'ಮುದ್ದು ಸೊಸೆ'ಯಾಗಿ ಕಿರುತೆರೆಗೆ ಮರಳಿದ ಪ್ರತಿಮಾ: ಈ ನಟಿಯ ಹಿನ್ನೆಲೆಯೇನು?

By ಅನಿತಾ ಬನಾರಿ

ಮುದ್ದು ಸೊಸೆ! ಯಾರಪ್ಪಾ ಈ ಮುದ್ದು ಸೊಸೆ? ಯಾರ ಬಗ್ಗೆ ಮಾತಾಡುತ್ತಿರುವುದು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ, ನಾವು ಮಾತಾನಾಡುತ್ತಿರುವುದು 'ಮುದ್ದು ಸೊಸೆ' ಧಾರಾವಾಹಿಯ ಬಗ್ಗೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮುದ್ದು ಸೊಸೆ' ಎನ್ನುವ ಹೊಸ ಧಾರಾವಾಹಿಯೊಂದು ಅತೀ ಶೀಘ್ರದಲ್ಲಿ ಶುರುವಾಗಲಿದೆ. ಈ ಧಾರಾವಾಹಿಯು ಪ್ರೋಮೋ ರಿಲೀಸ್ ಮಾಡಿದ್ದು ಅದರಲ್ಲಿ ಸ್ಕೂಲ್ ಬೆಂಚ್ ನಿಂದ ಹಸೆಮಣೆಯವರೆಗೆ ಎನ್ನುವ ಶೀರ್ಷಿಕೆಯೂ ಇದೆ.

ಪ್ರೋಮೋದಲ್ಲಿ ಶಾಲೆಯೊಂದು ಇದ್ದು ಅದರಲ್ಲಿ ಇತಿಹಾಸದ ವಾರ್ಷಿಕ ಪರೀಕ್ಷೆ ನಡೆಯುತ್ತಿರುತ್ತದೆ. ಸರಕಾರಿ ಪದವಿ ಪೂರ್ವ ಕಾಲೇಜು ಹೊನ್ನೆಮಡು ಮಂಡ್ಯ ಇಲ್ಲಿ ವಾರ್ಷಿಕ ಪರೀಕ್ಷೆ ನಡೆಯುತ್ತದೆ. ಅಲ್ಲಿ ಮಕ್ಕಳೆಲ್ಲಾ ಪರೀಕ್ಷೆ ಬರೆಯುತ್ತಿರುತ್ತಾರೆ. ಆಗ ಸರ್ ಅಡಿಶನಲ್ ಶೀಟ್ ಎನ್ನುವ ಧ್ವನಿ ಕೇಳುತ್ತದೆ. ಧ್ವನಿ ಬಂದ ಕಡೆ ನೋಡಿದರೆ ಮದುವೆ ವಧುವಿನಂತೆ ಅಲಂಕಾರ ಮಾಡಿದ ಹುಡುಗಿಯೊಬ್ಬಳು ಪರೀಕ್ಷೆ ಬರೆಯುತ್ತಿರುತ್ತಾಳೆ. ಶೀರ್ಷಿಕೆಯಂತೆ ಆಕೆಯೇ ಮುದ್ದು ಸೊಸೆ ಎಂಬುದಷ್ಟೇ ಅರಿವಾಗುತ್ತದೆ ವಿನಃ ಬೇರೇನೂ ತಿಳಿಯುವುದಿಲ್ಲ.

Actress Prathima new serial Muddu sose

ಒಟ್ಟಿನಲ್ಲಿ ಈ ಪ್ರೋಮೋ ಕೊಂಚ ಮಟ್ಟಿಗೆ ವೀಕ್ಷಕರಲ್ಲಿ ಕುತೂಹಲವನ್ನು ಕೂಡಾ ಉಂಟು ಮಾಡಿದೆ ಎನ್ನಬಹುದು. ಅಂದ ಹಾಗೇ ಈ ಪ್ರೋಮೋದಲ್ಲಿ ನವ ವಧುವಿನಂತೆ ಶೃಂಗಾರ ಮಾಡಿ ಪರೀಕ್ಷೆ ಬರೆಯುವ ಹೆಣ್ಣುಮಗಳ ಪಾತ್ರಕ್ಕೆ ಜೀವ ತುಂಬಿರುವ ಬೆಡಗಿ ಹೆಸರು ಪ್ರತಿಮಾ. ಅರೇ, ಯಾರೀಕೆ ಪ್ರತಿಮಾ? ಹೊಸ ನಟಿಯಾ ಎಂದು ನೀವು ಊಹೆ ಮಾಡುತ್ತಿದ್ದರೆ ಅದು ಅಕ್ಷರಶಃ ತಪ್ಪು. ಯಾಕೆಂದರೆ ಪ್ರತಿಮಾ ಈ ಹಿಂದೆ 'ಅಂತರಪಟ' ಧಾರಾವಾಹಿಯಲ್ಲಿ ನಟಿಸಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗುತ್ತಿದ್ದ 'ಅಂತರಪಟ' ಧಾರಾವಾಹಿಯಲ್ಲಿ ನಾಯಕಿ ಆರಾಧನಾ ತಂಗಿ ಸಿರಿಯಾಗಿ ನಟಿಸುವ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡಿದ್ದರು ಪ್ರತಿಮಾ. 'ಅಂತರಪಟ' ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದೇ ಆದರೂ ನಟನೆಯ ಮೂಲಕ ಗುರುತಿಸಿಕೊಂಡಿದ್ದರು ಎಂಬುದಕ್ಕೆ ಆಕೆ ಪರಭಾಷೆಯ ಕಿರುತೆರೆಯಲ್ಲಿ ಅವಕಾಶ ಪಡೆದುಕೊಂಡಿದುದೇ ಸಾಕ್ಷಿ.

