'ಕೋಟ್ಯಧಿಪತಿ'ಯ ಹಾಟ್ ಸೀಟ್ ನಲ್ಲಿ ಕೂತು ಯಾಮಾರಿದ ಪ್ರಶಾಂತ್

By Bharath Kumar

Recommended Video

Kannadada Kotyadipathi Season 3 : ಹೇಗಿತ್ತು ಕನ್ನಡ ಕೋಟ್ಯಧಿಪತಿಯಲ್ಲಿ ಪ್ರಶಾಂತ್ ಆಟ..!

'ಕನ್ನಡ ಕೋಟ್ಯಧಿಪತಿ'ಯ ಮೂರನೇ ಆವೃತ್ತಿಯಲ್ಲಿ ಎಲ್ಲ ಎಪಿಸೋಡ್ ಗಳು ಮಜಾ ಕೊಡ್ತಿಲ್ಲ. ಆದ್ರೆ, ಅಲ್ಲೊಂದು ಒಲ್ಲೊಂದು ಸ್ಪರ್ಧಿ ತುಂಬಾ ಕುತೂಹಲ ಮೂಡಿಸಿ, ಪ್ರೇಕ್ಷಕರ ಥ್ರಿಲ್ ಹೆಚ್ಚಿಸುತ್ತಾರೆ.

ಹೀಗೆ, ಎರಡು ದಿನ ಪ್ರೇಕ್ಷಕರನ್ನ ಕಾಡಿದ ಸ್ಪರ್ಧಿ ಪ್ರಶಾಂತ್. ತುಂಬಾ ಶಾಂತವಾಗಿ ಆಟವಾಡಿದ ಪ್ರಶಾಂತ್ ದೊಡ್ಡ ಮೊತ್ತವನ್ನ ಗೆಲ್ಲುವ ಎಲ್ಲ ಸಾಧ್ಯತೆಗಳು ಇತ್ತು. ಅದರಂತೆ ಹೆಜ್ಜೆ ಕೂಡ ಹಾಕಿದ್ದರು.

25 ಲಕ್ಷ ಗೆಲ್ಲೋಕೆ ಹೋಗಿ ದೊಡ್ಡ ಮೊತ್ತವನ್ನ ಕಳೆದುಕೊಂಡ ಸೋಮಶೇಖರ್

ಆದ್ರೆ, ಕೋಟ್ಯಧಿಪತಿಯ ಕಂಪ್ಯೂಟರ್ ಕೇಳಿದ ಪ್ರಶ್ನೆಯೊಂದು ಪ್ರಶಾಂತ್ ಅವರ ಬಹುದೊಡ್ಡ ಆಸೆಯನ್ನ ಹಾಗೂ ವಿಶ್ವಾಸವನ್ನ ನುಚ್ಚು ನೂರು ಮಾಡಿತು. ಅದರ ಪರಿಣಾಮ ಕೈಯಲ್ಲಿದ್ದ ಹಣವನ್ನ ಕಳೆದುಕೊಂಡು ನಿರಾಸೆ ಅನುಭವಿಸಬೇಕಾಯಿತು. ಅಷ್ಟಕ್ಕೂ, ಪ್ರಶಾಂತ್ ಗೆದ್ದ ಹಣವೆಷ್ಟು.?

25 ಲಕ್ಷ ಪ್ರಶ್ನೆ ಎದುರಿಸಿದ ಎರಡನೇ ಸ್ಪರ್ಧಿ

25 ಲಕ್ಷ ಪ್ರಶ್ನೆ ಎದುರಿಸಿದ ಎರಡನೇ ಸ್ಪರ್ಧಿ

ಈ ವಾರದ ಸ್ಪರ್ಧಿಗಳ ಪೈಕಿ 25 ಲಕ್ಷ ಪ್ರಶ್ನೆ ಎದುರಿಸಿದ ಎರಡನೇ ಸ್ಪರ್ಧಿ ಪ್ರಶಾಂತ್. ಸೋಮಶೇಖರ್ 25 ಲಕ್ಷದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದ್ದರು. ಅವರನ್ನೇ ಹಿಂಬಾಲಿಸಿದ ಪ್ರಶಾಂತ್ 25 ಲಕ್ಷ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟು ಕೈಯಲಿದ್ದ ಹಣವನ್ನ ಕಳೆದುಕೊಂಡರು.

ಯಾವುದು ಆ ಪ್ರಶ್ನೆ.?

ಯಾವುದು ಆ ಪ್ರಶ್ನೆ.?

