Weekend with Ramesh: ರಕ್ತದಲ್ಲಿ ಪ್ರೇಮಪತ್ರ.. ಕೈಯಾರೆ ನೇಯ್ದ ಸೀರೆ ಮಡದಿಗೆ ಕೊಟ್ಟಿದ್ದ ಪ್ರೇಮ್

By ಶೃತಿ ಹರೀಶ್ ಗೌಡ

ಪ್ರೇಮ್ ಅವರು ನಟಿಸಿದ ಮೊದಲ ಸಿನಿಮಾ 'ಪ್ರಾಣ' ಫ್ಲಾಪ್ ಆಗಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರೆದು ಫಿಲಂ ಫೇರ್ ಅವಾರ್ಡ್‌ ಪಡೆದುಕೊಂಡರು. ತಂದೆಯವರು ಹೇಳಿದ ಮಾತಿನಂತೆಯೇ ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರೆದು ನೆಲೆ ಕಂಡುಕೊಂಡರು. ಹೆಂಡತಿ ಪ್ರೇಮ್ ಅವರಿಗೆ ಬೆನ್ನೆಲುಬಾಗಿ ಇದ್ದು ಮನೆ ಜವಾಬ್ದಾರಿ ತೆಗೆದುಕೊಂಡು ಗಂಡನ ಸಾಧನೆಗೆ ಮೆಟ್ಟಿಲಾಗಿ ನಿಂತರು.

ಮೊದಲ ಚಿತ್ರ ಹೋದರೆ ಏನಂತೆ ಎಂದು ಎರಡನೇ ಚಿತ್ರಕ್ಕೆ ಸಾಕಷ್ಟು ಶ್ರಮವನ್ನ ಹಾಕಿ ಕೆಲಸ ಮಾಡಿದರು. ನಂತರ ಮೂರನೇ ಚಿತ್ರವನ್ನ ಮಾಡಿ ಯಶಸ್ಸು ಕಂಡರು. ಆರಂಭದಲ್ಲಿ ಯಶಸ್ಸು ಕಂಡ ಪ್ರೇಮ್‌ ನಂತರ ಕೆಲವೊಂದು ಸಿನಿಮಾಗಳನ್ನು ಮಾಡಿ ಎಡವಿ ಬಿದ್ದರು. ಆದರೂ ಒಳ್ಳೆ ಸಿನಿಮಾಗಳನ್ನು ನೀಡಿ ಅಭಿಮಾನಿಗಳ ಮನಸ್ಸಿನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಿ ಮೆರೆಯುತ್ತಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Prem reveals his love story and Friendship With sharan, Tharun in weekend with ramesh show

ರಕ್ತದಲ್ಲಿ ವ್ಯಾಲೆಂಟೈನ್ ಡೇ ಶುಭಾಶಯ

ನೆನಪಿರಲಿ ಪ್ರೇಮ್ ಅವರು ಲವ್ ಮಾಡುತ್ತಿದ್ದಾಗ ಪ್ರೇಯಸಿಗೆ ಸೀರೆಯನ್ನು ನೇಯ್ದು ಕೊಟ್ಟಿದ್ದಾರೆ. ಅದನ್ನು 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಅವರ ಮಗಳು ರಿವೀಲ್ ಮಾಡಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿದ ಪ್ರೇಮ್ ಅವರ ಹೆಂಡತಿ ಜ್ಯೋತಿ ತಮಗೆ ವ್ಯಾಲೆಂಟೈನ್ಸ್ ಡೇಗೆ ಕೈಯಾರೆ ನೇಯ್ದು ಕೊಟ್ಟ ಸೀರೆ ಎಂದು ನೆನಪನ್ನು ಹಂಚಿಕೊಂಡಿದ್ದಾರೆ.‌

ತಮ್ಮ ಹೆಂಡತಿಯ ಮೇಲೆ ಅದೆಷ್ಟು ಪ್ರೀತಿ ಅಂದ್ರೆ ಅವರ 25ನೇ ವ್ಯಾಲೆಂಟೈನ್ಸ್ ಡೇಗೆ ರಕ್ತದಲ್ಲಿ ಪತ್ರ ಬರೆದು ಪ್ರೇಮ್ ಶುಭಾಶಯ ಕೋರಿದ್ದರಂತೆ. ಪ್ರೇಮ್ ಅವರ ಜೋಡಿಯನ್ನ ನೋಡುತ್ತಿದ್ದರೆ ಎಲ್ಲರಿಗೂ ಸಹ ಅವರಂತೆ ನಾವು ಬಾಳಬೇಕು ಎಂಬಂತೆ ಅವರು ಬಾಳಿ ಬದುಕುತ್ತಿದ್ದಾರೆ.

Prem reveals his love story and Friendship With sharan, Tharun in weekend with ramesh show

ಮಕ್ಕಳ ಬಗ್ಗೆ ಮಾತನಾಡಿದ ಪ್ರೇಮ್

ಲವ್ಲಿ ಸ್ಟಾರ್ ಪ್ರೇಮ್ ಅವರು ಅವರ ಮಕ್ಕಳ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹಂಚಿಕೊಂಡಿದ್ದಾರೆ.‌ ನನ್ನ ಮಗ ಹಾಗೂ ಮಗಳಿಗೆ ನಾನು ಇಲ್ಲಿಯವರೆಗೂ ಯಾವುದೇ ಬಟ್ಟೆಯನ್ನ ಕೊಡಿಸಿಲ್ಲ, ಪಾಕೆಟ್ ಮನಿಯನ್ನು ಕೊಟ್ಟಿಲ್ಲ. ಅವರು ನನ್ನ ಬಳಿ ಕೇಳೋದಿಲ್ಲ. ಎಲ್ಲರಂತೆ ಬಿಎಂಟಿಸಿ ಬಸ್‌ನಲ್ಲಿ ಓಡಾಡುತ್ತಾರೆ ಎಂದು ಮಕ್ಕಳ ಬಗ್ಗೆ ಮನದುಂಬಿ ಮಾತನಾಡಿದ್ದಾರೆ.

ಶರಣ್, ತರುಣ್ ಹಾಗೂ ಅವರ ಮತ್ತೆ ಇಬ್ಬರು ಸ್ನೇಹಿತರು ಬಂದಾಗ ಎಲ್ಲಾ ನೆನಪಿನ ಬುತ್ತಿಯನ್ನು ಹೊರಗೆ ತೆಗೆದಿದ್ದಾರೆ. ಇದೇ ವೇಳೆ ತರುಣ್ ಹಾಗೂ ನೆನಪಿರಲಿ ಪ್ರೇಮ್ ಜೊತೆಗಿನ ಸ್ನೇಹ ಹೇಗೆ ಶುರುವಾಯಿತು ಎನ್ನುವುದರ ಬಗ್ಗೆ ಸವಿಸ್ತಾರವಾಗಿ ವೇದಿಕೆಯ ಮೇಲೆ ಹೇಳಿದ್ದಾರೆ. ನಾವು ಪಂಚ ಪಾಂಡವರು. ಪಾರ್ಟಿ ಮಾಡಲು ಪ್ಲಾನ್ ಮಾಡಿದ್ದೇವೆ ಎಂದು ಶರಣ್ ತಮಾಷೆ ಮಾಡಿದ್ದಾರೆ. ಪ್ರೇಮ್‌ವರಿಗೆ ಸ್ನೇಹಿತರ ಮೇಲೆ ಅದೆಷ್ಟು ಅದಮ್ಯ ಪ್ರೀತಿ ಇದೆ ಎಂಬುದಕ್ಕೆ ಅವರ ಬಗ್ಗೆ ಅವರ ಸ್ನೇಹಿತರು ವ್ಯಕ್ತಪಡಿಸಿರುವ ಅನಿಸಿಕೆಗಳೇ ಸಾಕ್ಷಿ.

Prem reveals his love story and Friendship With sharan, Tharun in weekend with ramesh show

ಸ್ನೇಹಿತನನ್ನು ನೆನೆದು ಪ್ರೇಮ್ ಭಾವುಕ

ಇದರ ಜೊತೆಗೆ ಡ್ರೈವರ್ ಆಗಿದ್ದ ಮತ್ತೊಬ್ಬ ಸ್ನೇಹಿತನನ್ನು ಪ್ರೇಮ್ ನೆನೆದರು. ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದ ನೆನೆದು ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅವನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇದರ ಜೊತೆಗೆ ಅವನು ಎಲ್ಲೇ ಹುಟ್ಟಿದ್ದರೂ ಸಹ ಅವನಿಗೆ ದೇವರು ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಬೇಡಿಕೊಂಡಿದ್ದಾರೆ.

More from Filmibeat

English summary
Prem reveals his love story and Friendship With sharan, Tharun Sudhir in weekend with ramesh show. Prem wrote a love letter in blood to wife Jyothi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X