆಯ' ರಾಮನ ಅವತಾರ' ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಿತ್ತು. ಇನ್ನು ಕನ್ನಡದಲ್ಲಿ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. 9 ತೆಲುಗು ಚಿತ್ರಗಳಿಗೆ ಬಣ್ಣ ಹಚ್ಚಿದ್ದು, 5 ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು 2 ಹಿಂದಿ ಹಾಗೂ ಒಂದು ಮಳಯಾಳಂ ಸಿನಿಮಾಗಳಲ್ಲಿ ನಟಿ ಪ್ರಣೀತಾ ಅವರು ನಟಿಸಿದ್ದಾರೆ.


Click it and Unblock the Notifications











