ಕೋಟ್ಯಧಿಪತಿಯಲ್ಲಿ ತೇಜಸ್ವಿ ಸೂರ್ಯ-ಪ್ರತಾಪ್ ಸಿಂಹಗೆ ಕೈಕೊಟ್ಟ ಪ್ರಶ್ನೆ ಇದೇ

Recommended Video

ಪಾಪ ಈ ಪ್ರಶ್ನೆಗೆ ಉತ್ತರವೇ ಗೊತ್ತಿಲ್ಲದ ಸಂಸದರು.?| Kannadada kotyadhipathi 4 | FILMIBEAT KANNADA

ಕನ್ನಡದ ಕೋಟ್ಯಧಿಪತಿಯಲ್ಲಿ ಬಿಜೆಪಿ ಪಕ್ಷದ ಯುವ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಇಬ್ಬರು ಒಟ್ಟಿಗೆ ಭಾಗಿಯಾಗಿದ್ದರು. ಒಂದೊಳ್ಳೆ ಉದ್ದೇಶದಕ್ಕಾಗಿ ಆಟ ಆಡಿದ ಇಬ್ಬರು ಗೆದ್ದ ಹಣವನ್ನ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದರು.

ಆ ಕಾರಣದಿಂದಲೇ ಭಾನುವಾರದ ಎಪಿಸೋಡ್ ಕುತೂಹಲ ಹೆಚ್ಚಿಸಿತ್ತು. ಯುವ ಸಂಸದರು ಎಷ್ಟು ಹಣ ಗೆಲ್ಲುತ್ತಾರೆ, ಇವರಿಬ್ಬರಿಂದ ನೆರೆ ಸಂತ್ರಸ್ತರಿಗೆ ಎಷ್ಟು ಹಣ ಸಹಾಯವಾಗುತ್ತೆ ಎಂದು ಕಾಯುತ್ತಿದ್ದರು.

ನಿರೀಕ್ಷೆಯಂತೆ ಒಳ್ಳೆಯ ಆಟ ಆಡಿದ ಇಬ್ಬರು 12.50 ಲಕ್ಷ ಗೆದ್ದರು. 25 ಲಕ್ಷದ ಪ್ರಶ್ನೆ ಎದುರಿಸಿದ ಸೂರ್ಯ ಮತ್ತು ಸಿಂಹ ಅವರಿಗೆ ಆ ಪ್ರಶ್ನೆ ಕೈಕೊಡ್ತು. ಕೈಯಲ್ಲಿರುವ ಹಣವನ್ನ ಕೈಚೆಲ್ಲುವುದು ಬೇಡ ಎಂದು ನಿರ್ಧರಿಸಿ ಆಟವನ್ನ ಕ್ವಿಟ್ ಮಾಡಿದರು. ಅಷ್ಟಕ್ಕೂ, ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಅವರಿಗೆ ಕೈಕೊಟ್ಟ ಆ ಪ್ರಶ್ನೆ ಯಾವುದು? ಮುಂದೆ ಓದಿ....

ಸಂಸದರು ಎದುರಿಸಿದ ಮೊದಲ ಪ್ರಶ್ನೆ

ಸಂಸದರು ಎದುರಿಸಿದ ಮೊದಲ ಪ್ರಶ್ನೆ

ಕ್ರಿಕೆಟ್ ಪಂದ್ಯದ ನಡುವೆ ಇವರಲ್ಲಿ ಯಾರು ಕೈಯಲ್ಲಿ ಚೆಂಡನ್ನು ಹಿಡಿಯುವಂತಿಲ್ಲ?

A ಬೌಲರ್

B ವಿಕೆಟ್ ಕೀಪರ್

C ಫಸ್ಟ್ ಸ್ಲಿಪ್

D ಬ್ಯಾಟ್ಸ ಮನ್

ಸರಿ ಉತ್ತರ: D ಬ್ಯಾಟ್ಸ ಮನ್

3.25 ಲಕ್ಷದ ಪ್ರಶ್ನೆ ಏನಾಗಿತ್ತು?

3.25 ಲಕ್ಷದ ಪ್ರಶ್ನೆ ಏನಾಗಿತ್ತು?

ವಿಂಬಲ್ಡನ್ ಪುರುಷರ ಸಿಂಗಲ್ಸ್ ಪಂದ್ಯವನ್ನ ಪಂದ್ಯವನ್ನು ಗೆದ್ದ ಏಕೈಕ ವೈಲ್ಡ್ ಕಾರ್ಡ್ ಎಂಟ್ರಿ ಆಟಗಾರು ಯಾರು?

A ಮೈಕೆಲ್ ಚಾಂಗ್

B ಇವಾನ್ ಲೆಂಡ್ಲ್

C ಬೋರಿಸ್ ಬೆಕರ್

D ಗೊರಾನ್ ಇಸಾನಿಸ್ ವೆಚ್

25 ಲಕ್ಷದ ಪ್ರಶ್ನೆ ಇದಾಗಿತ್ತು

25 ಲಕ್ಷದ ಪ್ರಶ್ನೆ ಇದಾಗಿತ್ತು

1948ರಲ್ಲಿ ವಾಸ್ಕೋ ಡ ಗಾಮ ಕ್ಯಾಪ್ಟನ್ ಆಗಿ ಭಾರತಕ್ಕೆ ಬಂದ ಹಡಗಿನ ಹೆಸರು ಏನು?

A ಸಾವೋ ಗೇಬ್ರಿಯಲ್

B ಸಂತ ಮರಿಯಾ

C ಸಾವೋ ರಫಾಯೆಲ್

D ನೀನಾ

ಏನಾಗಿತ್ತು ಉತ್ತರ?

ಏನಾಗಿತ್ತು ಉತ್ತರ?

ಮೂರು ಲೈಫ್ ಲೈನ್ ಬಳಸಿಕೊಂಡಿದ್ದ ಯುವ ಸಂಸದರ ಬಳಿ ಡಬಲ್ ಡಿಪ್ ಮಾತ್ರ ಉಳಿದಿತ್ತು. ಈ ಲೈಫ್ ಲೈನ್ ಬಳಸಿದರೆ ಕ್ವಿಟ್ ಮಾಡುವಂತಿರಲಿಲ್ಲ. ಒಂದು ವೇಳೆ ಲೈಫ್ ಲೈನ್ ಬಳಸಿ ಸರಿ ಉತ್ತರ ಕೊಟ್ಟರೆ ಓಕೆ, ತಪ್ಪು ಉತ್ತರ ಕೊಟ್ಟರೆ ಕೈಯಲ್ಲಿದ್ದ ದೊಡ್ಡ ಮೊತ್ತ ಕಳೆದುಕೊಂಡು 3.25 ಲಕ್ಷಕ್ಕೆ ಜಾರಬೇಕಾಗುತ್ತೆ ಎಂಬ ಆತಂಕದಿಂದ ಆಟವನ್ನ ಕ್ವಿಟ್ ಮಾಡಿದರು. ಈ ಪ್ರಶ್ನೆಗೆ ಸರಿಯಾದ ಉತ್ತರ A ಸಾವೋ ಗೇಬ್ರಿಯಲ್

More from Filmibeat

English summary
Karnataka bjp mps pratap simha and tejasvi surya won 12.5 lakh rupees in Kannadada kotyadhipathi 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X