ಪ್ರೆಗ್ನೆನ್ಸಿ ಒಂದು ಬ್ಯೂಟಿಫುಲ್ ಜರ್ನಿ ಎಂದ ಕಿರುತೆರೆ ಗೊಂಬೆ ನೇಹಾ ಗೌಡ

By ಅನಿತಾ ಬನಾರಿ

ಕಿರುತೆರೆಯ ಖ್ಯಾತ ನಟಿ ನೇಹಾ ಗೌಡ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದ ನಟಿ ನೇಹಾ ಗೌಡ ನೆಟ್ಟಿಗರ ಮನಸ್ಸಿನಲ್ಲಿ ಗೊಂಬೆ ಎಂದೇ ಜನಪ್ರಿಯರಾಗಿದ್ದಾರೆ. ಹೌದು, ನೇಹಾ ಗೌಡ ಅವರನ್ನು ಹೆಚ್ಚಾಗಿ ಎಲ್ಲರೂ ಗೊಂಬೆ ಎಂದೇ ಕರೆಯುತ್ತಾರೆ. ಇವರು ಕಿರುತೆರೆಯ ಫೇಮಸ್ ನಟನಾದ ಚಂದನ್ ಗೌಡರವರನ್ನು ಪ್ರೀತಿಸಿ ಮದುವೆಯಾದರು. ಚಂದನ್ ಗೌಡ 'ಅಂತರಪಟ' ಎಂಬ ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರೀತಿಸಿ ಮದುವೆಯಾಗಿ ದಾಂಪತ್ಯದ ಜೀವನಕ್ಕೆ ಕಾಲಿಟ್ಟ ನೇಹಾ ಗೌಡ ಮತ್ತು ಚಂದನ್ ಗೌಡ ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳ ಜೊತೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು, ನಟಿ ನೇಹಾ ಗೌಡ ಮತ್ತು ಅವರ ಗಂಡ ಚಂದನ್ ಗೌಡ ರವರು ಈಗಾಗಲೇ ಗುಡ್ ನ್ಯೂಸ್ ಎಂದರೆ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದರು. ಈಗಾಗಲೇ ಇವರು ಸೀಮಂತದ ಶಾಸ್ತ್ರಗಳನ್ನೆಲ್ಲ ಪೂರೈಸಿದ್ದು, ಇವರ ಸೀಮಂತ ಶಾಸ್ತ್ರಕ್ಕೆ ತಾರಾ, ಅನುಪಮಾ ಗೌಡ, ಕವಿತಾ ಗೌಡ ಮೊದಲಾದ ಕನ್ನಡದ ಖ್ಯಾತ ನಟ ನಟಿಯರು ಆಗಮಿಸಿದ್ದರು.

Pregnancy is a beautiful journey says actress Neha Gowda

ನಟಿ ನೇಹಾ ಗೌಡ ಕೆಲವೇ ದಿನಗಳಲ್ಲಿ ಮೊದಲ ಮಗುವಿಗೆ ಜನ್ಮವನ್ನು ನೀಡಲಿದ್ದಾರೆ. ಈ ಸಂಬಂಧ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಸೀಮಂತದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅವರೇ ಹಂಚಿಕೊಂಡಿದ್ದು ಈಗಾಗಲೇ ಅದು ವೈರಲ್ ಆಗಿದೆ. ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಸಿದ್ದರು.

ಈ ಕ್ಯೂಟ್ ಜೋಡಿ ಕ್ಯೂಟ್ ಆದಂತಹ ಪ್ರೆಗ್ನೆನ್ಸಿ ಫೋಟೋ ಶೂಟ್ ಅನ್ನು ಮಾಡಿಸಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಬಹಳ ವೈರಲ್ ಆಗಿದ್ದು, ಸಾಕಷ್ಟು ಲೈಕ್ ಮತ್ತು ಕಮೆಂಟ್‌ಗಳು ಮೂಡಿ ಬಂದಿದೆ. ಕೆಲವು ಫ್ಯಾನ್ಸ್‌ ಅಂತೂ "ನಮ್ಮನೆ ಗೊಂಬೆಗೆ ಗೊಂಬೆಯಂತಹ ಮಗುವೇ ಆಗಲಿ" ಎಂದು ಹರಸಿದ್ದಾರೆ.