1937 ರಲ್ಲಿ ಜವಹರಲಾಲ್ ನೆಹರುರವರನ್ನು ಟೀಕಿಸಿ, ಯಾರು 'ಚಾಣಕ್ಯ' ಎಂಬ ಕಾವ್ಯನಾಮದಲ್ಲಿ 'ರಾಷ್ಟ್ರಪತಿ' ಎನ್ನುವ ಶೀರ್ಷಿಕೆಯಡಿ ಲೇಖನ ಬರೆದಿದ್ದರು.?
A ಮಹಾತ್ಮಾ ಗಾಂಧಿ
B ಜವಹರಲಾಲ್ ನೆಹರು
C ಮೋತಿಲಾಲ್ ನೆಹರು
D ಮುಹಮ್ಮದ್ ಆಲಿ ಜಿನ್ನಾ
ಪ್ರಶಾಂತ್ ಕೊಟ್ಟ ಉತ್ತರ: D ಮುಹಮ್ಮದ್ ಆಲಿ ಜಿನ್ನಾ
ಸರಿಯಾದ ಉತ್ತರ: B ಜವಹರಲಾಲ್ ನೆಹರು

3.20 ಲಕ್ಷಕ್ಕೆ ಜಾರಿದ ಪ್ರಶಾಂತ್

3.20 ಲಕ್ಷಕ್ಕೆ ಜಾರಿದ ಪ್ರಶಾಂತ್

25 ಲಕ್ಷದ ಪ್ರಶ್ನೆಯನ್ನ ಎದುರಿಸಿ ತಪ್ಪು ಉತ್ತರ ಕೊಟ್ಟ ಪ್ರಶಾಂತ್, ಎರಡನೇ ಜಗಲಿಕಟ್ಟೆಗೆ ಜಾರಿದರು. ಅಂದ್ರೆ, 3.20 ಲಕ್ಷ ಹಣವನ್ನ ಮಾತ್ರ ತನ್ನಲ್ಲಿ ಉಳಿಸಿಕೊಂಡರು. 12.5 ಲಕ್ಷ ಗೆದ್ದು ಸೇಫ್ ಆಗಿ ಆಡುತ್ತಿದ್ದ ಪ್ರಶಾಂತ್ ತುಂಬಾ ಯೋಚನೆ ಮಾಡಿ ಉತ್ತರ ಕೊಟ್ಟರು. ಆದ್ರೆ, ಆ ಉತ್ತರ ಸರಿಯಿರಲಿಲ್ಲ.

ಕ್ವಿಟ್ ಮಾಡಬಹುದಿತ್ತು.!

ಕ್ವಿಟ್ ಮಾಡಬಹುದಿತ್ತು.!

ಅಂದ್ಹಾಗೆ, ಪ್ರಶಾಂತ್ ಅವರ ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಿದ್ದರೇ, ಆಟವನ್ನ ಕ್ವಿಟ್ ಮಾಡಬಹುದಿತ್ತು. ಆಗ ಕೈಯಲ್ಲಿ 12.5 ಲಕ್ಷ ಉಳಿಸಿಕೊಳ್ಳಬಹುದಿತ್ತು. ಆದ್ರೆ, ವಿಶ್ವಾಸದಿಂದ ಆಡಿದ ಪ್ರಶಾಂತ್ 25 ಲಕ್ಷ ಗೆಲ್ಲುವ ಭರವಸೆಯಲ್ಲಿದ್ದರು. ಆ ಭರವಸೆ ನಿಜವಾಗಲಿಲ್ಲ.

25 ಲಕ್ಷ ಗೆದ್ದಿದ್ದು ಇಬ್ಬರೇ

25 ಲಕ್ಷ ಗೆದ್ದಿದ್ದು ಇಬ್ಬರೇ

ಇಲ್ಲಿಯವರೆಗೂ ಈ ಆವೃತ್ತಿಯಲ್ಲಿ 25 ಲಕ್ಷ ರೂಪಾಯಿ ಗೆದ್ದಿರುವುದು ಇಬ್ಬರೇ. ಸುಜಾತ ಎಂಬ ಮಹಿಳೆ ಮತ್ತು ರಾಕಿಂಗ್ ಸ್ಟಾರ್ ಯಶ್. ಯಶ್ ಅವರು 25 ಲಕ್ಷ ಪ್ರಶ್ನೆಯೊಂದಿಗೆ ಆಟ ಮುಗಿಸಿದ್ದರು. ಸುಜಾತ ಅವರು 50 ಲಕ್ಷದ ಪ್ರಶ್ನೆಯನ್ನ ಎದುರಿಸಿ ಆಟವನ್ನ ಕ್ವಿಟ್ ಮಾಡಿದ್ದರು.

More from Filmibeat

English summary
'Kannadada Kotyadhipathi season 3' contestant Prashanth has won 3 lakh 20 thousand rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X