'ಓಂ' ಸಿನಿಮಾ ಮಾಡುವಾಗ ಉಪ್ಪಿ ಕಂಡ್ರೆ ಪ್ರೇಮಾ ಉರಿದು ಬೀಳುತ್ತಿದ್ದರಂತೆ.!

Recommended Video

Weekend With Ramesh Season 4: ಓಂ ಸಿನೆಮಾದಲ್ಲಿ ಪ್ರೇಮಾ ತುಂಬ ಕಷ್ಟಪಟ್ಟಿದ್ದರಂತೆ

'ಓಂ' ಸಿನಿಮಾ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರಿಗೆ ಎಷ್ಟು ಮುಖ್ಯನೋ ನಟಿ ಪ್ರೇಮಾಗೂ ಈ ಚಿತ್ರ ಅಷ್ಟೇ ಮುಖ್ಯ. 'ಸವ್ಯಸಾಚಿ' ಎಂಬ ಮೊದಲ ಸಿನಿಮಾ ಮಾಡಿ ಸೋಲು ಕಂಡಿದ್ದ ಪ್ರೇಮಾಗೆ ಪಾರ್ವತಮ್ಮ ನಿರ್ಮಾಣದ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ತು.

ಬಹಳ ಖುಷಿಯಿಂದ 'ಓಂ' ಒಪ್ಪಿಕೊಂಡ ಪ್ರೇಮಾ ಅವರಿಗೆ ಉಪೇಂದ್ರ ಮೇಲೆ ದ್ವೇಷ ಬರುವಂತೆ ಮಾಡಿತ್ತು. ಓಂ ಸಿನಿಮಾ ಮುಗಿಯವರೆಗೂ ಉಪ್ಪಿ ಕಂಡ್ರೆ ಪ್ರೇಮಾ ಅವರಿಗೆ ಆಗುತ್ತಲೇ ಇರಲಿಲ್ಲ. 'ಉಪೇಂದ್ರ ಎಷ್ಟು ಕ್ರೂರಿ' ಎಂದು ಬೈಯ್ದುಕೊಂಡಿರುವುದು ಇದೆಯಂತೆ.

ಮೊದಲ ಚಿತ್ರದಲ್ಲೇ ಉಪ್ಪಿ ಮೇಲೆ ಕೆಂಡದಂಥ ಕೋಪ ಮಾಡಿಕೊಂಡಿದ್ದ ಪ್ರೇಮಾ, ಅದನ್ನ ಸಹಿಸಿಕೊಂಡೇ ಸಿನಿಮಾ ಮಾಡಿದ್ರಂತೆ. ಆಮೇಲೆ ಸಿನಿಮಾ ನೋಡಿದ್ಮೇಲೆ ಅಯ್ಯೂ ರಾಮ ಹೀಗೆಲ್ಲಾ ಇದ್ಯಾ ಎಂದು ಅಚ್ಚರಿಯಾಗಿದ್ದರಂತೆ. ಅಷ್ಟಕ್ಕೂ, ಉಪ್ಪಿ ಮೇಲೆ ಪ್ರೇಮಾ ಮುನಿಸಿಕೊಳ್ಳಲು ಕಾರಣವೇನು? ಮುಂದೆ ಓದಿ.....

ಉಪೇಂದ್ರ ಮೇಲೆ ದ್ವೇಷ ಬರ್ತಿತ್ತು

ಉಪೇಂದ್ರ ಮೇಲೆ ದ್ವೇಷ ಬರ್ತಿತ್ತು

''ಆಗಷ್ಟೇ ಮೊದಲನೇ ಸಿನಿಮಾ ಆಗಿತ್ತು. ಎರಡನೇ ಸಿನಿಮಾದಲ್ಲಿ ಬಣ್ಣ ಎರುಚುವುದು, ಜುಟ್ಟು ಎಳೆಯುವುದು ಎಲ್ಲ ಮಾಡಿಸಿದ್ರು. ಈ ಮನುಷ್ಯ ಎಷ್ಟು ಕ್ರೂರಿ ಅನಿಸುತ್ತಿತ್ತು. ಉಪೇಂದ್ರಗೆ ಕರುಣೆ ಇಲ್ವಾ, ಹೆಣ್ಣು ಎಂಬ ಭಾವನೆ ಇಲ್ವಾ ಎಂದು ಕೋಪ ಬರ್ತಿತ್ತು'' ಎಂದು ಪ್ರೇಮಾ ಹೇಳಿಕೊಂಡಿದ್ದಾರೆ.

