'ಕಿರಿಕ್' ಸಂಯುಕ್ತಾಗೆ ಕ್ಲಾಸ್ ತಗೊಂಡ ಪ್ರಥಮ್ ಮತ್ತು ಕೀರ್ತಿ!
ಈಗಾಗಲೇ ಸಾಕಷ್ಟು ಬಾರಿ ಕಿರಿಕ್ ಮಾಡಿಕೊಂಡಿರುವ ನಟಿ ಸಂಯುಕ್ತ ಹೆಗ್ಡೆ ಈಗ 'ಬಿಗ್ ಬಾಸ್' ಮನೆಯಲ್ಲಿಯೂ ದೊಡ್ಡ ಕಿರಿಕ್ ಮಾಡಿಕೊಂಡಿದ್ದಾರೆ. ಅತಿಥಿ ಸ್ಪರ್ಧಿಯಾಗಿ ಹೋಗಿದ್ದ ಸಂಯುಕ್ತ ತಮ್ಮ ಸಹ ಸ್ಪರ್ಧಿ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ್ದಾರೆ.
ಆಟದ ನಡುವೆ ಸಮೀರಾಚಾರ್ಯ ಮೇಲೆ ಸಂಯುಕ್ತ ಕೈ ಮಾಡಿದ್ದಾರೆ. ಈ ಬಗ್ಗೆ 'ಬಿಗ್ ಬಾಸ್' ಹಳೆಯ ಸ್ಪರ್ಥಿಗಳು ಸಹ ಮಾತನಾಡಿದ್ದಾರೆ. ಪ್ರಥಮ್, ಕೀರ್ತಿ, ಜಯಲಕ್ಷ್ಮಿ ಮತ್ತು ಕಾವ್ಯ ಶಾಸ್ತ್ರಿ 'ಬಿಗ್ ಬಾಸ್' ನಲ್ಲಿ ನಡೆದ ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಎಲ್ಲರೂ ಸಮೀರಾಚಾರ್ಯ ಬೆಂಬಲಕ್ಕೆ ನಿಂತ್ತಿದ್ದು, ಸಂಯುಕ್ತ ಮಾಡಿದ್ದು ತಪ್ಪು ಎಂದು ಹೇಳುತ್ತಿದ್ದಾರೆ. ಇದರ ಜೊತೆಗೆ 'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಅವರನ್ನು ಹೊರ ಹಾಕಿದ್ದ ಬಿಗ್ ಬಾಸ್ ನಿರ್ಧಾರವನ್ನು ಸಮರ್ತಿಸಿದ್ದಾರೆ. ಮುಂದೆ ಓದಿ...

'ಬಿಗ್ ಬಾಸ್' ನಿಯಮವನ್ನು ಬ್ರೇಕ್ ಮಾಡಿದ್ದಾರೆ
''ಸಂಯುಕ್ತ ಹೆಗ್ಡೆಯನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿರುವ ಮೊದಲ ದಿನದಿಂದ ಗಮನಿಸುತ್ತಿದ್ದೇನೆ. ಸಂಯುಕ್ತ 'ಬಿಗ್ ಬಾಸ್' ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಅದಕ್ಕೆ ಕಾರ್ಯಕ್ರಮದವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಸಮೀರಾಚಾರ್ಯ ಅವರು ಉದ್ದೇಶ ಪೂರ್ವಕವಾಗಿ ಇದನ್ನು ಮಾಡಿಲ್ಲ.'' ಎಂದು 'ಬಿಗ್ ಬಾಸ್' ಮೊದಲ ಸೀಸನ್ ಸ್ಪರ್ಧಿ ಜಯಲಕ್ಷ್ಮಿ ಹೇಳಿದ್ದಾರೆ.

ಸರಿಯಾಗಿ ವರ್ತಿಸಲಿ
''ಬೇರೆಯವರಿಗೆ ಸಂಯುಕ್ತ ಬುದ್ದಿ ಹೇಳುವುದು ಬಿಡಲಿ. ಮೊದಲು ಆಕೆ ಸರಿಯಾಗಿ ವರ್ತಿಸಲಿ. ಎಲ್ಲ ಸ್ಪರ್ಧಿಗಳಿಗೂ ಸಂಯುಕ್ತ ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಈಕೆ 'ಕಾಲೇಜ್ ಕುಮಾರ್' ಚಿತ್ರದ ವೇಳೆಯೂ ಕಿರಿಕ್ ಮಾಡಿಕೊಂಡಿದ್ದರು. ಸಮೀರಾಚಾರ್ಯ ಅವರು ಎಷ್ಟು ದೊಡ್ಡ ವ್ಯಕ್ತಿ ಅವರಿಗೆ ಈ ರೀತಿ ಮಾಡಿರುವುದು ಖಂಡಿಸುತ್ತೇನೆ.'' - ಜಯಲಕ್ಷ್ಮಿ, ಬಿಗ್ ಬಾಸ್ ಸ್ಪರ್ಧಿ.

ನನ್ನ ಬೆಂಬಲ ಸಮೀರಾಚಾರ್ಯ ಅವರಿಗೆ
ಸಮೀರಾಚಾರ್ಯ ಅವರು ಹಿರಿಯರು. ಸಂಯುಕ್ತ ಸುಮ್ಮನೆ ಆತುರ ಪಟ್ಟರು. ಇದನೆಲ್ಲ ನೋಡಿದ ಮೇಲೆ ನಮ್ಮ ಸೀಸನ್ ಬೆಸ್ಟ್ ಎನಿಸುತ್ತಿದೆ. 'ಬಿಗ್ ಬಾಸ್' ಒಳಗೆ ಹೋಗುವಾಗ ನಾವು ನಾವಾಗಿ ಹೋಗಿರುತ್ತೇವೆ. ಆದರೆ ಅಲ್ಲಿಂದ ಹೊರ ಬರುವಾಗ ಬೇರೆಯೇ ಆಗಿರುತ್ತೇವೆ. ಸಮೀರಾಚಾರ್ಯ ಅವರು ಜನರನ್ನು ಗೆದ್ದಿದ್ದಾರೆ. ನನ್ನ ಬೆಂಬಲ ಸಮೀರಾಚಾರ್ಯ ಅವರಿಗೆ ಇದೆ.'' - ಪ್ರಥಮ್, ಬಿಗ್ ಬಾಸ್ ಸ್ಪರ್ಧಿ

'ಬಿಗ್ ಬಾಸ್' ಮನೆ ಬರಿ ಫೈಟ್ ಅಲ್ಲ
''ಯಾರೇ ಆಗಲಿ 'ಬಿಗ್ ಬಾಸ್' ಮನೆಯಲ್ಲಿ ಕೈ ಮಾಡುವ ಹಂತಕ್ಕೆ ಹೋಗುವುದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಆ ಮನೆಯಲ್ಲಿ ಇರುವ ಎಲ್ಲರೂ ಸೆಲೆಬ್ರಿಟಿಗಳೆ. ಮೊದಲು ಎದುರಾಳಿಯ ವಯಸ್ಸು ನೋಡಿ. ಇಂತಹ ಘಟನೆಯನ್ನು ನಡೆದರೆ ಹೊರಗೆ ಕೂಡ ಒಪ್ಪಿಕೊಳ್ಳುವುದಿಲ್ಲ. 'ಬಿಗ್ ಬಾಸ್' ಮನೆ ಬರಿ ಫೈಟ್ ಅಲ್ಲ. ಅದು ವ್ಯಕ್ತಿತ್ವ ಪ್ರದರ್ಶನ.'' - ಕೀರ್ತಿ, ಬಿಗ್ ಬಾಸ್ ಸ್ಪರ್ಧಿ

ಇಲ್ಲಿ ದೊಡ್ಡವರಾಗಿದ್ದು ಸಮೀರಾಚಾರ್ಯ
''ಈ ಸನ್ನಿವೇಶದಲ್ಲಿ ದೊಡ್ಡವರಾಗಿದ್ದು ಸಮೀರಾಚಾರ್ಯ ಅವರು. ಅವರ ಮೇಲೆ ಒಂದು ಹೆಣ್ಣು ತಪ್ಪು ಆರೋಪ ಮಾಡಿದರು ಕೂಡ ಅವರು ಕೈ ಮಾಡಿಲ್ಲ ಮತ್ತು ಆಕೆಗೆ ಏನು ಬೈಯಲಿಲ್ಲ. ಅದು ಅವರ ವ್ಯಕ್ತಿತ್ವ ತೋರಿಸುತ್ತದೆ.'' - ಕಾವ್ಯ ಶಾಸ್ತ್ರಿ, ಬಿಗ್ ಬಾಸ್ ಸ್ಪರ್ಧಿ


Click it and Unblock the Notifications











