ಪರಭಾಷೆಯ ಕಿರುತೆರೆಗೆ ಹಾರಿದ ಕನ್ನಡದ ನಟ ಪ್ರಶಾಂತ್ ಭಾರಧ್ವಾಜ್; ಯಾವ ಧಾರಾವಾಹಿ?

By ಅನಿತಾ ಬನಾರಿ

ಪ್ರಶಾಂತ್ ಭಾರಧ್ವಾಜ್, ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಲನ' ಧಾರಾವಾಹಿಯಲ್ಲಿ ನಾಯಕ ಸಮರ್ಥ್ ಪಾತ್ರದಲ್ಲಿ ಅಭಿನಯಿಸಿರುವ ಪ್ರಶಾಂತ್ ಭಾರಧ್ವಾಜ್ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ರಾಧ'ದಲ್ಲಿ ನಾಯಕನಾಗಿ ಪ್ರಶಾಂತ್ ನಟಿಸಲಿದ್ದಾರೆ.

ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದರು ಪ್ರಶಾಂತ್. 'ಮಿಲನ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಮೋಡಿ ಮಾಡಿದ ಹುಡುಗ. ಮಿಲನ ಧಾರಾವಾಹಿಗೆ ಆಯ್ಕೆಯಾಗುವ ಮೊದಲು ಒಂದೆರಡು ಧಾರಾವಾಹಿಗಳ ಆಡಿಶನ್‌ನಲ್ಲಿ ಭಾಗವಹಿಸಿದ್ದರು ಪ್ರಶಾಂತ್.

Prashanth Bhardwaj jumped to telugu TV do you know which serial

ನಂತರ 'ಆತ್ಮಬಂಧನ' ಎನ್ನುವ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿರುವ ಪ್ರಶಾಂತ್ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ಮುಂದೆ ಆ ಧಾರಾವಾಹಿಯು ಇದ್ದಕ್ಕಿದ್ದಂತೆ ತನ್ನ ಪ್ರಸಾರ ನಿಲ್ಲಿಸಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಜಮಾನಿ' ಧಾರಾವಾಹಿಯಲ್ಲಿ ನಾಯಕನಾಗಿ ಕಮಾಲ್ ಮಾಡಿದ್ದ ಪ್ರಶಾಂತ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿಯೂ ಅತಿಥಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಅಂದ ಹಾಗೇ ಪ್ರಶಾಂತ್ ಅವರಿಗೆ ಅಭಿನಯಿಸಲು ಇಂತಹುದ್ದೇ ಪಾತ್ರ ಆಗಬೇಕು ಎಂದೇನಿಲ್ಲ. ನಟನೆಗೆ ಅವಕಾಶ ಇರುವ ಪಾತ್ರಗಳು ಸಿಗಬೇಕು ಎಂಬುದು ಅವರ ಅಂಬೋಣ. ಚಿಕ್ಕ ಪಾಗ್ರ ಸಿಗಲಿ, ದೊಡ್ಡ ಪಾತ್ರವಾಗಿರಲಿ ಅದಕ್ಕೆ ಜೀವ ತುಂಬುವ ಸಾಮರ್ಥ್ಯ ಕಲಾವಿದನಿಗೆ ಇರುತ್ತದೆ. ಇಂತದ್ದೇ ಪಾತ್ರ ಬೇಕು ಎಂದು ಕಾದು ಕುಳಿತುಕೊಳ್ಳುವ ಬದಲು ಸಿಕ್ಕಂತಹ ಪಾತ್ರವನ್ನು ಒಪ್ಪಿಕೊಳ್ಳುವುದು ಜಾಣರ ಲಕ್ಷಣ ಎಂಬುದು ಪ್ರಶಾಂತ್ ಅವರ ಅಭಿಪ್ರಾಯ‌.

Prashanth Bhardwaj jumped to telugu TV do you know which serial

ಅಂದ ಹಾಗೇ ಪ್ರಶಾಂತ್ ಅವರು ಇಂದು ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ ಎಂದರೆ ಅದಕ್ಕೆ ಮಿಲನ ಧಾರಾವಾಹಿಯೇ ಮುಖ್ಯ ಕಾರಣ. ಮಿಲನ ಧಾರಾವಾಹಿಗೆ ಪ್ರಶಾಂತ್ ಆಯ್ಕೆಯಾದಾಗ ಅವರಿಗೆ ನಟನೆಯ ಬಗ್ಗೆ ಯಾವೊಂದು ವಿಚಾರಗಳು ತಿಳಿದಿರಲಿಲ್ಲ. ಆ ಧಾರಾವಾಹಿಯ ನಿರ್ದೇಶಕರು ಮತ್ತು ಸಹಕಲಾವಿದರುಗಳ ಪ್ರೋತ್ಸಾಹ, ಬೆಂಬಲದಿಂದ ಪ್ರಶಾಂತ್ ಅವರು ನಟನೆಯ ಆಗು ಹೋಗುಗಳನ್ನು ತಿಳಿದುಕೊಂಡರು. ಪರಿಪೂರ್ಣ ನಟನಾಗಿ ಹೊರಹೊಮ್ಮಿದರು.

ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪ್ರಶಾಂತ್ ರಿಯಾಲಿಟಿ ಶೋವಿನಲ್ಲೂ ಮೋಡಿ ಮಾಡಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿರುವ ಇವರು ತಮ್ಮ ನೃತ್ಯದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು.

ಸಹಜ ನಟನೆಯ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಪ್ರಶಾಂತ್ ಇದೀಗ ಪರಭಾಷೆಯ ಕಿರುತೆರೆಯಲ್ಲೂ ಮೋಡಿ ಮಾಡಲು ತಯಾರಾಗುತ್ತಿದ್ದಾರೆ. ಇದರ ಜೊತೆಗೆ ಪ್ರಶಾಂತ್ ಅವರಿಗೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುವ ಕನಸಿದ್ದು ಉತ್ತಮ ಪಾತ್ರ ಮತ್ತು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

More from Filmibeat

English summary
Prashanth Bhardwaj made his debut on Telugu television with the serial Radha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X