For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ರಂತೆ ಆ ಡೈರೆಕ್ಟರ್

  |
  Weekend With Ramesh Season 4: ಉಗ್ರಂ ಸಿನೆಮಾ ಬಗ್ಗೆ ಪ್ರಶಾಂತ್ ನೀಲ್ ಮಾತನಾಡಿದ್ದೇಕೆ? | FILMIBEAT KANNADA

  ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಸ್ಟಾರ್ ನಟ. ಚಂದ್ರಚಕೋರಿ, ಕಂಠಿ, ಉಗ್ರಂ, ಮಫ್ತಿ, ರಥಾವರ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಇಂತಹ ನಟನಿಗೆ ಆ ಡೈರೆಕ್ಟರ್ ಹೊಡೆಯೋದಕ್ಕೆ ಸ್ಕೆಚ್ ಹಾಕಿದ್ರಂತೆ.

  ಹೌದು, ಉಗ್ರಂ ಹಾಗೂ ಕೆಜಿಎಫ್ ಸಿನಿಮಾ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ನಟ ಶ್ರೀಮುರಳಿಗೆ ಹೊಡೆಯಲು ಪ್ಲಾನ್ ಮಾಡಿದ್ದರಂತೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರಶಾಂತ್ ಅವರ ತಂಗಿಗೆ ಶ್ರೀಮುರಳಿ ಲೈನ್ ಹಾಕ್ತಿದ್ರಂತೆ. ಈ ವಿಷ್ಯ ತಿಳಿದ ನಂತರ ಪ್ರಶಾಂತ್ ಹುಡುಗರಿಗೆ ಹೇಳಿ ಹುಡುಕಿದ್ದರಂತೆ. ಆದ್ರೆ, ಆ ಸಮಯದಲ್ಲಿ ಕೈಗೆ ಸಿಗದಂತೆ ಓಡಾಡುತ್ತಿದ್ದರಂತೆ.

  ಮುಂಬೈನಲ್ಲಿ ಮೂರು ಹೊತ್ತು ಊಟಕ್ಕೆ ಪರದಾಡಿದ್ದರು ಶ್ರೀಮುರಳಿ ಮುಂಬೈನಲ್ಲಿ ಮೂರು ಹೊತ್ತು ಊಟಕ್ಕೆ ಪರದಾಡಿದ್ದರು ಶ್ರೀಮುರಳಿ

  ಅಂದ್ಹಾಗೆ, ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಸಂಬಂಧಿಕರು. ಪ್ರಶಾಂತ್ ಅವರ ತಂಗಿ ವಿದ್ಯಾ ಅವರನ್ನ ಶ್ರೀಮುರಳಿ ಪ್ರೀತಿಸಿ ಮದುವೆಯಾಗಿದ್ದಾರೆ. ಇವರೆಲ್ಲರೂ ಶೇಷಾದ್ರಿಪುರಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

  ಆ ದಿನ ಸತ್ತಿದ್ದೀನಾ, ಬದುಕಿದ್ದೀನಾ ಎಂದು ಯಾರೂ ಬಂದು ನೋಡಿಲ್ಲ ಆ ದಿನ ಸತ್ತಿದ್ದೀನಾ, ಬದುಕಿದ್ದೀನಾ ಎಂದು ಯಾರೂ ಬಂದು ನೋಡಿಲ್ಲ

  ಪ್ರೀತಿಸುತ್ತಿರುವ ವಿಚಾರ ಗೊತ್ತಾದ ಬಳಿಕವೇ ಶ್ರೀಮುರಳಿ ಜೊತೆ ಉಗ್ರಂ ಸಿನಿಮಾ ಮಾಡಿದ್ದು. ನಿನ್ನನ್ನು ಸ್ಟಾರ್ ಮಾಡ್ತೀನಿ ಎಂದು ಹೇಳಿಯೇ ಉಗ್ರಂ ಟೇಕ್ ಆನ್ ಮಾಡಿದ್ದರಂತೆ. ಕೊಟ್ಟ ಮಾತಿನಂತೆ ಉಗ್ರಂ ಚಿತ್ರದ ಮೂಲಕ ಶ್ರೀಮುರಳಿಗೆ ಮತ್ತೊಂದು ಲೈಫ್ ಕೊಟ್ಟರು ಅಂದ್ರೆ ತಪ್ಪಾಗಲ್ಲ.

  ಈ ಬಗ್ಗೆ ಸ್ವತಃ ಪ್ರಶಾಂತ್ ನೀಲ್ ಅವರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ''ಇದು ಶ್ರೀಮುರಳಿಗೆ ನಾನು ಕೊಟ್ಟ ವರದಕ್ಷಿಣೆ ಎಂದಿದ್ದಾರೆ.

  English summary
  Ugramm movie director Prashanth neel and sri murali relative. sri murali married with vidya. she is sister of Prashanth neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X