'ಅಂತರಪಟ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ತೆಲುಗು ಧಾರಾವಾಹಿಯಲ್ಲಿ ನಟಿಸುವ ಸುವರ್ಣಾವಕಾಶವನ್ನು ಈಕೆ ಪಡೆದುಕೊಂಡಿದ್ದರು. ಸನ್​ನೆಟ್​ವರ್ಕ್ ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಿವಂಗಿ' ಧಾರಾವಾಹಿಯಲ್ಲಿ ನಟಿ ಪ್ರತಿಮಾ ನಟಿಸುತ್ತಿದ್ದಾರೆ. 'ಸಿವಂಗಿ' ಧಾರಾವಾಹಿಯಲ್ಲಿ ನಾಯಕಿ ಆನಂದಿಯಾಗಿ ನಟಿಸುತ್ತಿರುವ ಈಕೆ ಪರಭಾಷಾ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ ಬೆಡಗಿ.

Actress Prathima new serial Muddu sose

ಪಕ್ಕಾ ಹಳ್ಳಿ ಹುಡುಗಿಯಾಗಿರುವ ಆನಂದಿ ಸದಾ ಕಾಲ ಲಂಗ ದಾವಣಿ ತೊಟ್ಟುಕೊಂಡು ಓಡಾಡುತ್ತಿರುವ ಮುದ್ದು ಹುಡುಗಿ. ತನ್ನ ಕುಟುಂಬಕ್ಕೆ ಸದಾ ಕಾಲ ಬೆನ್ನುಲುಬಾಗಿ ನಿಲ್ಲುವ ಈಕೆ ಸದಾ ಕಾಲ ಖುಷಿಯಾಗಿರುವ ಹುಡುಗಿ. ಮಾತ್ರವಲ್ಲ ತನ್ನ ಸುತ್ತಮುತ್ತಲೂ ಇರುವವರನ್ನು ಖುಷಿಯಲ್ಲಿ ಇರುವಂತೆ ನೋಡಿಕೊಳ್ಳುವ ಈಕೆ ಯಾರಾದರೂ ಕಷ್ಟ ಎಂದು ಬಂದರೆ ಸಾಕು ಅವರ ಪಾಲಿಗೆ ಆನಂದಿಯೇ ದೇವತೆ. ಒಟ್ಟಿನಲ್ಲಿ ತಮ್ಮ ನಟನೆಯ ಮೂಲಕ ಮನ ಸೆಳೆದಿರುವ ಪ್ರತಿಮಾ ಇದೀಗ ಮುದ್ದು ಸೊಸೆಯಾಗಿ ಕಿರುತೆರೆಗೆ ಮರಳುತ್ತಿದ್ದಾರೆ.

ಕಿರುತೆರೆಯ ಹೊರತಾಗಿ ಒಂದಷ್ಟು ವೆಬ್ ಸಿರೀಸ್ ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಪ್ರತಿಮಾ. 'ಕೆಂಡದ ಸೆರಗು', 'ಅಧರಂ ಮಧುರಂ', 'ಎ ಡೇ ಇನ್ ಡಾಲರ್ ಪೇಟೆ', 'ತರ್ಕ' ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಪೋಷಕ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿ, ಪರಭಾಷೆಯ ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸಿರುವ ಪ್ರತಿಮಾ ಇದೀಗ ಸಣ್ಣ ಬ್ರೇಕ್ ನ ನಂತರ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ಖುಷಿಯ ಸಂಗತಿಯೆಂದರೆ ಈ ಭಾರೀ ಈಕೆ ಕನ್ನಡ ಕಿರುತೆರೆಯಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Prathima returned to tv as a sweet daughter-in-law with Muddu Sose Serial
Read more about: actress serial show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X