ಹುಡುಗಿಯರನ್ನ ಕಂಡ್ರೆ ಆಗ್ತಿರಲಿಲ್ಲ

ಹುಡುಗಿಯರನ್ನ ಕಂಡ್ರೆ ಆಗ್ತಿರಲಿಲ್ಲ

''ಹುಡುಗಿಯರನ್ನ ಕಂಡ್ರೆ ಉಪ್ಪಿಗೆ ಆಗ್ತಿರಲಿಲ್ಲ. ನಮ್ಮನ್ನ ಸಾಫ್ಟ್ ಆಗಿ ನೋಡಿಕೊಳ್ಳುತ್ತಲೇ ಇರಲಿಲ್ಲ. ಶಿವಣ್ಣ ಅವರಿಗೆ ಮಾತ್ರ ಹಾಗೆ ಮಾಡೋಣ, ಹೀಗೆ ಮಾಡೋಣ ಅಂತ ಹೇಳಿಕೊಡ್ತಿದ್ರು. ನನಗೆ ಏನೂ ಹೇಳ್ತಿರಲಿಲ್ಲ. ಹೇಗೋ ನಾನೇ ಟ್ರೈ ಮಾಡಿ ಮಾಡಿದೆ. ಆಮೇಲೆ ಸಿನಿಮಾ ನೋಡಿದ್ಮೇಲೆ ಅಯ್ಯೂ ರಾಮ, ಸಿನಿಮಾದಲ್ಲಿ ಇಷ್ಟೊಂದು ಇದ್ಯಾ'' ಎಂದು ಅನಿಸಿತ್ತಂತೆ.

ಉಪೇಂದ್ರ ಮೇಲೆ ಕೋಪ ಹೆಚ್ಚಿತ್ತು

ಉಪೇಂದ್ರ ಮೇಲೆ ಕೋಪ ಹೆಚ್ಚಿತ್ತು

''ಉಪೇಂದ್ರ ಅವರು ಏನೂ ಹೇಳಿಕೊಡ್ತಿರಲಿಲ್ಲ. ಅವರ ಸಹಾಯಕರಾಗಿದ್ದ ಮುರುಳಿ, ಲೋಕೇಶ್ ಎಲ್ಲರೂ ಸಹಾಯ ಮಾಡ್ತಿದ್ರು. ಉಪೇಂದ್ರ ಅವರ ಮೇಲೆ ಸಿಕ್ಕಾಪಟ್ಟೆ ಕೋಪ ಇತ್ತು'' ಎಂದು ಪ್ರೇಮಾ ಅವರು ವೀಕೆಂಡ್ ವಿತ್ ರಮೇಶ್ ಹೇಳಿಕೊಂಡ್ರು.

ಪ್ರೇಮಾಗೆ ಟಾರ್ಚರ್ ಕೊಟ್ಟಿದ್ವಿ

ಪ್ರೇಮಾಗೆ ಟಾರ್ಚರ್ ಕೊಟ್ಟಿದ್ವಿ

ಇದೇ ಮಾತನ್ನ ಉಪೇಂದ್ರ ಕೂಡ ಹೇಳಿದ್ರು. ''ಪ್ರೇಮಾ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕೋಪ ಇತ್ತು. ಅದನ್ನ ನಮ್ಮ ಸಹಾಯಕರ ಬಳಿ ಹೇಳಿಕೊಂಡಿದ್ರು. ಓಂ ಸಿನಿಮಾ ಆರಂಭದಲ್ಲಿ ನಾನು ಕೂಡ ಅವರಿಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಹೀಗೆ ಮಾಡ್ಬೇಕು, ಹಾಗೆ ಮಾಡ್ಬೇಕು ಅಂತ. ಅದಲ್ಲೆವನ್ನ ಸಹಿಸಿಕೊಂಡು ಮಾಡಿದ್ರು. ಆ ಸಿನಿಮಾ ದೊಡ್ಡ ಹಿಟ್ ಆಯ್ತು'' ಎಂದು ಉಪ್ಪಿ ಕೂಡ ಅದೇ ಹೇಳಿದ್ರು.

More from Filmibeat

English summary
Kannada actress prema was participate in weekend with ramesh 4. she shared experience about kannada super hit movie Om and director upendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X