ನೇಹಾ ಗೌಡರವರ ಪ್ರೆಗ್ನೆನ್ಸಿ ಡೇಟ್ ಇನ್ನೇನು ಹತ್ತಿರ ಬಂದಿದ್ದು, ಇವರು ಎಲ್ಲಾ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಪ್ರೆಗ್ನೆನ್ಸಿ ಟಿಪ್ಸ್ ಹಾಗೂ ಕೆಲವೊಂದು ವಿಚಾರಗಳನ್ನು ಪಾಲಿಸುವುದಾಗಿ ಹೇಳಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳಿಗೂ ಪ್ರೆಗ್ನೆನ್ಸಿ ಎಂಬುದು ಎಷ್ಟು ಸಂತೋಷ ಕೊಡುವಂತ ವಿಚಾರವಾಗಿದ್ದರೂ ಕೂಡ ಭಯವಾಗುವುದು ಸಹಜ. ಆದರೆ, ಇದರಲ್ಲಿ ಭಯಪಡುವಂತಹ ಯಾವ ಸಂಗತಿಯೂ ಇಲ್ಲ. ಇದೊಂದು ಬ್ಯೂಟಿಫುಲ್ ಜರ್ನಿ. ಅನುಭವಿಸುವ ಸುಖ ನೆಮ್ಮದಿ ವರ್ಣಿಸಲು ಬಹಳ ಕಷ್ಟ. ನಮ್ಮ ಆರೋಗ್ಯ ಮತ್ತು ಮೆಂಟಲ್ ಹೆಲ್ತ್ ಅನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಪ್ರೆಗ್ನನ್ಸಿ ಟೈಮ್ ಅಲ್ಲಿ ಪ್ರತಿದಿನವೂ ಧ್ಯಾನವನ್ನು ಮಾಡುತ್ತಿದ್ದೆ. ಇದು ಸ್ಟ್ರೆಸ್ ಕಂಟ್ರೋಲ್ ಮಾಡಲು ಬಹಳ ಸಹಾಯವಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ.

Pregnancy is a beautiful journey says actress Neha Gowda

ಇದರ ಜೊತೆಗೆ ಇಂತಹ ಸುಂದರವಾದ ಜರ್ನಿಯಲ್ಲಿ ಕೆಲವೊಂದಿಷ್ಟು ಎಕ್ಸಸೈಜ್ ಮತ್ತು ಯೋಗವನ್ನು ಮಾಡುವುದರಿಂದ ಡೆಲಿವರಿ ಟೈಮಲ್ಲಿ ಬಹಳ ಸಹಾಯವಾಗುವುದಂತೂ ಖಂಡಿತ. ನಾನು ಪ್ರತಿದಿನವೂ ಒಂದಿಷ್ಟು ಯೋಗ ಆಸನಗಳನ್ನು ಪಾಲಿಸುತ್ತಿದ್ದೆ. ಈ ಎಲ್ಲಾ ವಿಚಾರಗಳನ್ನು ಪಾಲಿಸುವುದರಿಂದ ನನ್ನಲ್ಲಿ ಬಾಳ ಪಾಸಿಟಿವ್ನೆಸ್ ಜಾಸ್ತಿಯಾಗಿದೆ ಮತ್ತು ಮೂಡ್ ಸ್ವಿಂಗ್ಸ್ ಕಂಟ್ರೋಲ್ ನಲ್ಲಿ ಸಹಕಾರಿಯಾಗಿದೆ ಎಂದು ಹಂಚಿಕೊಂಡಿದ್ದಾರೆ ನೇಹಾ ಗೌಡ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X