»   » 'ಬಿಗ್ ಬಾಸ್' ಗೆಲ್ತೀನಿ ಅಂತ ಪ್ರಥಮ್ ಗೆ ಮೊದಲೇ ಗೊತ್ತಿತ್ತಂತೆ.!

'ಬಿಗ್ ಬಾಸ್' ಗೆಲ್ತೀನಿ ಅಂತ ಪ್ರಥಮ್ ಗೆ ಮೊದಲೇ ಗೊತ್ತಿತ್ತಂತೆ.!

Posted By:
Subscribe to Filmibeat Kannada

'ಬಿಗ್ ಬಾಸ್' ಗೆಲ್ತೀನಿ ಅಂತ ಪ್ರಥಮ್ ಗೆ ಮೊದಲೇ ಗೊತ್ತಿತ್ತಂತೆ. ಹಾಗಂತ ಸ್ವತಃ ಪ್ರಥಮ್ ರವರೇ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಪ್ರಥಮ್ ಹಾಗೇ ಹೇಳಿದ ಕೂಡಲೆ, ನಿರೂಪಕ ಅಕುಲ್ ಬಾಲಾಜಿಗೆ ಸರ್ ಪ್ರೈಸ್ ಹಾಗೂ ಶಾಕ್ ಒಟ್ಟೊಟ್ಟಿಗೆ ಆಯ್ತು. ''ಬಿಗ್ ಬಾಸ್ ಗೆಲ್ತೀನಿ ಅಂತ ಮೊದಲೇ ಹೇಗೆ ಗೊತ್ತಿತ್ತು'' ಅಂತ ಆಶ್ಚರ್ಯದಿಂದ ಕೇಳಿದ್ಮೇಲೆ ಪ್ರಥಮ್ ಕೊಟ್ಟ ವಿವರಣೆ ಬೇರೆ.!

Pratham speaks about 'Bigg Boss' show in 'Super Talk Time'

''ಹದಿನಾಲ್ಕು ವಾರ ನನ್ನನ್ನ ಉಳಿಸಿದ ಜನ, ಕೊನೆ ವಾರ ಗೆಲ್ಲಿಸದೇ ಇರುತ್ತಾರಾ.? ಹದಿನಾಲ್ಕು ವಾರ ನನ್ನನ್ನ ಉಳಿಸಿದ ಜನರಿಗೆ ನನ್ನನ್ನ ಗೆಲ್ಲಿಸುವ ಜವಾಬ್ದಾರಿ ಕೂಡ ಇತ್ತು. ಅದನ್ನ ಅವರು ನಿಭಾಯಿಸುತ್ತಾರೆ ಎಂಬ ನಂಬಿಕೆ ಇತ್ತು'' ಎಂದು ಪ್ರಥಮ್ ಹೇಳಿದರು.

Pratham speaks about 'Bigg Boss' show in 'Super Talk Time'

''ಹದಿನಾಲ್ಕು ವಾರ ಕೀರ್ತಿಯನ್ನೂ ಕೂಡ ಜನ ಉಳಿಸಿದ್ದರು ಅಲ್ವಾ?'' ಎಂದು ಅಕುಲ್ ಬಾಲಾಜಿ ಕೇಳಿದಕ್ಕೆ, ''ಅವರು ನನ್ನಷ್ಟು ಬಾರಿ ನಾಮಿನೇಟ್ ಆಗಿರಲಿಲ್ಲ'' ಎಂಬ ಉತ್ತರವನ್ನ ಪ್ರಥಮ್ ನೀಡಿದರು.

English summary
'Olle Huduga' Pratham speaks about 'Bigg Boss' show in 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada